Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ
- ತಮಿಳುನಾಡು ಸಹಕಾರಿ ಸಂಘಗಳಲ್ಲಿ ಚಿನ್ನ ಅಡ ಇಟ್ಟು ಪಡೆದ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ
- ಅಂದಾಜು 6 ಸಾವಿರ ಕೋಟಿಯಷ್ಟಾಗುತ್ತಿದ್ದು, ಈ ಬಗ್ಗೆ ಸೋಮವಾರ ಸಿಎಂ ಎಂ.ಕೆ.ಸ್ಟಾಲಿನ್ ಆದೇಶ
ಚೆನ್ನೈ (ನ.02): ತಮಿಳುನಾಡು (Tamilnadu) ಸಹಕಾರಿ ಸಂಘಗಳಲ್ಲಿ ಚಿನ್ನ ಅಡ ಇಟ್ಟು ಪಡೆದ ಸಾಲವನ್ನು (Loan) ಸರ್ಕಾರ ಮನ್ನಾ ಮಾಡಿದೆ. ಇದು ಅಂದಾಜು 6 ಸಾವಿರ ಕೋಟಿಯಷ್ಟಾಗುತ್ತಿದ್ದು, ಈ ಬಗ್ಗೆ ಸೋಮವಾರ ಸಿಎಂ ಎಂ.ಕೆ.ಸ್ಟಾಲಿನ್ (MK Stalin) ಆದೇಶ ಹೊರಡಿಸಿದ್ದಾರೆ.
ಗ್ರಾಹಕರ 5 ಗ್ರಾಂವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಉಳಿದ ಮೊತ್ತವಟ್ಟು ಕಟ್ಟಿ ಗ್ರಾಹಕರು ತಮ್ಮ ಆಭರಣ (Jewells) ಬಿಡಿಸಿಕೊಳ್ಳಬಹುದಾಗಿದೆ. ಸರ್ಕಾರದ ಈ ಆದೇಶದಿಂದ ಸುಮಾರು 16 ಲಕ್ಷ ಮಂದಿಗೆ ಅನುಕೂಲವಾಗಲಿದ್ದು, ಫಲಾನುಭವಿಗಳು ರೇಷನ್ ಕಾರ್ಡ್ (Ration Card) ಹೊಂದಿರಬೇಕು. 2021ರ ಮಾರ್ಚ್ 31ರವರೆಗೆ ಚಿನ್ನ ಅಡ ಇಟ್ಟವರು ಇದರ ಫಲಾನುಭವಿಗಳಾಗಿದ್ದು, ಅವರು ಎಷ್ಟೇ ಅಡ ಇಟ್ಟಿದ್ದರೂ ಸರ್ಕಾರ 5 ಗ್ರಾಂ ಮೇಲಿನ ಸಾಲವನ್ನು ಸರ್ಕಾರ ಮನ್ನಾ (Tamilnadu govt) ಮಾಡಲಿದೆ.
ಈ ಬಗ್ಗೆ ಮಾರ್ಗಸೂಚಿ ಕೂಡ ಹೊರಬಿದಿದ್ದು, ಈಗ ಚಿನ್ನದ (Gold) ಸಾಲ ಕೊಡಿಸುತ್ತೇನೆಂದು ವಂಚಿಸುವವರ ಬಗ್ಗೆ ಎಚ್ಚರವಿರಿ ಎಂದೂ ತಿಳಿಸಲಾಗಿದೆ. ಕಳೆದ ಚುನಾವಣೆ ವೇಳೆ ಇದು ಸ್ಟಾಲಿನ್‌ರ ಪ್ರಮುಖ ಭರವಸೆಯಾಗಿತ್ತು.
ಚಿನ್ನಾಭರಣ ಅಡಮಾನಕ್ಕೆ ಶೇ.90ರಷ್ಟು ಸಾಲ
ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಆರ್ಥಿಕತೆಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಹಾಗೂ ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಇನ್ನಷ್ಟು ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿದೆ.
ಕೃಷಿಯೇತರ ಉದ್ದೇಶಗಳಿಗಾಗಿ ಚಿನ್ನ ಮತ್ತು ಚಿನ್ನಾಭರಣಗಳನ್ನು ಒತ್ತೆ ಇಟ್ಟು ಪಡೆಯುವ ಸಾಲದ ಮಿತಿಯನ್ನು ಶೇ.90ಕ್ಕೆ ಏರಿಕೆ ಮಾಡಿದೆ. ಈ ಹಿಂದೆ ಚಿನ್ನದ ಮಾರುಕಟ್ಟೆಮೌಲ್ಯದ ಶೇ.75ರಷ್ಟು ಮಾತ್ರ ಸಾಲ ಸಿಗುತ್ತಿತ್ತು. ಈಗ ಮಾರುಕಟ್ಟೆ ಮೌಲ್ಯಕ್ಕೆ ಸರಿಸಮನಾಗಿ, ಅಂದರೆ ಚಿನ್ನದ ಮೌಲ್ಯದ ಶೇ.90 ರಷ್ಟು ಸಾಲ ನೀಡಬಹುದು ಎಂದು ಮಿತಿ ಏರಿಕೆ ಮಾಡಿದೆ. ಇದು 2021ರ ಮಾರ್ಚ್ 31ರವರೆಗೆ ಅನ್ವಯಿಸಲಿದೆ.
ಬಡ್ಡಿ ದರ ಯಥಾಸ್ಥಿತಿ: ಗುರುವಾರ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸಾಲಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸದೆ ಇರಲು ನಿರ್ಧರಿಸಲಾಗಿದೆ. ಅಂದರೆ, ರೆಪೋ ದರ ಈ ಹಿಂದಿನಂತೆಯೇ ಶೇ.4 ಹಾಗೂ ರಿವರ್ಸ್ ರೆಪೋ ದರ ಶೇ.3.35 ಇರಲಿದೆ. ಈ ವರ್ಷದ ಫೆಬ್ರವರಿ ನಂತರ ಆರ್‌ಬಿಐ ಶೇ.1.15ರಷ್ಟುರೆಪೋ ದರ ಇಳಿಕೆ ಮಾಡಿತ್ತು. ಇದರಿಂದಾಗಿ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರ ಸಾಕಷ್ಟುಇಳಿಕೆಯಾಗಿತ್ತು.
ಮತ್ತೂಟ್ ಉಚಿತ ಕೊಡುಗೆ
ಚಿನ್ನದ ಮೇಲೆ ಸಾಲ ಪಡೆದುಕೊಂಡ ಗ್ರಾಹಕರಿಗೆ ಒಂದು ಲಕ್ಷ ಮೌಲ್ಯದ ಉಚಿತ ಕೋವಿಡ್-19 ವಿಮೆ ನೀಡುವುದಾಗಿ ದೇಶದ ಅತೀ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆ ಮುತ್ತೂಟ್ ಫೈನಾನ್ಸ್ ಘೋಷಿಸಿದೆ. ಇದಕ್ಕಾಗಿ ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಕೋವಿಡ್ ಸಮಯದಲ್ಲಿ ಅನಿಶ್ಚಿತತೆ ಎದುರಿಸುತ್ತಿರುವ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿದೆ ಎಂದು ಮುತ್ತೂಟ್ ಹೇಳಿದೆ.
ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!...
ಮುತ್ತೂಟ್ ಸೂಪರ್ ಲೋನ್ (ಎಂಎಸ್‌ಎಲ್) ಯೋಜನೆಯಡಿ ಬಂಗಾರ ಅಡವಿಟ್ಟು ಸಾಲ ಪಡೆದುಕೊಳ್ಳುವ ಗ್ರಾಹಕರಿಗೆ ಈ ಯೋಜನೆ ಲಭ್ಯವಿದೆ. ಒಂದು ಗ್ರಾಂ ಚಿನ್ನಕ್ಕೆ ಅತೀ ಹೆಚ್ಚಿನ ಸಾಲ ಸೌಲಭ್ಯದ ಜತೆಗೆ ಒಂದು ಲಕ್ಷ ಮೌಲ್ಯದ ಕೋವಿಡ್-19 ವಿಮೆ ಉಚಿತವಾಗಿ ಸಿಗಲಿದೆ ಎಂದು ಮುತ್ತೂಟ್ ಘೋಷಿಸಿದೆ.
ಆತ್ಮ ನಿರ್ಭರ ಭಾರತಕ್ಕೆ ಮುನ್ನುಡಿ ಬರೆದ ಮಲೆನಾಡ ಯುವಕ ಭಾರದ್ವಾಜ್ ಕಾರಂತ್
ಈ ಬಗ್ಗೆ ಮಾತನಾಡಿದ ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಾಜ್‌ರ್ ಅಲೆಂಗ್ಸಾಡರ್ ಮುತ್ತೂಟ್, ‘ಜನರಿಗೆ ನೆರವಾಗುವ ಮತ್ತು ಸಮಾಜಕ್ಕೆ ಪ್ರತಿಯಾಗಿ ನೀಡುವ ಸಿದ್ಧಾಂತದಲ್ಲಿ ನಮ್ಮ ಕಂಪನಿ ಸದಾ ನಂಬಿಕೆ ಇಟ್ಟುಕೊಂಡಿದೆ. ನಮ್ಮ ಗ್ರಾಹಕ ನಿಷ್ಠೆ ಹಾಗೂ ಸಾಮಾಜಿಕ ಬದ್ಧತೆಯ ಮುಂದುವರಿದ ಭಾಗವಾಗಿ, ಜನರು ನಿರ್ಭೀತಿಯಿಂದ ಜೀವನ ಸಾಗಿಸಲು ವಿಮೆಯನ್ನು ಗ್ರಾಹಕರಿಗೆ ಕೊಡಿಗೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಬಹುವಾಹಿನಿ ವಿತರಣಾ ವಿಭಾಗದ ಮುಖ್ಯಸ್ಥ ಜಗಜೀತ್ ಸಿಂಗ್ ಸಿಧು, ಮುತ್ತೂಟ್‌ನಂಥ ವಿಶ್ವಾಸಾರ್ಹ ಬ್ರಾಂಡ್ ಜತೆ ಪಾಲುದಾರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತಿದೆ ಎಂದರು.
- ತಮಿಳುನಾಡು ಸಹಕಾರಿ ಸಂಘಗಳಲ್ಲಿ ಚಿನ್ನ ಅಡ ಇಟ್ಟು ಪಡೆದ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ
- ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ
- ಗ್ರಾಹಕರ 5 ಗ್ರಾಂವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಉಳಿದ ಮೊತ್ತವಟ್ಟು ಕಟ್ಟಿಗ್ರಾಹಕರು ತಮ್ಮ ಆಭರಣ ಬಿಡಿಸಿಕೊಳ್ಳಬಹುದಾಗಿದೆ
- ಸರ್ಕಾರದ ಈ ಆದೇಶದಿಂದ ಸುಮಾರು 16 ಲಕ್ಷ ಮಂದಿಗೆ ಅನುಕೂಲ