ಅಲೆಲೆ... ಈ ಪುಟ್ಟ ಹಕ್ಕಿ ಸ್ಮೋಕ್ ಮಾಡ್ತಿದ್ಯಾ... ವಿಡಿಯೋ ನೋಡಿ
ಇಲ್ಲೊಂದು ಪುಟಾಣಿ ಹಕ್ಕಿ ಬಾಯಿಯಿಂದ ಹೊಗೆ ಬರಿಸ್ತಿದೆ. ನೋಡುವುದಕ್ಕೆ ಸಿಗರೇಟ್ ಎಳೆದಂತೆ ಕಾಣಿಸ್ತಿರುವ ಈ ದೃಶ್ಯ ಅಚ್ಚರಿ ಏನಿಸಿದ್ರು ಸತ್ಯ.
ಈ ಪ್ರಕೃತಿ ಒಂದು ವಿಸ್ಮಯ ಜಗತ್ತು. ಇಲ್ಲಿನ ಪ್ರತಿಯೊಂದು ಸೃಷ್ಟಿಯೂ ಅಚ್ಚರಿ ಅದ್ಭುತಗಳಿಂದ ಕೂಡಿದ್ದು, ಒಂದೊಂದು ಜೀವಿಯ ಚಟುವಟಿಕೆಯೂ ಒಂದಕ್ಕಿಂತ ಒಂದು ಭಿನ್ನ ಒಂದಕ್ಕಿಂತ ಒಂದು ಸೊಗಸು. ಹಕ್ಕಿಗಳ ಲೋಕವನ್ನೇ ತೆಗೆದುಕೊಳ್ಳೋಣ. ದೇಶ ಭಾಷೆ ಪ್ರಾದೇಶಿಕ ವೈವಿಧ್ಯತೆಗೆ ತಕ್ಕುದಾದ ಭಿನ್ನ ವಿಭಿನ್ನವಾದ ಸಾವಿರಾರು ಹಕ್ಕಿಗಳನ್ನು ಅವುಗಳ ಚಟುವಟಿಕೆಗಳನ್ನು ಕಾಣಬಹುದು. ಕ್ಷಣಕ್ಕೊಂದು ಬಣ್ಣ ಬದಲಿಸುವ ಹಕ್ಕಿಯಿಂದ ಹಿಡಿದು ಸೊಗಸಾಗಿ ಉಲಿಯುವ ಚಿಲಿಪಿಲಿ ಗುಟ್ಟುವ ಸಾಮಾನ್ಯ ಹಕ್ಕಿಗಳವರೆಗೂ ಎಲ್ಲವೂ ಚೆಂದಕ್ಕಿಂತ ಚೆಂದ. ಹಾಗೆಯೇ ಅವುಗಳ ಚಟುವಟಿಕೆಗಳು ನಮ್ಮನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ. ಇಷ್ಟೆಲ್ಲಾ ಪೀಠಿಕೆ ಏಕೆ ಅಂತೀರಾ ಇಲ್ಲೊಂದು ಪುಟಾಣಿ ಹಕ್ಕಿ ಬಾಯಿಯಿಂದ ಹೊಗೆ ಬರಿಸ್ತಿದೆ. ನೋಡುವುದಕ್ಕೆ ಸಿಗರೇಟ್ ಎಳೆದಂತೆ ಕಾಣಿಸ್ತಿರುವ ಈ ದೃಶ್ಯ ಅಚ್ಚರಿ ಏನಿಸಿದ್ರು ಸತ್ಯ.
