Asianet Suvarna News Asianet Suvarna News

ರಾಮನ ಪ್ರತಿಷ್ಠಾಪನೆ ವೇಳೆ ಭಕ್ತನಿಗೆ ಹೃದಯಾಘಾತ: ತುರ್ತು ಚಿಕಿತ್ಸೆ ನೀಡಿ ರಕ್ಷಿಸಿದ ಐಎಎಫ್ ಕ್ಷಿಪ್ರ ಪಡೆ

ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಕಾರ್ಯಕ್ರಮದ ವೇಳೆ ಎದೆನೋವು ಕಾಣಿಸಿಕೊಂಡಿದೆ, ಕೂಡಲೇ ಭಾರತೀಯ ವಾಯುಸೇನೆಯ ರಾಪಿಡ್ ಫೋರ್ಸ್ ತಂಡ ಸ್ಥಳಕ್ಕೆ ಆಗಮಿಸಿ ಅವರಿಗೆ ತುರ್ತು ಚಿಕಿತ್ಸೆ ನೀಡಿ ಅವರ ಜೀವ ರಕ್ಷಿಸಿದೆ.

Devotee suffers heart attack during Rama prana prathista in Ayodhya: IAF Rapid Response Force rescues by giving emergency treatment akb
Author
First Published Jan 23, 2024, 1:14 PM IST

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಕಾರ್ಯಕ್ರಮದ ವೇಳೆ ಎದೆನೋವು ಕಾಣಿಸಿಕೊಂಡಿದೆ, ಕೂಡಲೇ ಭಾರತೀಯ ವಾಯುಸೇನೆಯ ರಾಪಿಡ್ ಫೋರ್ಸ್ ತಂಡ ಸ್ಥಳಕ್ಕೆ ಆಗಮಿಸಿ ಅವರಿಗೆ ತುರ್ತು ಚಿಕಿತ್ಸೆ ನೀಡಿ ಅವರ ಜೀವ ರಕ್ಷಿಸಿದೆ.

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯೂ ಕೋಟ್ಯಾಂತರ ಭಕ್ತರ ಪಾಲಿಗೆ ಭಾವುಕ ಕ್ಷಣವಾಗಿತ್ತು.  ಈ ಶುಭ ಗಳಿಗೆಗೆ ಹಲವು ದಶಕಗಳ ಕಾನೂನು ಹೋರಾಟದಿಂದಾಗಿ ಈ ಶುಭ ಗಳಿಗೆಗೆ ತಾವು ಸಾಕ್ಷಿ ಆಗುತ್ತೇವೆ ಇಲ್ಲವೋ ಎಂಬ ಆತಂಕದಲ್ಲೇ ಅನೇಕರಿದ್ದರು. ಆದರೆ ನಿನ್ನೆ ಆ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಈ ಕ್ಷಣದಲ್ಲಿ ಭಾವುಕರಾಗಿ ಕಣ್ಣೀರು ಸುರಿಸಿದವರು ಎಷ್ಟೋ ಜನ. ಇದೇ ವೇಳೆ ಅಯೋಧ್ಯೆಯ ರಾಮ ಮಂದಿರಕ್ಕೆ ಆಗಮಿಸಿ ಶುಭ ಗಳಿಗೆಗೆ ಸಾಕ್ಷಿಯಾಗಿದ್ದ 65 ವರ್ಷದ ವ್ಯಕ್ತಿಯೊಬ್ಬರಿಗೆ ಧಿಡೀರ್ ಹೃದಯಾಘಾತವಾಗಿದೆ.  ಮಂದಿರ ಸಂಕೀರ್ಣದದಲ್ಲೇ 65 ವರ್ಷದ ರಾಮಕೃಷ್ಣ ಶ್ರೀವಾಸ್ತವ್ ಎಂಬುವವರು ಕುಸಿದು ಬಿದ್ದಿದ್ದಾರೆ. 

