ಕುಟುಂಬಸ್ಥರ ಸಮ್ಮುಖದಲ್ಲಿ ವೇದ ಮಂತ್ರಗಳೊಂದಿಗೆ ಸೇನಾಧಿಕಾರಿಗೆ ಬಡ್ತಿ ನೀಡುವ ವಿಡಿಯೋ ವೈರಲ್ ಆಗಿದೆ. ಲೆಫ್ಟಿನೆಂಟ್ ಕರ್ನಲ್ ನ್ಗಜುಮ್ ರಿದಾ ಜಿಲೆನ್ ಅವರಿಗೆ ಪತ್ನಿ ಮತ್ತು ಮಗಳ ಸಮ್ಮುಖದಲ್ಲಿ ಬಡ್ತಿ ನೀಡಲಾಗಿದೆ.
ನವದೆಹಲಿ: ವೇದ ಮಂತ್ರ ಪಠಿಸುತ್ತಾ ಕುಟುಂಬಸ್ಥರ ಸಮ್ಮುಖದಲ್ಲಿ ಸೇನಾಧಿಕಾರಿಗೆ ಬಡ್ತಿ ನೀಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಖುಷಿಯಾಗುತ್ತೆ ಎಂದು ಬರೆದುಕೊಳ್ಳುತ್ತಾ ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಪತ್ನಿ ಮತ್ತು ಮಗಳ ಸಮ್ಮುಖದಲ್ಲಿ ಬಡ್ತಿ ಗೌರವ ಸ್ವೀಕರಿಸುವುದು ಅತ್ಯಂತ ಹೆಮ್ಮೆಯ ಕ್ಷಣವಾಗುತ್ತದೆ. ಸಾಮಾನ್ಯ ಉದ್ಯೋಗದಲ್ಲಿದ್ದವರು ಕುಟುಂಬಸ್ಥರೊಂದಿಗೆ ತಮ್ಮ ವೃತ್ತಿ ಜೀವನದ ಪ್ರತಿಯೊಂದು ಕ್ಷಣವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದ್ರೆ ಸೇನೆಯಲ್ಲಿರುವ ಸೈನಿಕರು ಕುಟುಂಬದಿಂದ ದೂರವಿರುತ್ತಾರೆ. ಹೀಗಿರುವಾಗ ಕುಟುಂಬದ ಸಮ್ಮುಖದಲ್ಲಿ ಪದನ್ನೋತಿ ಹೊಂದುವುದು ಓರ್ವ ಸೈನಿಕನಿಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿರುತ್ತದೆ.
ಈ ವಿಡಿಯೋವನ್ನು ವಿವಿಧ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪತ್ರಕರ್ತ ರಾಜನಾಥ್ ಝಾ ಎಂಬವರು ಎರಡು ಕಾರಣಗಳಿಂದ ಈ ವಿಡಿಯೋ ನೋಡಲು ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ನ್ಗಜುಮ್ ರಿದಾ ಜಿಲೆನ್ ಅವರಿಗೆ ಬಡ್ತಿ ನೀಡಲಾಗಿದೆ. ಇದಕ್ಕಾಗಿ ಒಂದು ಸಣ್ಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಕರ್ನಲ್ ನ್ಗಜುಮ್ ರಿದಾ ಜಿಲೆನ್ ಅವರಿಗೆ ಪತ್ನಿ ಮತ್ತು ಮಕ್ಕಳ ಮುಂದೆಯೇ ಶ್ರೇಣಿಯ ಲಾಂಛನ ಧರಿಸಲಾಗುತ್ತದೆ. ಇದು ಯಾವುದೇ ವ್ಯಕ್ತಿಗೂ ಹೆಮ್ಮೆಯ ವಿಷಯವಾಗಿದೆ.
ಪದನ್ನೋತಿಯ ಲಾಂಛನ ಇಡುವಾ ಸ್ವಸ್ತಿ ವಚನ ಮತ್ತು ಮಂಗಳಾಚರಣೆಯನ್ನು ಪಠಿಸಲಾಗುತ್ತಿತ್ತು. ಈ ಮಂತ್ರಪಠಣೆಯನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಕರ್ನಲ್ ಜಿಲೆನ್ ಅವರಿಗೆ ಏಪ್ರಿಲ್ 13, 2025ರಂದು ಬಡ್ತಿಯನ್ನು ನೀಡಲಾಗಿತ್ತು. ಬಡ್ತಿ ಗೌರವ ನೀಡಲು ಚಿಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕರ್ನಲ್ ನ್ಗಜುಮ್ ರಿದಾ ಜಿಲೆನ್ ಅವರ ಕುಟುಂಬವನ್ನು ಆಹ್ವಾನಿಸಲಾಗಿತ್ತು. ಏಪ್ರಿಲ್ ಕಾರ್ಯಕ್ರಮದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಲೆಫ್ಟಿನೆಂಟ್ ಕರ್ನಲ್ ನ್ಗಜುಮ್ ರಿದಾ ಜಿಲೆನ್ ಅವರ ಬಲಭಾಗದಲ್ಲಿ ಮಹಿಳಾ ಸೇನಾಧಿಕಾರಿ ಮತ್ತು ಎಡಭಾಗದಲ್ಲಿ ಅವರ ಪತ್ನಿ ನಿಂತು ಲಾಂಛನ ಅಳವಡಿಕೆ ಮಾಡುತ್ತಾರೆ. ಅಲ್ಲಿದ್ದ ವ್ಯಕ್ತಿಯೊಬ್ಬರು ನಾರಿ ಶಕ್ತಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಕರ್ನಲ್ ಖುರೇಶಿ, ವ್ಯೋಮಿಕಾ ಸುದ್ದಿಗೋಷ್ಠಿ ‘ಬೂಟಾಟಿಕೆ’ ಎಂದ ಪ್ರೊಫೆಸರ್ ಅರೆಸ್ಟ್
ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಿರಂಗ ಯಾತ್ರೆ ಪಹಲ್ಗಾಂನಲ್ಲಿ ನಮ್ಮ ಸಹೋದರಿಯರ ಸಿಂದೂರ ಕಸಿದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ ಮುಖಾಂತರ ಉಗ್ರರ ನೆಲೆಗಳನ್ನು ಹಾಗೂ ಅವರ ಪೋಷಕ ಪಾಕಿಸ್ತಾನದ ಸೇನಾ ನೆಲೆಗಳನ್ನು ನಾಶಪಡಿಸಿ ವಿಶ್ವಕ್ಕೆ ಭಾರತದ ಸೈನ್ಯ ಶಕ್ತಿಯನ್ನು ತೋರಿಸಿದ ಸೈನಿಕರಿಗೆ ಗೌರವಾರ್ಥವಾಗಿ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಿರಂಗ ಯಾತ್ರೆ ನಡೆಸಲಾಗುತ್ತಿದೆ. ಇತ್ತ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದ್ದರಿಂದ ರಜೆಯಲ್ಲಿದ್ದ ಸೈನಿಕರಿಗೆ ಹಿಂದಿರುಗುವಂತೆ ನಿರ್ದೇಶನ ನೀಡಲಾಗಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದ ಸೈನಿಕರು ಹಿಂದಿರುಗಿದ್ದರು. ಸೈನಿಕರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಗಿತ್ತು.
ಇದನ್ನೂ ಓದಿ: ನೂರು ದೇಶ ಸುತ್ತಿದ ಮೋದಿ ಮಣಿಪುರಕ್ಕೆ ಯಾಕೆ ಹೋಗಿಲ್ಲ? ಪ್ರಧಾನಿ ವಿರುದ್ಧ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ


