Asianet Suvarna News Asianet Suvarna News

ಹಾರೋ ನವಿಲ ನೋಡಿದಿರೆ... ಮಯೂರಿಯ ಮನ ಸೆಳೆಯೋ ವಿಡಿಯೋ

ಹಕ್ಕಿಗಳು ಹಾರೋದು ಸಾಮಾನ್ಯ. ಆದರೆ ನವಿಲುಗಳು ಜಾಸ್ತಿ ಎತ್ತರದಲ್ಲಿ ಹಾರೋದು ತೀರಾ ಕಡಿಮೆ ಅಥವಾ ಅಂತ ದೃಶ್ಯ ನಮಗೆ ನೋಡಲು ಸಿಕ್ಕಿದ್ದು ತೀರಾ ವಿರಳ. ಹೀಗಾಗಿಯೇ ನವಿಲೊಂದು ಎತ್ತರದಲ್ಲಿ ಹಾರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

flying peacock video goes viral in social media akb
Author
Bangalore, First Published Jun 22, 2022, 2:12 PM IST

ಹಕ್ಕಿಗಳು ಹಾರೋದು ಸಾಮಾನ್ಯ. ಆದರೆ ನವಿಲುಗಳು ಜಾಸ್ತಿ ಎತ್ತರದಲ್ಲಿ ಹಾರೋದು ತೀರಾ ಕಡಿಮೆ ಅಥವಾ ಅಂತ ದೃಶ್ಯ ನಮಗೆ ನೋಡಲು ಸಿಕ್ಕಿದ್ದು ತೀರಾ ವಿರಳ. ಹೀಗಾಗಿಯೇ ನವಿಲೊಂದು ಎತ್ತರದಲ್ಲಿ ಹಾರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. 3 ಮಿಲಿಯನ್ ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಸಾಮಾನ್ಯವಾಗಿ ನವಿಲುಗಳು ಗರಿ ಗೆದರಿ ನೃತ್ಯ ಮಾಡುವುದನ್ನು ಬಹುತೇಕರು ನೋಡಿರಬಹುದು. ರಾಷ್ಟ್ರ ಪಕ್ಷಿಯಾದ ನವಿಲುಗಳು ಇಲ್ಲಿ ಹೆಗ್ಗಣ ಹಾವುಗಳನ್ನು ಆಹಾರವಾಗಿ ತಿನ್ನುತ್ತವೆ. ಇದೇ ಕಾರಣಕ್ಕೆ ನವಿಲುಗಳು ಹೆಚ್ಚಾಗಿ ನೆಲದೆತ್ತರದಲ್ಲಿ ವಾಸ ಮಾಡುತ್ತಾ ಸಾಧಾರಣವಾದ ಎತ್ತರವರೆಗೆ ಮಾತ್ರ ಹಾರುವುದನ್ನು ನಾವು ನೋಡಿದ್ದೇವೆ. ಆದರೆ ಈ ವಿಡಿಯೋದಲ್ಲಿ ನವಿಲು ಮರದೆತ್ತರದಲ್ಲಿ ಹಾರುತ್ತಿದೆ. ಆದರೆ ಈ ವಿಡಿಯೋವನ್ನು ಎಲ್ಲಿ ಯಾವಾಗ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜೂನ್ 20 ರಂದು ಬಿಟ್ಟಿಂಗ್ಬಿಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಕೆಲ ದಿನಗಳ ಹಿಂದೆ ಪ್ರತಿಮೆಯ ಮೇಲಿಂದ ಹುಲ್ಲಿಗೆ ಶ್ವೇತ ವರ್ಣದ ನವಿಲೊಂದು ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಟಲಿಯ (Italy) ಸ್ಟ್ರೆಸಾ (Stresa) ಬಳಿಯ ಮ್ಯಾಗಿಯೋರ್ (Maggiore Lake) ಸರೋವರದಲ್ಲಿರುವ ಬೊರೊಮಿಯನ್ ದ್ವೀಪಗಳಲ್ಲಿ (Borromean islands) ಒಂದಾದ ಐಸೊಲಾ ಬೆಲ್ಲಾದ (Isola Bella) ಸುಂದರವಾದ ಉದ್ಯಾನದಲ್ಲಿ ಈ ವೀಡಿಯೊ ಸೆರೆ ಆಗಿದೆ. ಇಲ್ಲಿನ ತೋಟಗಳಲ್ಲಿ ಬಿಳಿ ಮತ್ತು ಬಣ್ಣದ ನವಿಲುಗಳು ಮುಕ್ತವಾಗಿ ವಾಸಿಸುತ್ತವೆ. ಬೊರೊಮಿಯೊ ದ್ವೀಪಗಳು ತಮ್ಮ ಮನಮೋಹಕ ಸೌಂದರ್ಯದಿಂದ ಎಲ್ಲರನ್ನು ಸೆಳೆಯುವ ಸರೋವರದ ಮಧ್ಯಭಾಗದಲ್ಲಿರುವ ಪುಟ್ಟ ಸ್ವರ್ಗವಾಗಿದೆ.

