ಇತ್ತೀಚೆಗೆ ರ‍್ಯಾಗಿಂಗ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ಪೊಲೀಸರಲ್ಲಿ 24 ವರ್ಷದ ಕಾನ್‌ಸ್ಟೇಬಲ್‌ ಶಾಲಿನಿ ಚೌಹಾಣ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ 3 ತಿಂಗಳ ಕಾಲ ವಿದ್ಯಾರ್ಥಿನಿಯಾಗಿ ನಟಿಸಿದ್ದರು.

ಇವರು ಭುಜದ ಮೇಲೆ ಬ್ಯಾಗ್ ಹಾಕಿಕೊಂಡು, ಸ್ನೇಹಿತರೊಂದಿಗೆ ಕ್ಯಾಂಟೀನ್‌ನಲ್ಲಿ ಹರಟೆ ಹೊಡೆಯುತ್ತಾ, ಇತರೆ ವಿದ್ಯಾರ್ಥಿಗಳಂತೆ (Students) ಕ್ಲಾಸ್‌ ಬಂಕ್‌ (Bunk) ಮಾಡುತ್ತಿದ್ದರು. ಇದು ವಿದ್ಯಾರ್ಥಿಗಳ ನಿತ್ಯ ಕೆಲಸ ಅಂತೀರಾ. ಆದರೆ, ಈಕೆ ವಿದ್ಯಾರ್ಥಿನಿಯೇ ಅಲ್ಲ. ಬದಲಾಗಿ ಕಾಲೇಜಿನ ಕ್ಯಾಂಪಸ್‌ನಲ್ಲಿ (College Campus) ರ‍್ಯಾಗಿಂಗ್ (Ragging) ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವ ಸೀಕ್ರೆಟ್‌ ಪೊಲೀಸ್ ಆಗಿದ್ದರು. ಹೌದು, ಮಧ್ಯ ಪ್ರದೇಶದ (Madhya Pradesh) ಇಂದೋರ್‌ನ (Indore) ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ (Medical College) ಇತ್ತೀಚೆಗೆ ರ‍್ಯಾಗಿಂಗ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ಪೊಲೀಸರಲ್ಲಿ 24 ವರ್ಷದ ಕಾನ್‌ಸ್ಟೇಬಲ್‌ ಶಾಲಿನಿ ಚೌಹಾಣ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ 3 ತಿಂಗಳ ಕಾಲ ವಿದ್ಯಾರ್ಥಿನಿಯಾಗಿ ನಟಿಸಿದ್ದರು.

ಮೊದಲ ವರ್ಷದ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ರ‍್ಯಾಗಿಂಗ್ ಮಾಡಿದ್ದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಮಹಿಳಾ ಪೊಲೀಸ್‌ ವಿದ್ಯಾರ್ಥಿನಿಯಾಗಿದ್ದಳು. ಹಾಗೂ, ಈ ರ‍್ಯಾಗಿಂಗ್‌ನಲ್ಲಿ ಭಾಗಿಯಾಗಿರುವ 11 ಹಿರಿಯ ವಿದ್ಯಾರ್ಥಿಗಳನ್ನು ಆಕೆ ಗುರುತಿಸಿದ್ದು, ಈ ಸೀನಿಯರ್‌ ವಿದ್ಯಾರ್ಥಿಗಳನ್ನು 3 ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಗಿದೆ. ರ‍್ಯಾಗಿಂಗ್ ಬಗ್ಗೆ ವಿದ್ಯಾರ್ಥಿಗಳಿಂದ ಅನಾಮಧೇಯ ದೂರುಗಳು ಬಂದಿದ್ದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

ಇದನ್ನು ಓದಿ: ಮಹಿಳಾ ಪೊಲೀಸ್‌ಗೆ ‘Get Out’ ಎಂದ ಹರ್ಯಾಣ ಮಹಿಳಾ ಆಯೋಗದ ಅಧ್ಯಕ್ಷೆ: ಕ್ಯಾಮೆರಾದಲ್ಲಿ ಸೆರೆ..!

