Asianet Suvarna News Asianet Suvarna News

ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌!

* ಒಂದು ಕಾಲದಲ್ಲಿ ಋುಷಿ-ಮುನಿಗಳಿಂದ ಸನಾತನ ಧರ್ಮ ಪ್ರಖ್ಯಾತಿ

* ಇಂದಿನ ಹಿಂದುತ್ವವಾದಿಗಳಿಂದ ಋುಷಿ-ಮುನಿಗಳು ಮೂಲೆಗುಂಪು

* ಬೋಕೋ ಹರಾಂ, ಐಸಿಸ್‌ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್‌

Congress Leader Salman Khurshid Compares Hindutva To ISIS and Boko Haram In His New Book pod
Author
Bangalore, First Published Nov 11, 2021, 8:36 AM IST
  • Facebook
  • Twitter
  • Whatsapp

ನವದೆಹಲಿ(ನ.11): ಹಿರಿಯ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ರ (Congress Leader Salman Khurshid) ಹೊಸ ಪುಸ್ತಕ ‘ಅಯೋಧ್ಯೆ ವರ್ಡಿಕ್ಟ್’ನಲ್ಲಿ ಹಿಂದುತ್ವವನ್ನು (Hindutva) ಜಿಹಾದಿ ಐಸಿಸ್‌ ಮತ್ತು ಬೋಕೋ ಹರಾಂ (ISS And Boko Haram) ಭಯೋತ್ಪಾದಕ ಸಂಘಟನೆಗಳ ಜತೆ ಹೋಲಿಕೆ ಮಾಡಿದ್ದು, ಭಾರೀ ವಿವಾಹಕ್ಕೆ ಎಡೆ ಮಾಡಿಕೊಟ್ಟಿದೆ.

ಪುಸ್ತಕದಲ್ಲಿನ ‘ದಿ ಸ್ಯಾಫ್ರಾನ್‌ ಸ್ಕೈ(ಉತ್ತುಂಗದತ್ತ ಕೇಸರಿ) ಎಂಬ ಅಧ್ಯಾಯದ 113ನೇ ಪುಟದಲ್ಲಿ ‘ಒಂದು ಕಾಲದಲ್ಲಿ ಸನಾತನ ಧರ್ಮ ಮತ್ತು ಸಾಂಪ್ರದಾಯಿಕ ಹಿಂದು ಧರ್ಮವು ಋುಷಿ-ಮುನಿಗಳಿಂದ ಪ್ರಖ್ಯಾತವಾಗಿತ್ತು. ಆದರೆ ಋುಷಿ-ಮುನಿಗಳನ್ನು ಮೂಲೆಗುಂಪು ಮಾಡಿ ರಾಜಕೀಯ ಸ್ವರೂಪ ಪಡೆಯುತ್ತಿರುವ ಹಿಂದುತ್ವವಾದವು, ಇತ್ತೀಚಿನ ವರ್ಷಗಳಲ್ಲಿ ಇಸ್ಲಾಂ ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ಐಸಿಸ್‌ ಮತ್ತು ಬೋಕೋ ಹರಾಂ ರೀತಿ ಬದಲಾಗುತ್ತಿದೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್‌ (Supreme Court), ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ತಿರಸ್ಕರಿಸಿದೆ ಎಂದು ಖುರ್ಷಿದ್‌ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಖುರ್ಷಿದ್‌, ‘ಅಯೋಧ್ಯೆ ರಾಮ ಜನ್ಮಭೂಮಿ ವ್ಯಾಜ್ಯದ ಕುರಿತು ಸುಪ್ರೀಂ ಕೋರ್ಟ್‌ ಯಾವ ಆಧಾರದಲ್ಲಿ ಯಾಕೆ ಮತ್ತು ಹೇಗೆ ಈ ತೀರ್ಪು ನೀಡಿದೆ ಎಂಬುದನ್ನು ಯಾರೂ ನೋಡಿಲ್ಲ. ಆದರೆ ಹಲವರು ತಮಗೆ ಬೇಕಾದಂತೆ ಸುಪ್ರೀಂ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಥವರಿಗೆ ಸುಪ್ರೀಂ ಕೋರ್ಟಿನ ತೀರ್ಪು ಮನದಟ್ಟು ಮಾಡುವುದು ನನ್ನ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ತಮಗಾದ ಸೋಲು ಎಂದುಕೊಳ್ಳುವ ಬದಲಿಗೆ, ಇದು ಸಾಮರಸ್ಯದ ಕ್ಷಣವೆಂದು ಪರಿಭಾವಿಸಲು ಮುಸ್ಲಿಮರಿಗೆ ಪ್ರೇರೇಪಿಸಲು ಸಹಕಾರಿಯಾಗಿದೆ ಎಂದಿದ್ದಾರೆ ಖುರ್ಷಿದ್‌.

