ರಸ್ತೆ ಮಧ್ಯೆಯೇ ಆಟವಾಡಿದ ಆನೆ ಮರಿಗಳು: ಐಎಎಸ್ ಅಧಿಕಾರಿ ಶೇರ್ ಮಾಡಿದ ಈ ವಿಡಿಯೋ ಸಖತ್ ವೈರಲ್..!
ರಸ್ತೆ ಮಧ್ಯದಲ್ಲಿ ಮರಿಯಾನೆಗಳು ಆಟವಾಡುತ್ತಿರುವ ವಿಡಿಯೋವೊಂದನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಡೆ ಪೋಷಕ ಆನೆಗಳು ಆಹಾರ ಹುಡುಕುತ್ತಿದ್ದರೆ, ಮರಿಯಾನೆಗಳು ಆಟವಾಡುವಲ್ಲಿ ಬ್ಯುಸಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋಗಳಿಗೇನೂ ಬರವಿಲ್ಲ. ಅದೇ ರೀತಿ ಪ್ರಾಣಿಗಳ ವಿಡಿಯೋಗಳೂ ಸಹ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೇ ರೀತಿ, ಪ್ರಾಣಿ ಪ್ರಿಯರು ಸಹ ಇಂತಹ ವೈರಲ್ ವಿಡಿಯೋಗಳನ್ನು ನೋಡಿ ಲೈಕ್ ಕೊಟ್ಟು ಖುಷಿ ಪಡುತ್ತ ಇರುತ್ತಾರೆ. ಇದೀಗ, ಆನೆ ಮರಿಗಳ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಂತಹದ್ದೇನಿದೆ ಅಂತೀರಾ..? ಮುಂದೆ ಓದಿ..
ರಾತ್ರಿಯ ವೇಳೆ ರಸ್ತೆಯಲ್ಲಿ ಎರಡು ಆನೆ ಮರಿಗಳು ಆಟವಾಡುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಮುದ್ದಾದ ಆನೆ ಮರಿಗಳ ವೈರಲ್ ವಿಡಿಯೋ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸೋಮವಾರ ತಮ್ಮ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು.
ಹೊಂಡಕ್ಕೆ ಬಿದ್ದ ಮರಿಯ ರಕ್ಷಿಸುವಾಗ ಪ್ರಜ್ಞೆ ತಪ್ಪಿದ ತಾಯಾನೆ: ಸಿಪಿಆರ್ ಮಾಡಿ ಜೀವ ಉಳಿಸಿದ ರಕ್ಷಕರು
ಐಎಎಸ್ ಅಧಿಕಾರಿ ಹಂಚಿಕೊಂಡಿರುವ ಈ ವಿಡಿಯೋ ಕ್ಲಿಪ್‌ನಲ್ಲಿ ಆನೆ ಮರಿಗಳು ರಸ್ತೆ ಮಧ್ಯದಲ್ಲೇ ಆಟವಾಡುತ್ತಿರುವುದನ್ನು ನೀವು ನೋಡಬಹುದು. ಒಂದು ಕಡೆ ಆ ಮರಿಯಾನೆಗಳ ಪೋಷಕರು ಆಹಾರಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿ ತೀವ್ರ ಹುಡುಕಾಟದಲ್ಲಿದ್ದರೆ, ಇತ್ತ ಆನೆ ಮರಿಗಳು ಆ ಬಗ್ಗೆ ಅರಿವೇ ಇಲ್ಲದೆ ತಮ್ಮ ಪಾಡಿಗೆ ತಾವು ಆಟವಾಡುತ್ತಿವೆ.
ಆನೆ ಮರಿಗಳು ತಮ್ಮ ಸೊಂಡಿಲಿನಲ್ಲಿ ಆಟವಾಡುತ್ತಿರುವುದನ್ನು ವೀಕ್ಷಿಸಿದ ಪ್ರಾಣಿ ಪ್ರಿಯರು ಸಹ ಸಿಕ್ಕಾಪಟ್ಟೆ ಖುಷಿ ವ್ಯಕ್ತಡಿಸಿದ್ದಾರೆ. ರಸ್ತೆಯಲ್ಲಿ ಆನೆಗಳಿರುವುದನ್ನು ನೋಡಿ ನಿಂತುಕೊಂಡಿರುವ ವಾಹನದಲ್ಲಿದ್ದ ಜನರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ವಿಡಿಯೋದ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಐಎಎಸ್ ಅಧಿಕಾರಿ ಟ್ವೀಟ್ ಹೀಗಿದೆ ನೋಡಿ:
‘’ಒಂದು ಕಡೆ ಪ್ರಬಲ ಪೋಷಕರು ಆಹಾರ ಹುಡುಕುವುದರಲ್ಲಿ ಬ್ಯುಸಿಯಾಗಿದ್ದರೆ, ಎರಡು ಮರಿ ಆನೆಗಳು ಆಟವಾಡಲು ನುಸುಳಿವೆ’’ ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸೋಮವಾರ ಶೇರ್ ಮಾಡಿಕೊಂಡಿದ್ದಾರೆ.