ರಾಷ್ಟ್ರ ರಾಜಧಾನಿಗೆ ಬಂದ ರಾಷ್ಟ್ರ ಪಕ್ಷಿ: ನವಿಲು ನೋಡಿ ಬೆರಗಾದ ದೆಹಲಿಗರು

ಈ ವೀಡಿಯೊವನ್ನು ಟ್ವಿಟರ್‌ನಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 21,000 ಕ್ಕೂ ಹೆಚ್ಚು ಲೈಕ್ಸ್  ಬಂದಿದೆ. ನೋಡುಗರು ಕೂಡ ಈ ಅಪರೂಪದ ಶ್ವೇತ ನವಿಲನ್ನು ಮೆಚ್ಚಿಕೊಂಡಿದ್ದು, ಕಾಮೆಂಟ್ ಮಾಡಿದ್ದಾರೆ. ನಾನು ಸುಮಾರು 10 ವರ್ಷಗಳ ಹಿಂದೆ ಬಿಳಿ ನವಿಲನ್ನು ನೋಡಿದ ನೆನಪಿದೆ. ಆದರೂ ಹಾರುವುದನ್ನು ನೋಡಿಲ್ಲ. ಇದು ಸುಂದರವಾಗಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಿಳಿ ನವಿಲುಗಳು ಲ್ಯೂಸಿಸಮ್ ಜೀನ್ ರೂಪಾಂತರದೊಂದಿಗೆ ನೀಲಿ ನವಿಲುಗಳ ಅಸಾಮಾನ್ಯ ಉಪ-ಜಾತಿಗಳಾಗಿವೆ. ಬಿಳಿ ಬಣ್ಣದಲ್ಲಿರುವ ನವಿಲುಗಳು ಹಳದಿಯಾಗಿ ಹುಟ್ಟುತ್ತವೆ ಮತ್ತು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಪೈಡ್ ನವಿಲುಗಳಲ್ಲಿ ಭಾಗಶಃ ಗರಿಗೆದರುವ ಪ್ರಕ್ರಿಯೆ ಸಂಭವಿಸುತ್ತದೆ, ಇದರ ಪರಿಣಾಮವಾಗಿ ಇದರ ಬಣ್ಣ ನಷ್ಟವಾಗುತ್ತದೆ.

ನೀರುಮಾರ್ಗ ದೇವಸ್ಥಾನದಲ್ಲಿ ಭಕ್ತರಿಗೆ ‘ಮಯೂರ’ ದರ್ಶನ!

ನವಿಲುಗಳು ವಿಶ್ವದ ಅತ್ಯಂತ ಸುಂದರವಾದ ಪಕ್ಷಿಗಳಲ್ಲಿ ಒಂದು. ತಮ್ಮ ವರ್ಣ ವೈವಿಧ್ಯದ ಗರಿಗಳು, ಫ್ಯಾನ್ ಆಕಾರದ ಬಾಲ ಮತ್ತು ಪ್ರತಿ ರೆಕ್ಕೆಯ ಮೇಲೆ ಗರಿಗಳ ಸುಂದರ ಚಿತ್ರಣದಿಂದ ಎಲ್ಲರ ಗಮನ ಸೆಳೆಯುವ ನವಿಲುಗಳು ನಮ್ಮ ದೇಶದ ರಾಷ್ಟ್ರಪಕ್ಷಿಯೂ ಹೌದು. 

ಕೊಪ್ಪಳ ಜಿಲ್ಲೆಯಲ್ಲಿವೆ ಅಪಾರ ವನ್ಯಜೀವಿ(Wildlife) ಸಂಪತ್ತು ಇದ್ದು, ಅಪರೂಪದ ಪ್ರಾಣಿಗಳು, ವಿಶಿಷ್ಟ ಜಲಚರ, ಪಕ್ಷಿಗಳಿವೆ. ಅದಕ್ಕಿಂತ ಮಿಗಿಲಾಗಿ ರಾಷ್ಟ್ರೀಯ ಪಕ್ಷಿ ನವಿಲುಗಳು ಸಾವಿರಾರು ಸಂಖ್ಯೆಯಲ್ಲಿವೆ. ಬಯಲು ಸೀಮೆಯಾಗಿದ್ದರೂ ಕುರುಚಲು ಕಾಡು ಮತ್ತು ತುಂಗಭದ್ರಾ ನದಿಯುದ್ದಕ್ಕೂ(Tungabhadra River) ಕಾಡು ಇರುವುದರಿಂದ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತು ಜಿಲ್ಲೆಯಲ್ಲಿದೆ. ಅವುಗಳನ್ನು ಸಂರಕ್ಷಣೆ ಮಾಡುವುದು ತೀರಾ ಅಗತ್ಯ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿ, ಪಕ್ಷಿಗಳು ಇದ್ದು, ಅವುಗಳ ಸಂತಾನ ವೃದ್ಧಿಗೆ ಸೂಕ್ತ ವಾತಾವರಣ ನಿರ್ಮಾಣವಾಗಬೇಕಿದೆ.

Follow Us:
Download App:
  • android
  • ios