ಬಿಜೆಪಿ ಆಕ್ರೋಶ:

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಅವರು, ‘ಸಲ್ಮಾನ್‌ ಖುರ್ಷಿದ್‌ ಅವರ ಈ ಪುಸ್ತಕವು ಕಾಂಗ್ರೆಸ್‌ನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಉಗ್ರ ಸಂಘಟನೆಗಳ ಜತೆ ಹಿಂದುಗಳನ್ನು ಕೃತಕವಾಗಿ ಸಮೀಕರಿಸುವ ಮುಖಾಂತರ ಐಸಿಸ್‌ ಸೇರಿದಂತೆ ಇನ್ನಿತರ ಮೂಲಭೂತವಾದಿ ಭಯೋತ್ವಾದನೆಯನ್ನು ಕಾನೂನುಬದ್ಧಗೊಳಿಸುವ ಯತ್ನವಿದು’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಮುತಾಲಿಕ್ ಕಿಡಿ

 

ಬಿಜೆಪಿ (BJP) ಈಗ ಕಲಬೆರಕೆ ಪಕ್ಷವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ಗೆ DK Shivakumar) ಡಿಎನ್​ಎ ಪರೀಕ್ಷೆ (DNA Test) ಮಾಡಿಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು (ನ.09) ಇವತ್ತು ಬಿಜೆಪಿಗೆ 60-70 ಪ್ರತಿಶತ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ‌, ಕಮ್ಯುನಿಸ್ಟರು ಬಂದಿದ್ದಾರೆ. 30-40 % ಮಾತ್ರ ಬಿಜೆಪಿಯವರು ಇದ್ದಾರೆ‌. ಕಾಂಗ್ರೆಸ್ ನವರಿಗೆ ಹಿಂದುತ್ವ ಇಲ್ಲ, ಅವರಿಗೆ ಬರೀ ಲೂಟಿ ಮಾಡಬೇಕು ಅನ್ನೋದಿದೆ. ಇಲ್ಲಿವರೆಗೆ ಕಾಂಗ್ರೆಸ್ ನವರು ಟೆರರಿಸ್ಟ್ ಗಳನ್ನೇ ಬೆಳೆಸಿದ್ದಾರೆ‌. ಅಂತವರು ಇಂದು ಬಿಜೆಪಿಯಲ್ಲಿದ್ದಾರೆ‌ ಎಂದು ಕಿಡಿಕಾರಿದರು. 

'ರಾಜ್ಯ ಬಿಜೆಪಿ SC ಮೋರ್ಚಾ ಅಧ್ಯಕ್ಷರೇ ಕುಟಂಬ ಸಮೇತ ಹಿಂದೂ ಧರ್ಮದಿಂದ ಮತಾಂತರ'

ಅವರಿಗೆ ಹಿಂದುತ್ವ ಧರ್ಮ ದೇಶ,ಸಂಸ್ಕೃತಿ, ಮಾನ ಮರ್ಯಾದೆ ಏನು ಇಲ್ಲ. ಬಿಜೆಪಿ ಇಂದು ಓರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ ಎಂದ ಮುತಾಲಿಕ್​​ ಅಸಮಾಧಾನ ವ್ಯಕ್ತಪಡಿಸಿದರು.

ಮತಾಂತರದ ಬಗ್ಗೆ ಮುತಾಲಿಕೆ ಕಿಡಿ

ಮತಾಂತರದ ವಿಚಾರವಾಗಿ ಮಾತನಾಡಿದ ಅವರು, ಹೊಸದುರ್ಗದ ಎಂಎಲ್‌ಎ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ಮತಾಂತರ ವಿಚಾರವನ್ನು ಚರ್ಚೆಗೆ ತಂದರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ತಾಯಿಯೇ ಮತಾಂತರ ಆಗಿದ್ದರ ಬಗ್ಗೆ ಅವರು ವಿವರಿಸಿದರು. ನಮ್ಮ ದೇಶದ 99% ಕ್ರಿಶ್ಚಿಯನ್ನರು ಮತಾಂತರ ಆದವರು. ಒತ್ತಾಯ, ಆಸೆ-ಆಮಿಷಗಳಿಂದ ಮತಾಂತರ ಆಗಿದ್ದಾರೆ ಎಂದರು. 

ಮತಾಂತರದ ಹಾವಳಿ ವಿಪರೀತ ಆಗಿದೆ. ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ. ಅವರನ್ನು ಗೋವಾಕ್ಕೆ ಕರೆದುಕೊಂಡು ಹೋಗ್ತಾರೆ, ಅಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನವೆಂಬರ್​ 12ರಂದು ಸಿಎಂ ಬಳಿ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ. ನೂರಕ್ಕೂ ಹೆಚ್ಚು ಪೂಜ್ಯರಿಂದ ಮನವಿ ಸಲ್ಲಿಸುತ್ತೇವೆ. ನಿಮ್ಮ(ಕ್ರಿಶ್ಚಿಯನ್ ಮಿಷನರಿಗಳು) ಶಾಲೆ ಸಂಘ ಸಂಸ್ಥೆ ಕೊನೆಗೆ ಮತಾಂತರದಲ್ಲೇ ಮುಕ್ತಾಯವಾಗುತ್ತವೆ. ಶಿಕ್ಷಣ ನೀಡೋದು, ಆರೋಗ್ಯ ಸೇವೆ ಎಲ್ಲವೂ ಬೂಟಾಟಿಕೆ ಎಂದು ಪ್ರಮೋದ ಮುತಾಲಿಕ್ ಕಿಡಿಕಾರಿದರು.

Follow Us:
Download App:
  • android
  • ios