ಭೂರಿ ಭೋಜನವಿದು... ಆನೆಗೆ ಆಹಾರ ಹೇಗೆ ಸಿದ್ಧಪಡಿಸುತ್ತಾರೆ ಗೊತ್ತಾ? ವಿಡಿಯೋ
ಸಾಕಾನೆಗಳಿಗೆ ನೀಡುವ ಆಹಾರವನ್ನು ಹೇಗೆ ತಯಾರಿಸುತ್ತಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಕಾನೆಗಳಿಗೆ ನೀಡುವ ಆಹಾರವನ್ನು ಹೇಗೆ ತಯಾರಿಸುತ್ತಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಾನೆಗಳು ಸಸ್ಯಾಹಾರಿಗಳಾಗಿದ್ದು, ಕಾಡಿನಲ್ಲಿ ಸಿಗುವ ಸೊಪ್ಪು ಬಿದಿರು ಮುಂತಾದವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಸಾಕಾನೆಗಳಿಗೆ ಆಹಾರ ತಯಾರಿಸಿ ನೀಡಬೇಕಿದೆ. ಇದೊಂದು ದೊಡ್ಡ ಪ್ರಕ್ರಿಯೆಯಾಗಿದ್ದು, ಇದರ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಇದು ತಮಿಳುನಾಡಿನ ಮುದುಮಲೈ ಹುಲಿ ಮೀಸಲು ಪ್ರದೇಶದ ದೃಶ್ಯವಾಗಿದ್ದು, ಇಲ್ಲಿ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಸೇರಿ ದೈತ್ಯ ಆನೆಗಳಿಗೆ ಬೆಳಗಿನ ಉಪಹಾರ ಸಿದ್ದಪಡಿಸುತ್ತಿದ್ದಾರೆ. ಬಳಿಕ ಅವುಗಳನ್ನು ತೆಗೆದುಕೊಂಡು ಹೋಗಿ ಆನೆಗಳ ಬಾಯಿಗಿಡುತ್ತಿದ್ದು, ಆನೆಗಳು ಕೂ ಈ ಆಹಾರಕ್ಕಾಗಿ ಕಾಯುತ್ತಾ ನಿಂತಿರುತ್ತವೆ.
ರಾಗಿ, ಬೆಲ್ಲ, ಅನ್ನ ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಅವುಗಳನ್ನು ಉಂಡೆ ಮಾಡಿ ತೆಗೆದುಕೊಂಡು ಹೋಗಿ ಆನೆಗಳ ಬಾಯಿಗೆ ಇಡಲಾಗುತ್ತದೆ. ಮುದುಮಲೈ ಹುಲಿ ಮೀಸಲು ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್‌ನಲ್ಲಿ ಈ ದೃಶ್ಯ ಸೆರೆ ಆಗಿದೆ. ಸ್ವತಃ ಐಎಫ್‌ಎಸ್ ಅಧಿಕಾರಿಯೊಬ್ಬರು ಆನೆಗಳಿಗೆ ಆಹಾರ ತಯಾರಿಸುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಆನೆ ಕ್ಯಾಂಪ್‌ನ ಪಶುವೈದ್ಯರ ನಿರ್ದೇಶನದಂತೆ ಸಿಬ್ಬಂದಿ ಈ ಆಹಾರವನ್ನು ತಯಾರಿಸುತ್ತಾರೆ. ಪ್ರತಿಯೊಂದು ಆನೆಗೂ ನಿಗದಿತ ಆಹಾರ ಮಿತಿ ಇರುತ್ತದೆ. ರಾಗಿ, ಬೆಲ್ಲ, ಅನ್ನ ರುಚಿಗೆ ತಕ್ಕಷ್ಟು ಉಪ್ಪನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿ ಆನೆಗಳಿಗೆ ತೆಗೆದುಕೊಂಡು ಹೋಗಿ ನೀಡಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಗೆ ನುಗ್ಗಿದ ಆನೆಗಳ ಹಿಂಡು: Viral Video ನೋಡಿ..
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಸುಪ್ರಿಯಾ ಸಾಹು ಅವರು, ತಮಿಳುನಾಡಿನ(Tamil Nadu) ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ (Mudumalai Tiger Reserve) ವ್ಯಾಪ್ತಿಯಲ್ಲಿರುವ ತೆಪ್ಪಕಾಡು ಆನೆ ಕ್ಯಾಂಪ್‌ನ (Theppakadu Elephant Camp) ಆನೆಗಳು ಬೆಳಗ್ಗಿನ ಉಪಹಾರದ ಸಮಯ. ಪ್ರತಿ ಆನೆಗೂ ಪಶು ವೈದ್ಯರು ನಿಗದಿ ಮಾಡಿದ ಪ್ರಮಾಣದಲ್ಲಿ ರಾಗಿ(Ragi), ಬೆಲ್ಲ(jaggery), ಉಪ್ಪು(Salt) ಅನ್ನ ಮಿಶ್ರಿತ ಉಂಡೆಯನ್ನು ತಯಾರಿಸಿ ನೀಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ರಸ್ತೆ ಮಧ್ಯೆಯೇ ಆಟವಾಡಿದ ಆನೆ ಮರಿಗಳು: ಐಎಎಸ್ ಅಧಿಕಾರಿ ಶೇರ್ ಮಾಡಿದ ಈ ವಿಡಿಯೋ ಸಖತ್ ವೈರಲ್..!
ಈ ವಿಡಿಯೋವನ್ನು 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆನೆಗಳ ನಿರ್ವಹಣೆ ನೋಡಲು ಈ ತೆಪ್ಪಕಾಡು ಆನೆ ಕ್ಯಾಂಪ್ ( Elephant Camp) ಒಳ್ಳೆಯ ಸ್ಥಳ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವಿಡಿಯೋದಲ್ಲಿ ತನ್ನತ್ತ ತಿನ್ನಿಸು ತರುತ್ತಿದ್ದಂತೆ ಗಮನ ಸೆಳೆಯಲು ಆನೆ ತನ್ನ ಕುತ್ತಿಗೆಯಲ್ಲಿದ್ದ ಗಂಟೆಯನ್ನು ಸೊಂಡಿಲಿನಿಂದ ಮುಟ್ಟಿ ಸದ್ದು ಮಾಡುತ್ತಿರುವ ದೃಶ್ಯವನ್ನು ಗಮನಿಸಿದ್ದು, ಇದೊಂದು ಅಪರೂಪದ ದೃಶ್ಯ ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಆನೆಗಳ ಆಹಾರ ಪ್ರಕ್ರಿಯೆ ಬಗ್ಗೆ ತಿಳಿಸಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
ಆನೆಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಮಾವುತನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಆನೆಗಳು ಮಾವುತನನ್ನು ಅಷ್ಟೇ ಪ್ರೀತಿಯಿಂದ ಕಾಯುತ್ತಿರುತ್ತವೆ. ಕೆಲ ದಿನಗಳ ಹಿಂದೆ ಆನೆಯೊಂದು ಮೊಬೈಲ್ ಫೋನ್ ನೋಡುತ್ತಿರುವ ಮಾವುತನೊಂದಿಗೆ ತಾನು ಕೂಡ ಬಗ್ಗಿ ಬಗ್ಗಿ ಎದ್ದುಬಿದ್ದು ಮೊಬೈಲ್ ನೋಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.