ಪೋಖ್ರಣ್‌ ಬಳಿ ಐಎಎಫ್‌ ಯುದ್ಧ ವಿಮಾನದಿಂದ ಹಠಾತ್ ಬಿದ್ದ ಮದ್ದುಗುಂಡುಗಳಿದ್ದ 'ಏರ್‌ಸ್ಟೋರ್‌'

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಣ್‌ ಬಳಿ ಐಎಎಫ್‌ ಯುದ್ಧ ವಿಮಾನದ ಏರ್‌ಸ್ಟೋರ್‌ ಆಕಸ್ಮಿತವಾಗಿ ಬಿದ್ದ ಘಟನೆ ನಡೆದಿದೆ. ಮದ್ದುಗುಂಡುಗಳನ್ನು ಒಳಗೊಂಡಿರುವ ಏರ್‌ಸ್ಟೋರ್, ಜನಸಂಚಾರವಿರದ ಪ್ರದೇಶದಲ್ಲಿ ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

IAF fighter jets Airstore containing ammunition accidently dropped near pokhran akb

ಜೈಪುರ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಣ್‌ ಬಳಿ ಐಎಎಫ್‌ ಯುದ್ಧ ವಿಮಾನದ ಏರ್‌ಸ್ಟೋರ್‌ ಆಕಸ್ಮಿತವಾಗಿ ಬಿದ್ದ ಘಟನೆ ನಡೆದಿದೆ. ಮದ್ದುಗುಂಡುಗಳನ್ನು ಒಳಗೊಂಡಿರುವ ಏರ್‌ಸ್ಟೋರ್, ಜನಸಂಚಾರವಿರದ ಪ್ರದೇಶದಲ್ಲಿ ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಯುದ್ಧ ವಿಮಾನದ ಏರ್‌ಸ್ಟೋರ್ ಹಠಾತ್ ಬಿದ್ದಾಗ ಪೋಖ್ರಣ್ ಫೈರಿಂಗ್‌ ರೇಂಜ್‌ ಪ್ರದೇಶದಿಂದ ಕೆಲ ದೂರದಲ್ಲಿ ವಾಸಿಸುತ್ತಿದ್ದ ಜನರಿಗೆ ದೊಡ್ಡದಾದ ಶಬ್ದವೊಂದು ಕೇಳಿಸಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಏರ್‌ಸ್ಟೋರ್‌ನ ಕೆಲ ವಸ್ತುಗಳು ಪತ್ತೆಯಾಗಿವೆ.

ರಾಮನ ಪ್ರತಿಷ್ಠಾಪನೆ ವೇಳೆ ಭಕ್ತನಿಗೆ ಹೃದಯಾಘಾತ: ತುರ್ತು ಚಿಕಿತ್ಸೆ ನೀಡಿ ರಕ್ಷಿಸಿದ ಐಎಎಫ್ ಕ್ಷಿಪ್ರ ಪಡೆ

ಈ ಕುರಿತು ಭಾರತೀಯ ವಾಯುಪಡೆ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ‘ಪೋಖ್ರಣ್‌ ಫೈರಿಂಗ್‌ ರೇಂಜ್‌ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಭಾರತೀಯ ವಾಯುಪಡೆ ವಿಮಾನದಲ್ಲಿ ಏರ್‌ಸ್ಟೋರ್‌ ಬಿಡುಗಡೆಯಾಗಿದೆ’ ಎಂದಿದೆ.

ಐಎಎಫ್‌ ಏರ್‌ ಸ್ಡೋರ್‌ನ ನಿಖರ ಸ್ವರೂಪವನ್ನು ಬಹಿರಂಗಪಡಿಸಿಲ್ಲ. ಆದರೆ ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಏರ್‌ಸ್ಟೋರ್‌ ಸಾಮಾನ್ಯವಾಗಿ ಮದ್ದು ಗುಂಡುಗಳು, ಬಾಂಬ್ , ಇನ್ನಿತರ ಮಿಲಿಟರಿ ಉಪಕರಣಗಳನ್ನು ವಿಮಾನದಲ್ಲಿ ಸಾಗಿಸುವ ವ್ಯವಸ್ಥೆಯಾಗಿದೆ.

ಎಂಟು ವರ್ಷಗಳ ಬಳಿಕ ಪತ್ತೆಯಾದ ಭಾರತೀಯ ವಾಯುಸೇನೆ ವಿಮಾನದ ಅವಶೇಷ!

 

Latest Videos
Follow Us:
Download App:
  • android
  • ios