Asianet Suvarna News Asianet Suvarna News

ಚಂದ್ರಯಾನದ ಯಶಸ್ಸಿನೊಂದಿಗೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆಯ ಹಿರಿಮೆಯನ್ನೂ ಏರಿಸಿದ ಇಸ್ರೋ!

ಪ್ರಗ್ಯಾನ್‌, ವಿಕ್ರಮ್‌, ವಿಕಾಸ್‌.. ಭಾರತದ ಚಂದ್ರಯಾನ-3 ಮಿಷನ್‌ಗೆ ಇಸ್ರೋ ಇಟ್ಟಿರುವ ಹೆಸರುಗಳಲ್ಲಿ ವಿಶೇಷತೆ ಒಂದಿದೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತಕ್ಕೆ ತನ್ನ ಯೋಜನೆಗಳಲ್ಲಿ ಇಸ್ರೋ ಪ್ರಾಧಾನ್ಯತೆ ನೀಡುತ್ತಿದೆ.
 

India Chandrayaan 3 is giving it a boost to worlds oldest languages Sanskrit san
Author
First Published Aug 31, 2023, 6:50 PM IST

ನವದೆಹಲಿ (ಆ.31): ಅಪ್ಪಟ ಸ್ವದೇಶಿ ತಂತ್ರಜ್ಞಾನದಂದೊಗೆಎ ಚಂದ್ರನ ನೆಲ ಮುಟ್ಟಿರುವ ಭಾರತ ಇಂದು ಇಸ್ರೋದ ಚಂದ್ರಯಾನ-3 ಯಶಸ್ಸನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯಲ್ಲಿ ಸಾಫ್ಟ್‌ ಲ್ಯಾಂಡ್‌ ಮಾಡಿದ ವಿಶ್ವದ ಮೊಟ್ಟಮೊದಲ ದೇಶ ಎನ್ನುವ ಕೀರ್ತಿಗೆ ಭಾರತ ಭಾಜನವಾಗಿದೆ. ಭಾರತದ ಸಾಧನೆಯನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಶಂಸೆ ಮಾಡಲಾಗುತ್ತಿದೆ. ಬಾಹ್ಯಾಕಾಶ ಪರಿಶೋಧನೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲೂ ಮಾಡಬಹುದು ಎನ್ನುವುದಕ್ಕೆ ಈ ಅನ್ವೇಷಣೆ ಪುರಾವೆಯಾಗಿದೆ. ಅದರೊಂದಿಗೆ ಭವಿಷ್ಯದ ಕಾರ್ಯಾಚರಣೆಗಳಿಗಾಗಿ ಚಂದ್ರನನ್ನು ನೋಡುತ್ತಿರುವ ಜಾಗತಿಕ ರಾಷ್ಟ್ರಗಳಿಗೆ ಭಾರತ ಸ್ಫೂರ್ತಿಯಾಗಿದೆ. ಇದೆಲ್ಲವೂ ಒಂದೆಡೆಯಾದರೆ, ಈ ಐರಿಹಾಸಿಕ ಪ್ರಯತ್ನದೊಂದಿಗೆ ಭಾರತ ಪ್ರಪಂಚದ ಅತ್ಯಂತ ಹಳೆ ಭಾಷೆಗಳಲ್ಲಿ ಒಂದಾದ ಸಂಸ್ಕೃತದ ಪುನರುಜ್ಜೀವನಕ್ಕೂ ಈ ಯೋಜನೆಗಳಿಂದ ಶ್ರಮಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಹಿಂದೂ ಧರ್ಮದಲ್ಲಿ ಬೇರೂರಿರುವ ಈ ಭಾಷೆಯಲ್ಲಿ ಚಂದ್ರಯಾನ-3ಯ ಹಲವು ಘಟಕಗಳನ್ನು ಹೆಸರಿಸಲಾಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಸಂಸ್ಕೃತದಲ್ಲಿ "ಮೂನ್‌ಕ್ರಾಫ್ಟ್" (ಚಂದ್ರ ಎಂದರೆ "ಚಂದ್ರ"; ಯಾನ್ ಎಂದರೆ "ಕ್ರಾಫ್ಟ್" ಅಥವಾ "ವಾಹನ"), ಚಂದ್ರಯೋಜನೆಯ ಮಿಷನ್‌ಗೆ ಸೂಕ್ತವಾದ ಶೀರ್ಷಿಕೆಯಾಗಿದೆ. ಚಂದ್ರನ ಮಣ್ಣನ್ನು ವಿಶ್ಲೇಷಿಸುವ ಗುರಿಯೊಂದಿಗೆ ಈಗ ಚಂದ್ರನ ಮೇಲೆ ಸಾಗುತ್ತಿರುವ ಆರು ಚಕ್ರಗಳ ರೋವರ್ಗೆ ಪ್ರಗ್ಯಾನ್ ಎಂದು ಹೆಸರಿಸಲಾಗಿದೆ. ಸಂಸ್ಕೃತ ಮೂಲವಾಗಿರುವ ಈ ಪದದ ಅರ್ಥ "ಬುದ್ಧಿವಂತಿಕೆ" ಎನ್ನುವುದಾಗಿದೆ.