ಇದೇನು ಹಕ್ಕಿ ಸಿಗರೇಟ್ (cigarette) ಸೇದೋಕೆ ಶುರು ಮಾಡ್ತಾ ಅಂತ ನೋಡುಗರು ಅಚ್ಚರಿಗೊಳಗಾಗುವಂತೆ ಮಾಡ್ತಿದೆ ಈ ಪುಟ್ಟ ಹಕ್ಕಿ, ದೇಹಪೂರ್ತಿ ಬಿಳಿ ಇದ್ದರೆ ಕೊಕ್ಕಿನಿಂದ ಕೆಳಭಾಗ ಹಸಿರು ಬಣ್ಣದಿಂದ ಕೂಡಿದ್ದು, ಹಸಿರು ಬಿಳಿಯ ಬಣ್ಣದ ಸಂಯೋಜನೆಯಲ್ಲಿ ಈ ಹಕ್ಕಿ ಮತ್ತಷ್ಟು ಮುದ್ದಾಗಿ ಕಾಣುತ್ತಿದೆ. ಆದರಲ್ಲೂ ಅದು ಬಾಯಿ ತೆರೆದು ಹೊಗೆ ಹೊರ ಹಾಕುತ್ತಿರೋದು ನೋಡಿದ್ರೆ ಒಮ್ಮೆಗೆ ನಗುವಿನ ಜೊತೆ ಹಕ್ಕಿನೂ ಸ್ಮೋಕಿಂಗ್ (Smoking) ಶುರು ಮಾಡ್ತಾ ಅಂತ ನೀವು ಮೂಗಿನ ಮೇಲೆ ಬೆರಳಿಡೋದು ಪಕ್ಕಾ.
ಈ ವಿಡಿಯೋವನ್ನು ಭಾರತೀಯ ರೈಲ್ವೆಯಲ್ಲಿ (Indian Rilway)ಹಿರಿಯ ಅಧಿಕಾರಿಯಾಗಿರುವ ಅನಂತ ರೂಪನಗುಡಿ (Ananth Rupanagudi) ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಸ್ಮೋಕಿಂಗ್ ಬರ್ಡ್ ಎಂದು ಸಾಮಾನ್ಯವಾಗಿ ಕರೆಯುತ್ತಾರೆ ಇದೊಂದು ಅಚ್ಚರಿಯೇ ಸರಿ ಎಂದು ಬರೆದುಕೊಂಡು ಅವರು ಈ ಹಕ್ಕಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ಹೊಗೆ ಬಿಡುವ ಮುನ್ನ ಹಲವು ಬಾರಿ ಧ್ವನಿ ತೆಗೆದು ಕೂಗುತ್ತದೆ. ನಾಲ್ಕು ಬಾರಿ ಕೂಗಿ ಐದನೇ ಬಾರಿಗೆ ಹೊಗೆ ಬಿಡುತ್ತದೆ. ವಿಡಿಯೋ ನೋಡದ ಹೊರತು ಇದನ್ನು ನಂಬಲು ಸಾಧ್ಯವಿಲ್ಲ.
ಹಾರೋ ನವಿಲ ನೋಡಿದಿರೆ... ಮಯೂರಿಯ ಮನ ಸೆಳೆಯೋ ವಿಡಿಯೋ
ಇನ್ನು ಈ ವಿಡಿಯೋ ನೋಡಿದ ಅನೇಕರು ಈ ಹಕ್ಕಿಯ ಮೂಲಸ್ಥಾನ ಯಾವುದು ಎಂದು ಪ್ರಶ್ನಿಸಿದ್ದಾರೆ. ಇಂತಹ ಹಕ್ಕಿಗಳು ನಗರಪ್ರದೇಶದಲ್ಲಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ಅವುಗಳ ಚಿಲಿಪಿಲಿ ನಾದದೊಂದಿಗೆ ಬೆಳಗ್ಗೆ ಎದ್ದೇಳಬಹುದು ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಹಕ್ಕಿಯ ಈ ಚಟುವಟಿಕೆ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
Birds Fall From Sky ಹಾರಾಡುತ್ತಿದ್ದ ಸಾವಿರಾರು ಹಕ್ಕಿಗಳು ದಿಢೀರ್ ನೆಲಕ್ಕೆ ಬಿದ್ದು ಸಾವು, ಸಿಸಿಟಿಯಲ್ಲಿ ಸೆರೆಯಾಯ್ತು ವಿಡಿಯೋ