: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕಿನ ದಮನವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ. ಒಬಾಮ ತನ್ನ ಅಧಿಕಾರವಧಿಯಲ್ಲಿ ಎಷ್ಟು ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದಾರೆ ಎಂಬುದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕಿನ ದಮನವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ. ಒಬಾಮ ತನ್ನ ಅಧಿಕಾರವಧಿಯಲ್ಲಿ ಎಷ್ಟು ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದಾರೆ ಎಂಬುದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ತಾನು ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಒಬಾಮಾ ಎಷ್ಟು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ದಾಳಿ ನಡೆಸಿದ್ದೇನೆ ಎಂಬುದನ್ನು ಅವರು ಎಂದಿಗೂ ಮರೆಯಬಾರದು. ಜಗತ್ತಿನಾದ್ಯಂತ ಜೀವಿಸುವ ಎಲ್ಲರೂ ಒಂದೇ ಕುಟುಂಬ ಎಂದು ಭಾವಿಸುವ ಒಂದೇ ಒಂದು ದೇಶ ಭಾರತ ಎಂಬುದನ್ನು ಒಬಾಮ ಮರೆಯಬಾರದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath singh), ಭಾರತದ ಜನ ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟಿರುವ ಜನರಾಗಿದ್ದು, ವಿಶ್ವದಲ್ಲಿರುವ ಎಲ್ಲಾ ಜನರು ಒಂದೇ ಕುಟುಂಬ ಎಂದು ನಂಬುವವರಾಗಿದ್ದಾರೆ. ಇದರ ಜೊತೆಗೆ ಒಬಾಮ ತಮ್ಮ ಅಧಿಕಾರವಧಿಯ ವೇಳೆ ವಿಶ್ವದ ಎಷ್ಟೊಂದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ದಾಳಿ ಮಾಡಿಲ್ಲ ಎಂಬುದನ್ನು ಮರೆಯಬಾರದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

ಅಮೆರಿಕಾ ಮಾಜಿ ಅಧ್ಯಕ್ಷ ಒಬಾಮ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಒಬಾಮ ಹೇಳಿಕೆಗೆ ತಿರುಗೇಟು ನೀಡಿದ್ದರು. ಒಬಾಮ ಅಮೆರಿಕಾ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಆರು ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ಹಾಕಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. 

ಮೋದಿ ಅಮೆರಿಕಾ ಭೇಟಿ ಸಂದರ್ಭದಲ್ಲೇ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಒಬಾಮ, ಭಾರತ ಒಂದು ವೇಳೆ ಅಲ್ಲಿನ ಜನಾಂಗೀಯ ಅಲ್ಪಸಂಖ್ಯಾತರ ರಕ್ಷಣೆ ಮಾಡದೇ ಹೋದರೆ ಕೆಲವು ಹಂತಗಳಲ್ಲಿ ದೇಶವು ಬೇರ್ಪಡಲು ಪ್ರಾರಂಭಿಸುವ ಬಲವಾದ ಸಾಧ್ಯತೆ ಇದೆ ಎಂದು ಹೇಳಿದ ಒಬಾಮ, ಇದರ ಜೊತೆಗೆ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಮೋದಿ ಅವರ ಭೇಟಿ ವೇಳೆ ಅವರೊಂದಿಗೆ ಚರ್ಚೆ ಮಾಡುವಂತೆ ಅಮೆರಿಕಾ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರಿಗೂ ಹೇಳಿದರು.

ಭಾರತವೂ ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಹಿಂದೂ, ಮುಸ್ಲಿಂ (Muslim) ಹಾಗೂ ಕ್ರಿಶ್ಚಿಯನ್ (Christian) ಸಮುದಾಯವೂ ಸೇರಿದಂತೆ ಎಲ್ಲಾ ಸಮುದಾಯದ ಜನ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳಲ್ಲಿಯೂ ಇಲ್ಲಿರುವಂತೆ 72 ಪಂಗಡಗಳಿಲ್ಲ ಎಂಬುದನ್ನು ಅಷ್ಟೇ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇಷ್ಟೊಂದು ವೈವಿಧ್ಯತೆಯ ಪಂಗಡಗಳಿರುವುದು ಭಾರತದಲ್ಲಿ ಮಾತ್ರ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

ಒಬಾಮ ಭಾರತ ಟೀಕಿಸುವ ಬದಲು ಹೊಗಳಲು ಶಕ್ತಿ ವ್ಯಯಿಸಲಿ; IRF ಕಮಿಷನರ್ ಕಿವಿಮಾತು!

ಇತ್ತ ಒಬಾಮ ಭಾರತ ಸರ್ಕಾರದ ಏಕತೆಯ ಪ್ರಶ್ನೆ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಸರ್ಮಾ (Himant biswas sarma) ಕೂಡ ಒಬಾಮ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಇಂತಹ ಸಾಕಷ್ಟು ಹುಸೈನ್ ಒಬಾಮರಿದ್ದು, ವಾಷಿಂಗ್ಟನ್‌ಗೆ ಹೋಗುವ ಮೊದಲು ನಾವು ಇಲ್ಲಿರುವ ಒಬಾಮರ ಬಗ್ಗೆ ಕಾಳಜಿವಹಿಸಬೇಕಿದೆ. ಅಸ್ಸಾಂ ಪೊಲೀಸರು ಇಲ್ಲಿನ ಆದ್ಯತೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.