ಮೊದಲ ವರ್ಷದ ವಿದ್ಯಾರ್ಥಿಗಳನ್ನು ದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತಹ ಅಸಭ್ಯ ಕೃತ್ಯಗಳನ್ನು ನಡೆಸಲು ಒತ್ತಾಯಿಸಲಾಗಿದೆ ಎಂಬ ದೂರುಗಳು ಬಂದಿದ್ದವು. ಆದರೆ ಬಹುಶಃ ಕಿರುಕುಳದ ಭಯದಿಂದ ದೂರುದಾರರು ಮುಂದೆ ಬರಲಿಲ್ಲ ಅಥವಾ ಆರೋಪಿಯ ಹೆಸರನ್ನು ಹೇಳಲಿಲ್ಲ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಈ ಹಿನ್ನೆಲೆ ನಾವು ಕ್ಯಾಂಪಸ್‌ನಲ್ಲಿ ಪರಿಶೀಲಿಸಲು ಹೋದೆವು, ಆದರೆ ವಿದ್ಯಾರ್ಥಿಗಳು ನಮ್ಮನ್ನು ಸಮವಸ್ತ್ರದಲ್ಲಿ ಒಮ್ಮೆ ನೋಡಿದಾಗ ಅವರು ಆರೋಪಿಗಳನ್ನು ತೋರಿಸಲು ಹೆದರುತ್ತಿದ್ದರು. ನಾವು ದೂರುಗಳ ಸಂಪರ್ಕ ಸಂಖ್ಯೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದೇವೆ, ಆದರೆ ಸಹಾಯವಾಣಿಯ ನೀತಿ ಅದಕ್ಕೆ ಅವಕಾಶ ನೀಡಲಿಲ್ಲ. ಆದ್ದರಿಂದ ನಾವು ಗ್ರೌಂಡ್‌ ಮಟ್ಟದ ಪೊಲೀಸಿಂಗ್ ಮಾಡಿದ್ದೇವೆ. ಶಾಲಿನಿ ಮತ್ತು ಇತರ ಕಾನ್‌ಸ್ಟೇಬಲ್‌ಗಳನ್ನು ಕ್ಯಾಂಪಸ್‌ನಲ್ಲಿ ಮತ್ತು ಸುತ್ತಮುತ್ತ ಸಾಮಾನ್ಯ ಬಟ್ಟೆಯಲ್ಲಿ ಸಮಯ ಕಳೆಯಲು, ಕ್ಯಾಂಟೀನ್ ಮತ್ತು ಹತ್ತಿರದ ಟೀ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹರಟೆ ಹೊಡೆಯಲು ಕೇಳಲಾಯಿತು ಎಂದು ಹೇಳಿದರು.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ: ನಕಲಿ ಆಯಿಲ್‌ ದಂಧೆ ಬೇಧಿಸಿದ ಲೇಡಿ ಪೊಲೀಸ್‌..!

ಜೂನಿಯರ್ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಅವರು ಅನುಭವಿಸುತ್ತಿರುವ ಭಯಾನಕ ಅನುಭವವನ್ನು ಅವರು ತಿಳಿದುಕೊಂಡರು. ಈ ರೀತಿಯಾಗಿ ನಾವು ಸಾಕ್ಷಿಗಳನ್ನು ಪಡೆದುಕೊಂಡೆವು ಮತ್ತು ಪ್ರಕರಣವನ್ನು ಭೇದಿಸಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಖಾಜಿ ಹೇಳಿದರು.

ನಾನು ಪ್ರತಿನಿತ್ಯ ಕಾಲೇಜಿಗೆ ವಿದ್ಯಾರ್ಥಿಯಂತೆ ವೇಷ ಹಾಕಿಕೊಂಡು ಹೋಗುತ್ತಿದ್ದೆ. ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೆ. ನನ್ನ ಬಗ್ಗೆ ಮಾತನಾಡುತ್ತೇನೆ, ಮತ್ತು ಕ್ರಮೇಣ ಅವರು ನನ್ನಲ್ಲಿ ತೆರೆದುಕೊಳ್ಳಲು ಪ್ರಾರಂಭಿಸಿದರು ಎಂದು ಕಾಲೇಜು ವಿದ್ಯಾರ್ಥಿಯಂತೆ ನಟಿಸಿದ ಲೇಡಿ ಪೊಲೀಸ್‌ ತಮ್ಮ ಹೊಸ ಅನುಭವವನ್ನು ಹೇಳಿಕೊಂಡಿದ್ದಾರೆ. 

ಇನ್ನು, ವಿದ್ಯಾರ್ಥಿಗಳಿಗೆ ನಿಮ್ಮ ಮೇಲೆ ಅನುಮಾನ ಬರಲಿಲ್ವಾ ಎಂದು ಕೇಳಿದಾಗ, "ಕೆಲವೊಮ್ಮೆ ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ನಾನು ಅವರಿಂದ ತಪ್ಪಿಸಿಕೊಳ್ಳುತ್ತೇನೆ ಮತ್ತು ವಿಷಯ ಬದಲಾಯಿಸುತ್ತೇನೆ. ಕ್ಯಾಂಟೀನ್ ಜನಸಂದಣಿಯಿಂದ ತುಂಬಿರುತ್ತದೆ ಮತ್ತು ಅವರು ಹೆಚ್ಚು ಯೋಚಿಸಲಿಲ್ಲ’’ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!

ಹಾಗೂ, ಕ್ಯಾಂಪಸ್‌ಗೆ ತನ್ನ ರಹಸ್ಯ ಭೇಟಿಗಳ ಸಮಯದಲ್ಲಿ ಪುಸ್ತಕಗಳೊಂದಿಗೆ ಬ್ಯಾಗ್ ಅನ್ನು ತೆಗೆದುಕೊಂಡು ಕಾಲೇಜು ವಿದ್ಯಾರ್ಥಿಯಂತೆ ಧರಿಸುತ್ತಿದ್ದೆ. ನಾನು ವಿದ್ಯಾರ್ಥಿಯಂತೆ ಕಾಣುತ್ತಿದ್ದೇನೆ ಎಂದು ನಾನು ಖಚಿತಪಡಿಸಿಕೊಳ್ಳುತ್ತಿದ್ದೆ ಎಂದೂ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಹೇಳಿದ್ದಾರೆ.