ಆನೆ ಮರಿಗಳ ಕ್ಯೂಟ್ ವಿಡಿಯೋ ಇಲ್ಲಿದೆ..
ಈ ವಿಡಿಯೋ ನೋಡಿ ನಿಮಗೆ ಖುಷಿಯಾಗಿರಬೇಕಲ್ಲ. ಅದೇ ರೀತಿ, ಐಎಎಸ್ ಅಧಿಕಾರಿ ಹಂಚಿಕೊಂಡಿರುವ ಈ ವಿಡಿಯೋವನ್ನು 38 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಇನ್ನು, ಈ ವಿಡಿಯೋಗೆ ಸಾಕಷ್ಟು ಕಮೆಂಟ್‌ಗಳು ಸಹ ಬಂದಿದ್ದು, ಮರಿ ಆನೆಗಳು ಆಟವಾಡುತ್ತಿರುವ ವಿಡಿಯೋವನ್ನು ಹಲವು ಟ್ವಿಟ್ಟರ್ ಬಳಕೆದಾರರು ಮೆಚ್ಚಿಕೊಂಡಿದ್ದಾರೆ.
‘’ತುಂಬಾ ಕ್ಯೂಟ್ ಆಗಿರುವ ಪುಟ್ಟ ಮಕ್ಕಳು. ಅವುಗಳನ್ನು ಇಷ್ಟಪಡುತ್ತೇನೆ’’ ಎಂದು ಬಳಕೆದಾರರೊಬ್ಬರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಗೆಯಲ್ಲಿ 3 km ಈಜಿ ಮಾವುತನ ರಕ್ಷಿಸಿದ ಆನೆ: ವಿಡಿಯೋ ವೈರಲ್
ಮಾನವ - ಪ್ರಾಣಿಗಳ ಸಂಘರ್ಷ..?
ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದಲ್ಲವೇ. ಅದೇ ರೀತಿ, ಈ ವೈರಲ್‌ವಿಡಿಯೋಗೂ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ. ಹಲವರು ಈ ಕ್ಯೂಟ್ ವಿಡಿಯೋವನ್ನುಕೇವಲ ಮನರಂಜನೆಯ ದೃಷ್ಟಿಯಿಂಂದ ನೋಡಿ ಮೆಚ್ಚಿಕೊಂಡಿದ್ದರೆ, ಇನ್ನು ಹಲವರು ಈ ವಿಡಿಯೋಗೆ ವಿಭಿನ್ನ ದೃಷ್ಟಿಯನ್ನೂ ನೀಡಿದ್ದಾರೆ.
ಹೌದು, ಇದನ್ನು ಮಾನವ - ಪ್ರಾಣಿಗಳ ನಡುವಿನ ಸಂಘರ್ಷವೆಂದೂ ಕೆಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಬಳಕೆದಾರರೊಬ್ಬರು, ‘’ವಾಹನ ಹೆಚ್ಚು ಶಬ್ದ ಮಾಡುತ್ತಿಲ್ಲ. ವಾಹನದ ಬೆಳಕು ಸಹ ತೊಂದರೆ ನೀಡುತ್ತಿಲ್ಲ. ಇದು ಮಾನವರಿಗೆ ರಕ್ಷಣೆಯನ್ನು ಒದಗಿಸಬಬಹುದು. ಅದರೆ, ಪ್ರಾಣಿಗಳ ಸ್ಥಳಕ್ಕೆ ಮಾನವರು ಒಳನುಗ್ಗುವಂತಾಗುತ್ತದೆ’’ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಂದೆಡೆ, ತಾಯಿ ಆನೆಯೊಂದು ತನ್ನ ಮರಿಯಾನೆಯನ್ನು ಮಳೆಯಿಂದ ನೆನೆಯದಂತೆ ರಕ್ಷಿಸುತ್ತಿರುವ ವಿಡಿಯೋವೊಂದು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿತ್ತು. ಈ ವಿಡಿಯೋವನ್ನು ಸಹ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ಪ್ರದೇಶದಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿತ್ತು.