Birds Fall From Sky ಹಾರಾಡುತ್ತಿದ್ದ ಸಾವಿರಾರು ಹಕ್ಕಿಗಳು ದಿಢೀರ್ ನೆಲಕ್ಕೆ ಬಿದ್ದು ಸಾವು, ಸಿಸಿಟಿಯಲ್ಲಿ ಸೆರೆಯಾಯ್ತು ವಿಡಿಯೋ
- ಸ್ವಚ್ಚಂದವಾಗಿ ಹಾರಾಡುತ್ತಿದ್ದ ಹಳದಿ, ಕಪ್ಪು ಬಣ್ಣದ ಹಕ್ಕಿಗಳು
- ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದು ನೂರೂರು ಹಕ್ಕಿಗಳು ಸಾವು
- ಸೆಕ್ಯೂರಿಟಿ ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಡಿಯೋ
ಮೆಕ್ಸಿಕೋ(ಫೆ.16): ಗುಂಪು ಗುಂಪಾಗಿ ಆಗಸದಲ್ಲಿ ವಿಹರಿಸುವ ಹಕ್ಕಿಗಳು ಕಣ್ಣಿಗೆ. ಹೀಗೆ ಹಾರಾಡುತ್ತಿದ್ದ ಹಳದಿ ಹಾಗೂ ಕಪ್ಪು ಬಣ್ಣ ಮಿಶ್ರಿತ(yellow-headed blackbirds) ಸಾವಿರಾರು ಹಕ್ಕಿಗಳ ಗುಂಪು ದಿಢೀರ್ ನೆಲಕ್ಕೆ ಬಿದ್ದು ಸಾವನ್ನಪ್ಪಿದ(death) ಘಟನೆ ಮೆಕ್ಸಿಕೋದ (Mexico)ಚಿಹೋವಾ ನಗರದಲ್ಲಿ ಸಂಭವಿಸಿದೆ. ಇದಕ್ಕಿದ್ದಂತೆ ಹಕ್ಕಿಗಳು ಆಗಸದಿಂದ ನೆಲಕ್ಕುರುಳುತ್ತಿರುವ ವಿಡಿಯೋ ಪಕ್ಕದ ಕಟ್ಟದಲ್ಲಿ ಅಳವಿಡಿಸಿದ್ದ ಭದ್ರತಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಫೆಬ್ರವರಿ 7 ರಂದು ಚಿಹೋವಾ ನಗರದಲ್ಲಿ ನಡೆದ ಈ ಘಟನೆಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನಲ್ಲೇ ಹಲವು ಚರ್ಚೆಗಳು ನಡೆಯುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ಹಿಂಡು ನೇರವಾಗಿ ಕೆಳಮುಖವಾಗಿ ಹಾರಾಟ ನಡೆಸಿದೆ. ಬಳಿಕ ನೂರಾರು ಹಕ್ಕಿಗಳು ನೆಲಕ್ಕೆ ಬಿದ್ದು ಸಾವನ್ನಪ್ಪಿದ. ಹಕ್ಕಿಗಳು ನೆಲದಲ್ಲಿ ಬಿದ್ದಿರುವ ದೃಶ್ಯಗಳ ಈ ವೈರಲ್ ವಿಡಿಯೋದಲ್ಲಿದೆ.
ಹಕ್ಕಿಗಳ ಉಳಿವಿಗೆ 2 ಲಕ್ಷಕ್ಕೂ ಅಧಿಕ ಗೂಡು ಕಟ್ಟಿದ Nest Man
ಸ್ಥಳೀಯ ಎಲ್ ಹೆರಾಲ್ಡೋ ಪತ್ರಿಕೆ ಹಕ್ಕಿಗಳ ಸಾವಿಗೆ ತಜ್ಞರು, ಪರಿಸರ ಸಂಶೋಧನಕಾರರು ಹಾಗೂ ವೈದ್ಯರನ್ನು ಸಂಪರ್ಕಿಸಿ ಕಾರಣ ಹುಡುಕುವ ಪ್ರಯತ್ನ ಮಾಡಿದೆ. ಈ ಹುಡುಕಾಟದಲ್ಲಿ ಹಲವು ಭಯಾನಕ ಮಾಹಿತಿಗಳು ಹೊರಬಿದ್ದಿದೆ. ಹಲವು ತಜ್ಞರ ಪ್ರಕಾರ ಹಕ್ಕಿಗಳು ಈ ರೀತಿ ದಿಢೀರ್ ನೆಲಕ್ಕುರಳಲು 5ಜಿ ತರಂಗಾಂತರ(5G Network) ಅಳವಡಿಕೆ ನೇರ ಕಾರಣ ಎಂದು ಹೇಳಿದ್ದಾರೆ.
ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿಗಳು ಮೊಬೈಲ್ ನೆಟ್‌ವರ್ಕ್‌ನಿಂದ ಅಳಿದು ಹೋಗಿದೆ. ಇದೀಗ ಮತ್ತಷ್ಟು ಪ್ರಬಲ 5ಜಿ ನೆಟ್‌ವರ್ಕ್ ಈ ಹಕ್ಕಿಗಳ ಮಾರಣಹೋಮಕ್ಕೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಚಿಹೋವಾ ನಗರದ ಸ್ಥಳೀಯ ತಜ್ಞರು ಬೇರೆ ಕಾರಣ ನೀಡಿದ್ದಾರೆ ಚಿಹೋವಾದಲ್ಲಿ ಮರಗಳನ್ನು ಸುಡಲು ಹೀಟರ್‌ಗಳನ್ನು ಬಳಸಲಾಗುತ್ತಿದೆ. ಕೃಷಿ ರಾಸಾಯನಿಕಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ವಾತಾವರಣ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದರ ಜೊತೆಗೆ ಶೀತಲ ವಾತಾವರಣವಿದೆ. ಹಕ್ಕಿಗಳು ವಾಸಿಸುವ ಪ್ರತಿಕೂಲ ವಾತಾವರಣ ಇಲ್ಲದಾಗಿದೆ. ಹೀಗಾಗಿ ಈ ಹಕ್ಕಿಗಳು ದಿಢೀರ್ ನೆಲಕ್ಕೆ ಬಿದ್ದು ಸಾಯುತ್ತಿದೆ ಎಂದಿದ್ದಾರೆ.
Spain: ಆಗಸದಿಂದ ಏಕಾಏಕಿ ಬಿದ್ದ 200 ಮೃತ ಪಕ್ಷಿಗಳು, ಈ ನಿಗೂಢ ಘಟನೆಗೆ ಕಾರಣ ಇದೇನಾ?
ಅಮೆರಿಕದ ಪಶುವೈದ್ಯರ ಮಾತುಗಳನ್ನು ಯುಎಸ್ಎ ಟುಡೆ ವರದಿ ಮಾಡಿದೆ. ಈ ವರದಿಯಲ್ಲಿ ಹಕ್ಕಿಗಳು ವಿಷಕಾರಾಕ ಗಾಳಿಯನ್ನು ಸೇವನೆ ಮಾಡುತ್ತಿದ್ದರೆ ಈ ರೀತಿ ಸಂಭವಿಸಲಿದೆ. ಹಕ್ಕಿಗಳು ಬಹಳ ಸೂಕ್ಷ್ಮ. ವಾತಾವರಣದ ಸಣ್ಣ ಬದಲಾವಣೆ ಹಲವು ಹಕ್ಕಿಗಳನ್ನು ಸರ್ವನಾಶ ಮಾಡಲಿದೆ. ಇನ್ನು ವಿದ್ಯುತ್ ತಂತಿಗಳ ಮೇಲೆ ಕುಳಿತು ಹಾರಿದಾಗಲು ಈ ರೀತಿ ಆಗಲಿದೆ. ಪರಿಸರಕ್ಕೆ ವಿರುದ್ಧವಾದ ಅಭಿವೃದ್ಧಿಗಳು ಇದಕ್ಕೆ ನೇರ ಕಾರಣವಾಗಲಿದೆ ಎಂದಿದ್ದಾರೆ.
"
ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಇದೀಗ ಭಾರತದಲ್ಲಿ ಚರ್ಚೆಯಾಗುತ್ತಿದೆ. ಕಾರಣ ಈ ಹಕ್ಕಿಗಳ ಸಾವಿಗೆ 5ಜಿ ನೆಟ್‌ವರ್ಕ್ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ. ಭಾರತದಲ್ಲಿ 5ಜಿ ತರಂಗಾಂತರ ಅಳವಡಿಕೆ ಕುರಿತು ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹಲವು ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು 5ಜಿ ವಿರೋಧಿಸುತ್ತಿದೆ. ಇದೀಗ ಭಾರತದಲ್ಲಿ 5ಜಿ ನೆಟ್‌ವರ್ಕ್ ಸಂಪೂರ್ಣವಾದರೆ ಇಲ್ಲಿನ ಹಕ್ಕಿಗಳು ಅಳಿದು ಹೋಗಲಿದೆ ಅನ್ನೋ ಚರ್ಚೆ ಜೋರಾಗಿದೆ.
ಇಂದು ಗುಬ್ಬಚ್ಚಿ ದಿನ..! ಚಿಲಿಪಿಗುಟ್ಟುತ್ತಿದ್ದ ಪುಟ್ಟ ಹಕ್ಕಿಗಳು ಎಲ್ಲಿ ಹೋದವು..?
ಈ ವೈರಲ್ ವಿಡಿಯೋ ಇದೀಗ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಹಕ್ಕಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನೆಲಕ್ಕೆ ಬಿದ್ದ ಸುಮಾರು 100ಕ್ಕೂ ಹೆಚ್ಚು ಹಕ್ಕಿಗಳನ್ನು ಪೊಲೀಸರು ತೆಗೆದಿದ್ದಾರೆ. ಇನ್ನು ಸಾವಿನ ಕಾರಣ ತಿಳಿಯಲು ಪರೀಕ್ಷೆಗಳು ನಡೆಯುತ್ತಿದೆ. ಈ ವರದಿದಾಗಿ ಇದೀಗ ವಿಶ್ವವೇ ಕಾಯುತ್ತಿದೆ.