Asianet Suvarna News Asianet Suvarna News

Salman Khurshid;1984ರ ದಂಗೆಯಲ್ಲಿ ಹಿಂದೂ, ಸಿಖ್‌ರ ಸಾವಿಗೆ ಮುಸ್ಲಿಮರ ವಿರುದ್ಧ ಮಾಡಿದ ಪಾಪ ಕಾರಣ; ಕಾಂಗ್ರೆಸ್ ನಾಯಕ!

 • ಹಿಂದುತ್ವವನ್ನು ಬೋಕೋ ಹರಾಂ, ಐಸಿಸ್‌ಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿ
 • ಆಯೋಧ್ಯೆ ವರ್ಡಿಕ್ಟ್ ಪುಸ್ತದಲ್ಲಿ ಹಿಂದುತ್ವವನ್ನು ಉಗ್ರವಾದಕ್ಕೆ ಹೋಲಿಕೆ
 • ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪುಸ್ತಕದ ಮೂಲಕ ವಿವಾದ ಇದೇ ಮೊದಲ್ಲ
 • ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದಲ್ಲೂ ಹಿಂದೂಗಳ ವಿರುದ್ಧ ಹರಿಹಾಯ್ದಿದ್ದ ಖುರ್ಷಿದ್
 • ಹಿಂದೂ, ಸಿಖ್‌ರ ನೋವಿನಲ್ಲಿ ವಿಕೃತ ಆನಂದ ಕಂಡಿದ್ದ ಸಲ್ಮಾನ್ ಖುರ್ಷಿದ್
   
Hindus Sikhs paid for their sins during 1984 riots Salman Khurshid controversy Before Hindutva remark ckm
Author
Bengaluru, First Published Nov 12, 2021, 10:33 PM IST
 • Facebook
 • Twitter
 • Whatsapp

ನವದೆಹಲಿ(ನ.12): ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್( Salman Khurshid)ಸಕ್ರಿಯ ರಾಜಕಾರಣದಲ್ಲಿ ಇದ್ದರೂ ಸಾರ್ವಜನಿಕ ಭೇಟಿ ಸೇರಿದಂತೆ ಇತರ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ತನ್ನ ಹೆಸರು ನೇಪಥ್ಯಕ್ಕೆ ಸರಿಯುತ್ತಿದೆ ಅಂದುಕೊಂಡ ಸಲ್ಮಾನ್ ಖುರ್ಷಿದ್ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಈ ಮೂಲಕ ಸಲ್ಮಾನ್ ಖುರ್ಷಿದ್ ಇದೀಗ ದೇಶಾಂದ್ಯಂತ ಸುದ್ದಿಯಲ್ಲಿದ್ದಾರೆ. ಖುರ್ಷಿದ್ ಪರ ವಿರೋಧಗಳು, ಚರ್ಚೆಗಳು ನಡೆಯುತ್ತಿದೆ.  ಹಿಂದುತ್ವವನ್ನು(Hindutva) ಭಯೋತ್ಪಾದನೆಗೆ(Terrorism) ಹೋಲಿಕೆ ಮಾಡಿ ಭಾರಿ ವಿವಾದ ಸೃಷ್ಟಿಸಿ್ದ ಸಲ್ಮಾನ್ ಖುರ್ಷಿದ್ ಇದೇ ರೀತಿಯ ವಿವಾದವನ್ನು ಈ ಹಿಂದೆಯೂ ಮಾಡಿದ್ದಾರೆ. ಇದೀಗ ಆಯೋಧ್ಯೆ ವರ್ಡಿಕ್ಟ್(ayodhya verdict) ಪುಸ್ತಕದ ಮೂಲಕ ವಿವಾದ, ಈ ಹಿಂದೆ ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಹಿಂದುತ್ವ, ಹಿಂದೂ ಧರ್ಮ ಹಾಗೂ ಹಿಂದೂಗಳ ಭಾವನೆಗೆ ನೋವುನ್ನುಂಟು ಮಾಡಿ ಆನಂದ ಕಾಣುತ್ತಿರುವುದು ಇದೇ ಮೊದಲಲ್ಲ.  ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್, 1984ರ ಸಿಖ್ ದಂಗೆಯನ್ನು(1984 riots) ಉಲ್ಲೇಖಿಸಿದ್ದಾರೆ. 1984ರಲ್ಲಿ ಸಿಖ್ ದಂಗೆ ಮುಸ್ಲಿಮರಿಗೆ ಅತೀವ ತೃಪ್ತಿ ನೀಡಿದ ಘಟನೆಯಾಗಿದೆ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಸಲ್ಮಾನ್ ಖುರ್ಷಿದ್ ನೀಡಿದ್ದಾರೆ

1984ರಲ್ಲಿ ಸಿಖ್‌ರು ಹಾಗೂ ಹಿಂದೂಗಳು ಅನುಭವಿಸಿದ ನೋವು ಅವರು ಮಾಡಿದ ಪಾಪದ ಫಲ ಎಂದಿದ್ದಾರೆ. 1947ರಲ್ಲಿ ಭಾರತ ವಿಭಜನೆಯಾಗುವ ಸಂದರ್ಭ ಅನುಭವಿಸಿದ ನೋವನ್ನು ಮುಸ್ಲಿಮರು ಮರೆತಿಲ್ಲ. ಇದರ ಈ ನೋವಿನ ಪಾಪದ ಫಲವನ್ನು ಸಿಖ್‌ರು ಹಾಗೂ ಹಿಂದೂಗಳು 1984ರ ಸಿಖ್ ದಂಗೆಯಲ್ಲಿ ಅನುಭವಿಸಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

 

ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌!