ಮುಗುಳ್ನಕ್ಕೂ ತಲೆಯಲ್ಲಾಡಿಸುವ ರಾಮಲಲ್ಲಾ: ಮೈ ರೋಮಾಂಚನಗೊಳಿಸುತ್ತಿದೆ ಎಐ ಸೃಷ್ಟಿಸಿದ ವೀಡಿಯೋ

ಈ ವೇಳೆ ಕೂಡಲೇ ಸ್ಥಳಕ್ಕಾಗಮಿಸಿದ  ವಿಂಗ್ ಕಮಾಂಡರ್ ಮನೀಶ್ ಗುಪ್ತ ಅವರ ನೇತೃತ್ವದ ಭೀಷ್ಮ್ ಕ್ಯೂಬ್‌ನ ತಂಡವು  ನಿಮಿಷದಲ್ಲಿ ಅವರನ್ನು ಅಲ್ಲಿಂದ ಸ್ಥಳಾಂತರಿಸಿ ಅವರಿಗೆ ಚಿಕಿತ್ಸೆ ನೀಡಿತ್ತು. ಡಾಕ್ಟರ್‌ಗಳು ಹೇಳುವಂತಹ ವೈದ್ಯಕೀಯ ಗೋಲ್ಡನ್ ಟೈಮ್‌ನಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಿದ ಪರಿಣಾಮ ರಾಮಕೃಷ್ಣ ಶ್ರೀವಾಸ್ತವ್ ಅವರ ಜೀವ ಉಳಿದಿದೆ. ( ಆಘಾತಕಾರಿ ಗಾಯ ಅಥವಾ ವೈದ್ಯಕೀಯ ಅಗತ್ಯದ ಹಾನಿಯ ನಂತರದ ಮೊದಲ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಇದು ಯಶಸ್ವಿ ತುರ್ತು ಚಿಕಿತ್ಸೆಗೆ ನಿರ್ಣಾಯಕವಾಗಿದೆ.)

ವೈದ್ಯಕೀಯ ತಪಾಸಣೆ ನಂತರ ರಾಮಕೃಷ್ಣ ಶ್ರೀವಾಸ್ತವ್ ಅವರಿಗೆ ರಕ್ತದೊತ್ತಡ ಪ್ರಮಾಣವೂ ಅಪಾಯಕಾರಿಯಾಗಿ 210/170 mm Hgಗೆ ಏರಿಕೆಯಾಗಿತ್ತು ಎಂದು ತಿಳಿದು ಬಂದಿದೆ. ಅಯೋಧ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ಷಿಪ್ರ ಕಾರ್ಯಾಚರಣೆ ತಂಡವು ಅವರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿತು. ಬಳಿಕ ಅವರ ಸ್ಥಿತಿ ಸ್ಥಿರವಾದ ನಂತರ, ಹೆಚ್ಚಿನ ಪರಿಶೀಲನೆ ಮತ್ತು ವಿಶೇಷ ಆರೈಕೆಗಾಗಿ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾಕಾರವಾಯ್ತು ಮಂದಿರ್ ವಹೀ ಬನಾಯೇಂಗೇ ಉದ್ಘೋಷ : ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಹೀಗೆ

ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ತುರ್ತು ಆರೋಗ್ಯ ಸೇವೆ ನೀಡುವುದಕ್ಕಾಗಿ ಅಯೋಧ್ಯೆಯಲ್ಲಿ ಆರೋಗ್ಯ ಮೈತ್ರಿ ವಿಪತ್ತು ನಿರ್ವಹಣಾ ಯೋಜನೆಯಡಿ ಎರಡು ಕ್ಯೂಬ್-ಭೀಷ್ಮ್ ಮೊಬೈಲ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.  ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಏನಾದರೂ ತುರ್ತು ಸೇವೆಯ ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿತ್ತು ಎಂದು  ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೇಳಿದೆ. ಈ ಸಂಚಾರಿ ಆಸ್ಪತ್ರೆಯೂ ತುರ್ತು ಸಂದರ್ಭವನ್ನು ನಿಭಾಯಿಸುವ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಶ್ರೀರಾಮನ ನೆಲೆ ವಾಸ್ತು ಶಿಲ್ಪದ ಅದ್ಭುತ ಸೆಲೆ: 32 ಮೆಟ್ಟಿಲು ಏರಿದರೆ ರಾಮದರ್ಶನ

Follow Us:
Download App:
  • android
  • ios