Asianet Suvarna News Asianet Suvarna News

Hinduism and Hindutva: ಮುಸ್ಲಿಂ, ಸಿಖರನ್ನು ಹೊಡೆಯುವುದು ಹಿಂದುತ್ವ; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ!

  • ಹಿಂದೂ ಧರ್ಮ ಹಾಗೂ ಹಿಂದುತ್ವದ ವ್ಯತ್ಯಾಸ ಹೇಳಲು ಹೋಗಿ ವಿವಾದ ಸೃಷ್ಟಿ
  • ಎರಡೂ ಒಂದೇ ಆಗಿದ್ದರೆ ಬೇರೆ ಬೇರೆ ಹೆಸರು ಯಾಕೆ? ರಾಹುಲ್ ಪ್ರಶ್ನೆ
  • ಸಿಖ್, ಮುಸ್ಲಿಂಮರನ್ನು ಹೊಡೆಯುುದು ಹಿಂದುತ್ವ ಎಂದು ರಾಹುಲ್ ಗಾಂಧಿ
  • ಸಲ್ಮಾನ್ ಖುರ್ಷಿದ್ ವಿವಾದ ಬೆನ್ನಲ್ಲೇ ರಾಹುಲ್ ಹೇಳಿಕೆ ಸಂಚಲನ
Hindutva about beating a Sikh or a Muslim rahul Gandhi controversial statement after salman khurshid ckm
Author
Bengaluru, First Published Nov 12, 2021, 6:10 PM IST
  • Facebook
  • Twitter
  • Whatsapp

ನವದೆಹಲಿ(ನ.12):  ಬೊಕೊ ಹರಾಂ, ಐಸಿಸಿ ಉಗ್ರ ಸಂಘಟನೆಗಳಿಗೆ ಹಿಂದುತ್ವವನ್ನು(Hindutva) ಹೋಲಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್(Salman Khurshid) ವಿವಾದ ಸೃಷ್ಟಿಸಿದ್ದಾರೆ. ಇದೀಗ ಪರ ವಿರೋಧಳು, ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಹಿಂದು ಧರ್ಮ(Hinduism) ಹಾಗೂ ಹಿಂದುತ್ವ ವ್ಯತ್ಯಾಸ ಹೇಳಲು ಹೋಗಿ ವಿವಾದ ಸೃಷ್ಟಿಸಿದ್ದಾರೆ. ಮುಸ್ಲಿಂರನ್ನು ಸಿಖರನ್ನು ಹೊಡೆಯುವುದು ಇದೀಗ ಹಿಂದುತ್ವವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮುಂಬರುವ ವಿಧಾನ ಸಭೆ(Assmebly Election) ಚುನಾವಣೆ ಹಿನ್ನಲೆಯಲ್ಲಿ ಮೈಕೊಡವಿ ನಿಂತಿರುವ ಕಾಂಗ್ರೆಸ್(Congress) ಜನ ಜಾಗರಣ ಎಂಬ ಡಿಜಿಟಲ್ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ರಾಹುಲ್ ಹಾಂಧಿ, ಹಿಂದು ಧರ್ಮ ಹಾಗೂ ಹಿಂದುತ್ವ ಬೇರೆ ಬೇರೆ. ಒಂದೇ ಆಗಿದ್ದರೆ ಎರಡು ಹೆಸರು ಯಾಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.  ಹಿಂಧೂ ಧರ್ಮ ಮುಸ್ಲಿಮರು, ಸಿಖರನ್ನು ಥಳಿಸತ್ತದೆಯೇ? ಖಂಡಿತ ಇಲ್ಲ, ಆದರೆ ಹಿಂದುತ್ವ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌

ಥಳಿಸುವ ಹಿಂದುತ್ವ ಯಾವ ಪುಸ್ತಕದಲ್ಲಿ ಬರೆದಿದೆ. ನಾನು ಎಲ್ಲಿಯೂ ನೋಡಿಲ್ಲ, ಓದಿಲ್ಲ. ನಾನು ಉಪನಿಶತ್ ಓದಿದ್ದೇನೆ. ಆದರೆ ಎಲ್ಲಿಯೂ ಹೊಡೆಯುವ ಥಳಿಸುವ ಹಿಂದುತ್ವದ ಉಲ್ಲೇಖವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ನಾವು ಇಷ್ಟಪಡುತ್ತೇವೋ ಇಲ್ಲವೋ ಬಿಜೆಪಿ(BJP) ಹಾಗೂ ಆರ್‌ಎಸ್ಎಸ್(RSS) ಹಿಂದುತ್ವವನ್ನು ಹೇರಿಕೆ ಮಾಡುತ್ತಿದೆ. ದ್ವೇಷದ ಸಿದ್ಧಾಂತವನ್ನು ಒತ್ತಾಯಪೂರ್ವಕವಾಗಿ ಜನರಲ್ಲಿ ಹೇರುತ್ತಿದೆ. ಇದರಿಂದ ಪ್ರೀತಿಯ, ವಿಶ್ವಾಸದ , ನಂಬಿಕೆ ಹಾಗೂ ದೇಶದ ಹಿತಕ್ಕಾಗಿ ದುಡಿಯುವ ಕಾಂಗ್ರೆಸ್ ಸಿದ್ಧಾಂತವನ್ನು ಮರೆಮಾಚುವ ಯತ್ನ ಬಿಜೆಪಿ ಹಾಗೂ ಆರ್‌ಎಸ್ಎಸ್ ಮಾಡುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದೆಂದಿಗೂ ಜೀವಂತ, ರೋಮಾಂಚಕ. ಆದರೆ ಬಿಜೆಪಿ ಹಾಗೂ ಆರ್‌ಎಸ್ಎಸ್‌ ದ್ವೇಷದಿಂದ ಮಬ್ಬಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

ರಾಹುಲ್ ಗಾಂಧಿಗೆ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿರುಗೇಟು ನೀಡಿದ್ದಾರೆ. ಹಿಂದು ಧರ್ಮ ಹಾಗೂ ಹಿಂದುತ್ವದ ಮೇಲೆ ಕಾಂಗ್ರೆಸ್ ಸತತ ದಾಳಿ ಮಾಡುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಇದಕ್ಕಿಂತ ನೀಚ  ರಾಜಕೀಯಕ್ಕೂ ಇಳಿಯುತ್ತಾರೆ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಹೋಕೋ ಹರಾಮ್ ಹಾಗೂ ಐಸಿಸಿ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಶಶಿ ತರೂರ್ ಹಿಂದು ತಾಲಿಬಾನ್ ಎಂದಿದ್ದಾರೆ. ಇನ್ನು ಮಣಿಶಂಕರ್ ಅಯ್ಯರ್, ದಿಗ್ವಿಜಯ್ ಸಿಂಗ್ ಕೇಸರಿ ಭಯೋತ್ಪಾದನೆ ಎಂದು ಕರೆದಿದ್ದಾರೆ. ಇದೀಗ ರಾಹುಲ್ ಗಾಂಧಿ ಕೂಡ ಇದನ್ನೇ ಹೇಳಿದ್ದಾರೆ. ಇಷ್ಟು ದಿನ ಒಬ್ಬೊಬ್ಬ ನಾಯಕರಿಗೆ ಹಿಂದುತ್ವ, ಹಿಂಧು ಧರ್ಮದ ವಿರುದ್ಧ ಮಾತನಾಡಲು ಹೇಳುತ್ತಿದ್ದ ರಾಹುಲ್ ಗಾಂಧಿ ಇದೀಗ ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

 

ಸಲ್ಮಾನ್ ಖುರ್ಷಿದ್ ಹಿಂದುತ್ವ ಹೋಲಿಕೆಗೆ ಇದೀಗ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರೇ ಖುರ್ಷಿದ್ ಹೇಳಿಕೆಯನ್ನು ವಿರೋಧಿಸಿದ್ದಾರೆ.  ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಬೊಕೊ ಹರಾಂ ಹಾಗೂ ಐಸಿಸಿ ಉಗ್ರರಿಗೆ ಹೋಲಿಸಿದ್ದಾರೆ. ಹಿಂದುತ್ವ ಇಸ್ಲಾಂ ಜಿಹಾದಿ ಭಯೋತ್ಪಾದಕಯಾಗಿ ಬದಲಾಗುತ್ತಿದೆ. ಸನಾತನ ಹಿಂದೂ ಧರ್ಮ ಈಗಿಲ್ಲ ಎಂದು ಸಲ್ಮಾನ್ ಖುರ್ಷಿದ್ ತಮ್ಮ ಪುಸ್ಕತದಲ್ಲಿ ಹೇಳಿದ್ದಾರೆ.
 

Follow Us:
Download App:
  • android
  • ios