ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮಾಡಿರುವ ಟೀಕೆ ಭಾರಿ ಚರ್ಚೆಯಾಗುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಮನವಾಗುತ್ತಿದೆ ಅನ್ನೋ ಒಬಾಮಾ ಮಾತು ರಾಜಕೀಯ ಬಡಿದಾಟಕ್ಕೂ ಕಾರಣವಾಗಿದೆ. ಈ ವಿಚಾರದಲ್ಲಿ ರಾಜಕೀಯ ಜೋರಾಗುತ್ತದ್ದಂತೆ, ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಮಾಜಿ ಅಧ್ಯಕ್ಷ ಮಹತ್ವದ ಕಿವಿಮಾತು ಹೇಳಿದ್ದಾರೆ.
ನ್ಯೂಯಾರ್ಕ್(ಜೂ.26) ಪ್ರಧಾನಿ ನರೇಂದ್ರ ಮೋದಿ ಅಮರಿಕ ಹಾಗೂ ಈಜಿಪ್ಟ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಆದರೆ ಮೋದಿ ಭೇಟಿ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಿಡಿಸಿದ ಬಾಂಬ್ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಮನವಾಗುತ್ತಿದೆ ಎಂದು ಒಬಾಮಾ ಆರೋಪಿಸಿದ್ದರು. ಇದು ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ವಾದ ವಿವಾದ ಜೋರಾಗುತ್ತಿದ್ದಂತೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಮಾಜಿ ಆಯುಕ್ತ ಜಾನಿ ಮೂರ್ ಕಿವಿ ಮಾತು ಹೇಳಿದ್ದಾರೆ. ಬರಾಕ್ ಒಬಾಮ ಭಾರತವನ್ನು ಟೀಕಿಸಲು ಸಮಯ ವ್ಯರ್ಥ ಮಾಡುವ ಬದಲು ಭಾರತವನ್ನು ಹೊಗಳಲು ಶಕ್ತಿಯನ್ನು ವ್ಯಯಿಸವುದು ಉತ್ತಮ ಎಂದು ಜೂನಿ ಮೂರ್ ಹೇಳಿದ್ದಾರೆ.
ಖಾಸಗಿ ಮಾಧಮ್ಯಕ್ಕೆ ನೀಡಿದ ಸಂದರ್ಶನದಲ್ಲಿ ಜಾನಿ ಮೂರ್ ಒಬಾಮಾಗೆ ಕಿವಿ ಮಾತು ಹೇಳಿದ್ದರೆ, ಪ್ರಧಾನಿ ಮೋದಿ ನಾಯಕತ್ವ ಹಾಗೂ ಮೋದಿ ನಾಯಕತ್ವದಲ್ಲಿ ಭಾರತದ ಬದಲಾವಣೆಯನ್ನು ಪ್ರಶಂಸಿಸಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತವನ್ನು ಟೀಕಿಸುವುದಕ್ಕಿಂತ ಹೊಗಳಲು ಶಕ್ತಿ ವ್ಯಯಿಸಿದರೆ ಉತ್ತಮ ಅನ್ನೋದು ನನ್ನ ಭಾವನೆ. ಭಾರತ ಅತ್ಯಂತ ವೈವಿಧ್ಯಮಯ ದೇಶ. ಆದರೆ ಅಮೆರಿಕದ ರೀತಿ ಭಾರತವೂ ಪರಿಪೂರ್ಣ ದೇಶವಲ್ಲ. ಭಾರತದ ಪ್ರಮುಖ ಶಕ್ತಿಯೇ ವೈವಿದ್ಯತೆ. ಒಬಾಮ ಅವಧಿಯಲ್ಲಿ ಮೋದಿಗೆ ನೆರವು ನೀಡಲು ಸಾಧ್ಯವಾಗಿಲ್ಲ. ಆದರೆ ಮೋದಿಯನ್ನು ಹೊಗಳಿದ್ದಾರೆ. ನಾನು ಮೋದಿ ಜೊತೆ ಕೆಲ ಸಮಯ ಕಳೆದಿದ್ದೇನೆ. ಅವರ ದೂರದೃಷ್ಟಿ, ನಾಯಕತ್ವ, ದೇಶವನ್ನು ಮುನ್ನಡೆಸುವ ರೀತಿಯನ್ನು ಮೆಚ್ಚಿಕೊಂಡಿದ್ದೇನೆ ಎಂದು ಜಾನಿ ಮೂರ್ ಹೇಳಿದ್ದಾರೆ.
