ಗುಜರಾತ್ನ ಕೆವಾಡಿಯಾದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದೇ ವೇಳೆ ಇತರ ಭಾಷೆಯ ಸಾಧಕರಿಗೂ ಪ್ರಶಸ್ತಿ ನೀಡಲಾಗಿದ್ದು, ಮುಂದಿನ ಸಮಾರಂಭ ಆಯೋಜಿಸಲು ರಾಜ್ಯಗಳಿಗೆ ಆಹ್ವಾನ ನೀಡಲಾಗಿದೆ.
- Home
- News
- India News
- India News Live: ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿದ ಕನ್ನಡದ 2ನೇ ನಟ ಅನಂತ್ ನಾಗ್; ಮುಂದಿನ ಸಮಾರಂಭಕ್ಕೆ ಪ್ರವಾಸಿ ತಾಣಗಳ ಆಹ್ವಾನ!
India News Live: ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿದ ಕನ್ನಡದ 2ನೇ ನಟ ಅನಂತ್ ನಾಗ್; ಮುಂದಿನ ಸಮಾರಂಭಕ್ಕೆ ಪ್ರವಾಸಿ ತಾಣಗಳ ಆಹ್ವಾನ!

ಗುಜರಾತಿನ ಕೆವಾಡಿಯಾದ ಏಕತಾ ನಗರದಲ್ಲಿ ಮಂಗಳವಾರ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಚಿತ್ರರಂಗದ ಮೇರು ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಉಳಿದಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಕನ್ನಡದ 4, ತುಳು 1 ಸಿನಿಮಾಗೆ ಇದೇ ವೇಳೆ ಗೌರವಿಸಲಾಯಿತು.
ಕನ್ನಡದ ಮಿಥ್ಯ ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ನಿರ್ದೇಶಕ ಸುಮಂತ್ ಭಟ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಉಳಿದಂತೆ ಇದರಲ್ಲಿ ಅಭಿನಯಿಸಿದ್ದ ಅತೀಶ್ ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ, ಚಿತ್ರದ ಪೋಷಕ ನಟಿ ರೂಪಶ್ರೀ ವರ್ಕಾಡಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯನ್ನು ಕೂಡ ಇದೇ ವೇಳೆ ಪ್ರದಾನ ಮಾಡಲಾಯಿತು. ಉಳಿದಂತೆ ಕರಾವಳಿ ದೈವರಾಧನೆ ಕಥೆ ಹೊಂದಿರುವ ಇಂಬು ಸಿನಿಮಾ ಅತ್ಯುತ್ತಮ ತುಳು ಚಿತ್ರಕ್ಕೆ ಭಾಜನರಾದ ಹಿನ್ನೆಲೆ ಚಿತ್ರ ನಿರ್ಮಾಪಕ ಪ್ರಶಾಂತ್ ರೈ ಮತ್ತು ನಿರ್ದೇಶಕ ಶಿವಧ್ವಜ್ ಅವರು ಪ್ರಶಸ್ತಿ ಸ್ವೀಕರಿಸಿದರು.