"ಸಂಸ್ಕೃತದಲ್ಲಿ ಬರೆಯಲ್ಪಟ್ಟ ಭಾರತೀಯ ಸಾಹಿತ್ಯವು ಅದರ ಮೂಲ ಮತ್ತು ತಾತ್ವಿಕ ರೂಪದಲ್ಲಿ ಅತ್ಯಂತ ಶ್ರೀಮಂತವಾಗಿದೆ. ಇದು ವೈಜ್ಞಾನಿಕ ರೂಪದಲ್ಲಿಯೂ ಮುಖ್ಯವಾಗಿದೆ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಈ ವರ್ಷದ ಆರಂಭದಲ್ಲಿ ನೀಡಿದ ಸಂದರ್ಶನವೊಂಧರಲ್ಲಿ ತಿಳಿಸಿದ್ದರು. ಪ್ರಾಚೀನ ಭಾಷೆಯ ರಚನೆ ಮತ್ತು ಮೂಲ "ವೈಜ್ಞಾನಿಕ ಆಲೋಚನೆಗಳು ಮತ್ತು ಪ್ರಕ್ರಿಯೆಗಳನ್ನು ತಿಳಿಸಲು" ಇದು ಆದರ್ಶವಾಗಿದೆ ಎಂದು ಅವರು ಹೇಳಿದ್ದರು.

ಚಂದ್ರಯಾನ-3ಯ ಲ್ಯಾಂಡರ್‌ಗೆ ವಿಕ್ರಮ್ ಎಂದು ಹೆಸರಿಡಲಾಗಿದೆ. ಇದು ಶೌರ್ಯ ಎಂದು ಅರ್ಥ ನೀಡುವ ಸಂಸ್ಕೃತದ ಹೆಸರಾಗಿದೆ. ಇದು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ದಿವಂಗತ ವಿಕ್ರಮ್ ಸಾರಾಭಾಯ್ ಅವರಿಗೂ ಗೌರವಿಸುತ್ತದೆ. ಇಸ್ರೋದ ಮೊದಲ ಅಧ್ಯಕ್ಷರಾಗಿದ್ದ ಸಾರಾಭಾಯಿ, 1947ರ ನವೆಂಬರ್‌ನಲ್ಲಿ ದೇಶದ ಮೊದಲ ಭೌತಶಾಸಸ್ತ್ರ ಪ್ರಯೋಗಾಲಯವನ್ನು ಸ್ಥಾಪನೆ ಮಾಡಿದ್ದರು. ಇದು ಸ್ವತಂತ್ರ ಭಾರತದ ಮೊದಲ ಪ್ರಯೋಗಾಲಯ ಎನಿಸಿತ್ತು. ದೇಶವು ಬ್ರಿಟಿಷ್ ಆಳ್ವಿಕೆಯಿಂದ ದೀರ್ಘಾವಧಿಯ ಸ್ವಾತಂತ್ರ್ಯವನ್ನು ಸಾಧಿಸಿದ ಮೂರು ತಿಂಗಳ ನಂತರ PRL ಅನ್ನು ಸ್ಥಾಪಿಸಲಾಗಿತ್ತು.

ಭಾರತದ ಅಹಮದಾಬಾದ್ ಮೂಲದ, ಪಿಆರ್‌ಎಲ್‌ನೊಂದಿಗೆ ಆಧುನಿಕ ವಿಜ್ಞಾನಿಗಳು ಇತ್ತೀಚಿನ ಚಂದ್ರಯಾನ-3 ಮಿಷನ್‌ಗಾಗಿ ವಸ್ತುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದೇ ಸಂಸ್ಥೆ ಪ್ರಗ್ಯಾನ್ ರೋವರ್‌ನಲ್ಲಿ ಅಳವಡಿಸಲಾದ ಸ್ಪೆಕ್ಟ್ರೋಮೀಟರ್ ಅನ್ನು ರಚಿಸಿದೆ.