1947ರಲ್ಲಿ ಸುರಿದು ಮುಸ್ಲಿಮರ ರಕ್ತದಿಂದ 1984ರಲ್ಲಿ ಹಿಂದೂ ಹಾಗೂ ಸಿಖ್‌ರು ಬೆಲೆ ತೆತ್ತರು ಎಂದು ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ಇಂದಿರಾ ಗಾಂಧಿ ಹಾಗೂ ಜವಾಹರ್ ಲಾಲ್ ನೆಹರೂವನ್ನು ಹೊಗಳಲು ಮತ್ತೆ ಹಿಂದೂಗಳು ಹಾಗೂ ಸಿಖ್‌ರ ನೋವನ್ನೇ ಎಳೆದು ತಂದಿದ್ದಾರೆ. ಜವಾಹರ್ ಲಾಲ್ ನೆಹರೂ ಬಳಿಕ  ಭಾರತದಲ್ಲಿ ಮುಸ್ಲಿಮರ ಏಕೈಕ ಭರವಸೆ ಹಾಗೂ ಆಶಾಕಿರಣವಾಗಿರುವ ನಾಯಕಿ ಇಂದಿರಾ ಗಾಂಧಿ. ಇಂದಿರಾ ಗಾಂಧಿಯನ್ನೇ ಹತ್ಯೆ ಮಾಡಿದ ಸಿಖರ್ ಅದಕ್ಕೆ ಬೆಲೆ ತೆತ್ತರು ಎಂದು ಸಿಖ್ ಹತ್ಯಾಕಾಂಡವನ್ನು ಸಲ್ಮಾನ್ ಖುರ್ಷಿದ್ ಸಮರ್ಥಿಸಿಕೊಂಡಿದ್ದಾರೆ.

ಎಟ್ ಹೋಮ್ ಇನ್ ಇಂಡಿಯಾ ಪುಸ್ತಕದಲ್ಲಿ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ಸಿಖ್ ಹಾಗೂ ಹಿಂದೂಗಳನ್ನು ಹತ್ಯೆ ಮಾಡಿರುವುದು ಮುಸ್ಲಿಮರ ಸಂತಸಕ್ಕೆ, ತೃಪ್ತಿಗೆ ಕಾರಣವಾಗಿದೆ ಎಂದು ಸಲ್ಮಾನ್ ಖುರ್ಷಿದ್ ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಈ ಪುಸ್ತಕಕ್ಕೂ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿವಾದ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. 

Hinduism and Hindutva: ಮುಸ್ಲಿಂ, ಸಿಖರನ್ನು ಹೊಡೆಯುವುದು ಹಿಂದುತ್ವ; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ!

ಇದೀಗ ಖುರ್ಷಿದ್ ಹಿಂದುತ್ವವನ್ನು ಬೊಕೋ ಹರಾಮ್ ಹಾಗೂ ಐಸಿಸ್ ಭಯೋತ್ಪಾದನೆ ಸಂಘಟನಗಳಿಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಋಷಿ ಮುನಿಗಳು, ಸನಾತನ ಧರ್ಮಗಳಿಂದ ಕೂಡಿದ್ದ ಹಿಂದೂ ಧರ್ಮವನ್ನು ಈಗಿನ ಹಿಂದುತ್ವವಾದಿಗಳು ಮೂಲೆಗುಂಪು ಮಾಡಿದ್ದಾರೆ. ಸದ್ಯ ಇರುವ ಹಿಂದುತ್ವ ಭಯೋತ್ಪಾದನೆ ಸಂಘಟನಗಳಾದ ಬೋಕೋ ಹರಾಂ ಐಸಿಸ್ ನಂತೆ ಬದಲಾಗಿದೆ ಎಂದು ಖುರ್ಷಿಕ್ ಆಯೋಧ್ಯೆ ವರ್ಡಿಕ್ಟ್ ಪುಸ್ತಕದಲ್ಲಿ ಹೇಳಿದ್ದಾರೆ.

ಸಲ್ಮಾನ್ ಖುರ್ಷಿದ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂ ಧರ್ಮ, ಹಿಂದುತ್ವದ ವಿರುದ್ಧ ಕಾಂಗ್ರೆಸ್ ಪ್ರತಿಭಾರಿ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ನಾಯಕರು ಒಬ್ಬರ ಹಿಂದೂಬ್ಬರು ಹಿಂದುತ್ವದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದು ಬೇಸರದ ವಿಚಾರ ಎಂದು ಬಿಜೆಪಿ ಹೇಳಿದೆ.
 

Follow Us:
Download App:
 • android
 • ios