ಒಬಾಮ ಕಾಲದಲ್ಲಿ 6 ಮುಸ್ಲಿಂ ದೇಶದ ಮೇಲೆ ಬಾಂಬ್ ದಾಳಿ, ನಿರ್ಮಲಾ ಸೀತಾರಾಮನ್ ತಿರುಗೇಟು!
ಭಾರತದಲ್ಲಿ ಮುಸ್ಲಿಮರ ರಕ್ಷಣೆಯ ಬಗ್ಗೆ ಗಮನ ಹರಿಸುವುದು ಪ್ರಮುಖ ವಿಷಯವಾಗಿದೆ. ಈ ಕುರಿತಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ಮೋದಿಗೆ ತಿಳಿಹೇಳಬೇಕಿದೆ ಎಂದು ಒಬಮಾ ಹೇಳಿದ್ದರು. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಈ ಮಾತು ಭಾರಿ ಸಂಚಲನ ಸೃಷ್ಟಿಸಿತು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಇದೇ ಮಾತನ್ನು ಹಿಡಿದು ಮೋದಿ ವಿರುದ್ಧ ಮುಗಿಬಿದ್ದಿತ್ತು. ಮೋದಿ ಸರ್ವಾಧಿಕಾರಿ ಎಂಬಂತೆ ಬಿಂಬಿಸಿತ್ತು
ಇತ್ತ ವಿಪಕ್ಷಗಳ ಟೀಕೆ, ಒಬಾಮಾ ಮಾತಿಗೆ ಬಿಜೆಪಿ ಕೂಡ ತಿರೇಗೇಟು ನೀಡಿತ್ತು. ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ 6 ಮುಸ್ಲಿಂ ದೇಶದ ಮೇಲೆ ಬರೋಬ್ಬರಿ 26,000 ಹೆಚ್ಚು ಬಾಂಬ್ ದಾಳಿ ಮಾಡಿದ್ದಾರೆ. ಭಾರತದ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮಾತನಾಡುವ ಒಬಾಮ, ಅಮೆರಿಕ ಮಾಡಿದ ಕೃತ್ಯಗಳ ಬಗ್ಗೆ ಮೌನವಹಿಸಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳು ದಮನವಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದರು.
ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತದಲ್ಲಿನ ‘ಹುಸೇನ್ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ
ಭಾರತದ ಕುರಿತಾಗಿ ಪ್ರಧಾನಿ ಮೋದಿ ಅವರು ಎಲ್ಲರ ಎದುರು ಮಾತನಾಡುವಾಗ, ಅಮೆರಿಕದ ಮಾಜಿ ಅಧ್ಯಕ್ಷರು ಭಾರತದ ಮುಸ್ಲಿಮರ ಬಗ್ಗೆ ಮಾತನಾಡಿರುವುದು ಆಶ್ಚರ್ಯ ಮೂಡಿಸಿದೆ. ಒಬಾಮ ಅವರು ಸಿರಿಯಾ, ಯೆಮನ್, ಸೌದಿ ಮತ್ತು ಇರಾಕ್ ಮೇಲೆ ಬಾಂಬ್ ದಾಳಿ ನಡೆಸಿರಲಿಲ್ಲವೇ. ಇದಾದ ಬಳಿಕವೂ ಅವರು ಈ ರೀತಿಯ ಆರೋಪ ಮಾಡಿದರೆ ಜನ ನಂಬುತ್ತಾರೆಯೇ ಎಂದು ಅವರು ಅವರು ಪ್ರಶ್ನಿಸಿದ್ದಾರೆ.