ಇನ್ನು ಚಂದ್ರಯಾನ್-3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸಾಗಿಸಿದ ಮೂರು-ಹಂತದ ರಾಕೆಟ್‌ನ ಪ್ರಮುಖ ಹಂತವನ್ನು ಇಸ್ರೋ ಸಂಸ್ಕೃತದಲ್ಲಿ ವಿಕಾಸ್‌ ಎಂದು ಹೆಸರಿಸಿತ್ತು. ದ್ರವ ಇಂಧನ ರಾಕೆಟ್‌ಗೆ ಇಟ್ಟಿರುವ ವಿಕಾಸ್‌ ಹೆಸರನ್ನು ವಿಕ್ರಮ್‌ ಸಾರಾಭಾಯಿ ಅವರ ಪೂರ್ಣ ಹೆಸರಾಗಿರುವ ವಿಕ್ರಮ್‌ ಅಂಬಾಲಾಲ್‌ ಸಾರಾಭಾಯ್‌ ಎಂದೂ ಹೇಳಲಾಗಿದೆ.

ISRO chief S Somanath: ಬಾಹ್ಯಾಕಾಶದ ಪರಿಶೋಧನೆಗೆ ವಿಜ್ಞಾನ, ಅಂತರಂಗದ ಶೋಧನೆಗೆ ದೇವಸ್ಥಾನ!

ಸಂಸ್ಕೃತ ಹೆಸರನ್ನು ಹೊಂದಿರುವ ಇಸ್ರೋ ಯೋಜನೆ ಚಂದ್ರಯಾನ-3 ಮಾತ್ರವಲ್ಲ, ಇಸ್ರೋ ಐತಿಹಾಸಿಕವಾಗಿ ತನ್ನ ಬಾಹ್ಯಾಕಾಶ ನೌಕೆಯನ್ನು ಪ್ರಾಚೀನ ಭಾಷೆಯಲ್ಲಿ ಹೆಸರಿಸಲು ಒಲವು ತೋರಿದೆ, 2013 ರಲ್ಲಿ ಉಡಾವಣೆಯಾದ ಮಂಗಳಯಾನ ಎಂಬ ತನ್ನ ಮೊದಲ ಮಂಗಳ ಕಕ್ಷೆಗಾಮಿ ಮಿಷನ್ ಮತ್ತು ಕಕ್ಷೆಯಿಂದ ಮಂಗಳದ ಮೇಲ್ಮೈ ಮತ್ತು ವಾತಾವರಣವನ್ನು ಅಧ್ಯಯನ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಬ್ಯಾಟರಿ ಖಾಲಿಯಾದಾಗ ಅದು ಸಂಪರ್ಕ ನಿಲ್ಲಿಸಿತ್ತು. ಈ ವಾರ, ಭಾರತವು ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಆದಿತ್ಯ-L1 (ಸಂಸ್ಕೃತದಲ್ಲಿ "ಸೂರ್ಯ") ಎಂದು ಇದಕ್ಕೆ ಹೆಸರಿಸಲಾಗಿದೆ. ಈ ನೌಕೆಯು ಭಾರತದ ಪೂರ್ವ ಕರಾವಳಿಯಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಉಡಾವಣೆ ಆಗಲಿದೆ.

Chandrayaan 3: ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ ಸೇರಿದಂತೆ 9 ಧಾತುಗಳನ್ನು ಪತ್ತೆ ಮಾಡಿದ ಇಸ್ರೋ!

ಇನ್ನು ಮುಂಬರುವ ಗಗನಯಾನ್‌ (ಸಂಸ್ಕೃತದಲ್ಲಿ "ಆಕಾಶ ವಾಹನ") ಕಾರ್ಯಕ್ರಮ ಕೂಡ ಸಂಸ್ಕೃತದ ಹೆಸರನ್ನು ಹೊಂದಿದೆ. ಇದು ಕನಿಷ್ಠ ಮೂರು ಗಗನಯಾತ್ರಿಗಳನ್ನು ಕಡಿಮೆ-ಭೂಮಿಯ ಕಕ್ಷೆಗೆ 2025 ಕ್ಕಿಂತ ಮುಂಚಿತವಾಗಿ ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ. ಅದರೊಂದಿಗೆ ಹ್ಯುಮನಾಯ್ಡ್‌ ರೋಬೋಟ್‌ಗೆ ಸಂಸ್ಕೃತದಲ್ಲಿ ಬಾಹ್ಯಾಕಾಶದ ಸ್ನೇಹಿತ ಎಂದು ಅರ್ಥ ನೀಡುವ ವ್ಯೋಮಮಿತ್ರ ಎಂದು ಹೆಸರಿಸಿದೆ.  ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಬೇರುಗಳನ್ನು ಸ್ಥಿರವಾಗಿ ಸ್ಥಾಪಿಸಿದಂತೆ, 13 ನೇ ಶತಮಾನದ ನಂತರ ಬಳಕೆಯಲ್ಲಿ ತೀವ್ರವಾಗಿ ಕುಸಿದಿರುವ ಭಾಷೆಯಾದ ಸಂಸ್ಕೃತವು ಮತ್ತೊಮ್ಮೆ ಬೆಳಕಿಗೆ ಬರುತ್ತಿದೆ.

Follow Us:
Download App:
  • android
  • ios