ಅಮೆರಿಕ ಸಂಸದರ ಹೊಗಳಿ ರಾಹುಲ್ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ
ದೇಶದ ವಿಷಯದ ಬಗ್ಗೆ ಮಾತನಾಡುವಾಗ ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡುವುದು ಅತ್ಯಗತ್ಯ. ನನ್ನ ಭಾಷಣಕ್ಕೆ ಪಕ್ಷಭೇದ ಮರೆತು ಎಲ್ಲ ಸಂಸದರು ಬಂದಿದ್ದು ಖುಷಿ ತಂದಿದೆ’ ಎಂದು ಮೋದಿ ಬಣ್ಣಿಸಿದರು.
ವಾಷಿಂಗ್ಟನ್ (ಜೂನ್ 24, 2023): ಗುರುವಾರ ಇಲ್ಲಿ ಆಯೋಜಿಸಲಾಗಿದ್ದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಭಾಗಿಯಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಬಹುವಾಗಿ ಶ್ಲಾಘಿಸಿ, ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕಾಲೆಳೆದರು.
‘ಭಾರತದೊಂದಿಗೆ ನಿಮ್ಮ ದೇಶದ ಸಂಬಂಧವನ್ನು ಸಂಭ್ರಮಿಸುವ ಸಲುವಾಗಿ ನೀವೆಲ್ಲಾ ಒಂದಾಗಿ ಆಗಮಿಸಿದ್ದು ಶ್ಲಾಘನೀಯ. ದೇಶದೊಳಗೆ ವಿವಿಧ ವಿಷಯಗಳ ಕುರಿತು ಭಿನ್ನಮತ ಉಂಟಾಗಬಹುದು ಹಾಗೂ ಆ ಬಗ್ಗೆ ಚರ್ಚೆ ನಡೆಯಬೇಕಾಗಬಹುದು. ಆದರೆ ಅದೆಲ್ಲ ಆಂತರಿಕವಾಗಿ ನಡೆಯಬೇಕು. ದೇಶದ ವಿಷಯದ ಬಗ್ಗೆ ಮಾತನಾಡುವಾಗ ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡುವುದು ಅತ್ಯಗತ್ಯ. ನನ್ನ ಭಾಷಣಕ್ಕೆ ಪಕ್ಷಭೇದ ಮರೆತು ಎಲ್ಲ ಸಂಸದರು ಬಂದಿದ್ದು ಖುಷಿ ತಂದಿದೆ’ ಎಂದು ಬಣ್ಣಿಸಿದರು.
ಇದನ್ನು ಓದಿ: ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ
ಈ ಮೂಲಕ ಇತ್ತೀಚಿನ ಬ್ರಿಟನ್ ಹಾಗೂ ಅಮೆರಿಕ ಭೇಟಿ ವೇಳೆ ಭಾರತ ಸರ್ಕಾರವನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತನೆಯನ್ನು ಪರೋಕ್ಷವಾಗಿ ಟೀಕಿಸಿದರು.
ಎಐ ಎಂದರೆ ಅಮೆರಿಕ, ಇಂಡಿಯಾ: ಮೋದಿ ಬಣ್ಣನೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಹ್ರಸ್ವರೂಪವಾದ ಎ.ಐ. ಯನ್ನು ಅಮೆರಿಕ - ಇಂಡಿಯಾ ಎಂಬುದರ ಹ್ರಸ್ವರೂಪವಾಗಿಯೂ ಮೋದಿ ತಮ್ಮ ಅಮೆರಿಕ ಸಂಸತ್ತಿನ ಭಾಷಣದಲ್ಲಿ ಬನ್ಣಿಸಿದರು. ‘ಹಿಂದಿನ ಹಲವು ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎ.ಐ), ವಲಯದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ ಇದೇ ವೇಳೆ ಇನ್ನೊಂದು ಎ.ಐ. ಎನ್ನಿಸಿಕೊಂಡ ‘ಅಮೆರಿಕ - ಇಂಡಿಯಾ’ ಸಂಬಂಧದಲ್ಲೂ ಸಾಕಷ್ಟು ಸುಧಾರಣೆಗಳು ಆಗಿವೆ’ ಎಂದು ಹೇಳಿದರು. ಆಗ ಪ್ರೇಕ್ಷಕರು ಕರತಾಡತನಗೈದರು.
ಇದನ್ನೂ ಓದಿ: ಅಮೆರಿಕಾದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಔತಣಕೂಟ, ಮೆನುವಿನಲ್ಲಿ ಏನೇನಿದೆ?