ನವದೆಹಲಿ(ಡಿ.27)  ಪ್ರಧಾನಿ ನರೇಂದ್ರ ಮೋದಿ ತಮ್ಮ  72ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಶಿಕ್ಷಣ, ಕೊರೋನಾ ಕಲಿಸಿದ ಪಾಠ, ಸಾಮಾಜಿಕ ಕಾರ್ಯ, ಪ್ರಾಣಿ ಪಕ್ಷಿಗಳಿಗೆ ನೆರವು ಸೇರಿದಂತೆ ಹಲವು ಮಹತ್ವದ ಮಾಹಿತಿ ಜೊತೆಗೆ ಕೆಲ ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ. 

"

ನೀವು ಬರೆದ ಸಾವಿರಾರು ಪತ್ರಗಳು ನನ್ನ ಬಳಿ ಇದೆ. ಸಾಮಾಜಿಕ ಮಾಧ್ಯಮದ ಮೂಲಕ, ಫೋನ್ ಮೂಲಕ ಹಲವರು ಮಾತನಾಡಿದ್ದಾರೆ. ಎಲ್ಲರ ಮಾಹಿತಿ, ಮಾತುಗಳನ್ನು ಕ್ರೋಡಿಕರಿಸಿ ಇಂದಿನ ಮನ್ ಕಿ ಬಾತ ಆರಂಭಿಸುತ್ತಿದ್ದೇನೆ ಎಂದು ಮೋದಿ ಈ ವರ್ಷದ ಕೊನೆಯ ಹಾಗೂ 19ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಿದರು. 

ಖಾದಿ ಉಜ್ವಲ ಭವಿಷ್ಯಕ್ಕಿರುವ ಹಾದಿ: ಮನ್ ಕಿ ಬಾತ್‌ನಲ್ಲಿ ಮೋದಿ!...

ಮೋದಿ ಮನ್ ಕಿ ಬಾತ್‌ನಲ್ಲಿ ಕರ್ನಾಟಕದ ಶ್ರೀರಂಗಪಟ್ಟದಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಕಾಯಕವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.  ಇನ್ನು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕರ್ನಾಟಕದ ಯುವ ದಂಪತಿಗಳಾದ ಅನುದೀಪ್ ಹಾಗೂ ಮಿನೀಶಾ ಕಾರ್ಯವನ್ನು ಮೋದಿ ಪ್ರಶಂಸಸಿದ್ದಾರೆ.

ವೃಷಭಾವತಿ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಯುವ ಬ್ರಿಗೇಡ್

ಸಾವಿರ ವರ್ಷಕ್ಕಿಂತ ಹಳೆಯ ಶ್ರೀರಂಗ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಹಾಳು ಕೊಂಪೆಯಾಗಿ ಬಿದ್ದಿತ್ತು. ಗಿಡ ಗಂಟಿಗಳು, ಪೊದೆ ಬೆಳೆದು ದೇವಸ್ಥಾನ ಸಂಪೂರ್ಣ ಹಾಳಾಗಿತ್ತು. ಈ ದೇವಸ್ಥಾನವನ್ನ ಯುವಬ್ರಿಗೇಡ್‌ನ  ಉತ್ಸಾಹಿ ಯುವಕರ ತಂಡ ಜೀರ್ಣೋದ್ದಾರ ಮಾಡಿದೆ.   ಕರ್ನಾಟಕದಲ್ಲಿರುವ ಯುವ ಬ್ರಿಗೇಡ್ ಮಾಡಿದ ಅತ್ಯಂತ ಉತ್ತಮ ಸಾಮಾಜಿಕ ಕೆಲಸವಾಗಿದೆ.   ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿದ ಯುವ ಬ್ರಿಗೇಡ್,  ಇಲ್ಲಿ ಸ್ವಚ್ಚತಾ ಕಾರ್ಯಗಳನ್ನು ಮಾಡಿದೆ. ದೇಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ದಾರ ಮಾಡಿದೆ. ಈ ಮೂಲಕ ಭಾರತದ ಭವ್ಯ ಪರಂಪರೆಯನ್ನು ಮತ್ತೆ ಸ್ಥಾಪಿಸುವಲ್ಲಿ ಯುವ ಬ್ರಿಗೇಡ್ ಮಹತ್ವದ ಕಾರ್ಯವಹಿಸಿದೆ ಎಂದು ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.

ಮನ್ ಕಿ ಬಾತ್‌ನಲ್ಲಿ ಯುವಕರ ಮನದಾಳ ಬಿಚ್ಚಿಟ್ಟ ಪ್ರಧಾನಿ ಮೋದಿ!

 ಕರ್ನಾಟಕದ ಅನುದೀಪ್ ಹಾಗಾ ಮಿನೀಶಾ ದಂಪಿತೆ ಇತ್ತೀಚೆಗೆ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಎಲ್ಲರೂ ಪ್ರಯಾಣ ಮಾಡುತ್ತಾರೆ. ಆದರೆ ಈ ದಂಪತಿ ಮದುವೆಯಾದ ಬೆನ್ನಲ್ಲೇ ಒಂದು ಸಂಕಲ್ಪ ಮಾಡಿದ್ದಾರೆ. ನಮ್ಮ ಪರಿಸರ ಸ್ವಚ್ಚಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆಯಾದ ಬಳಿಕ ಭಾರತದ ಹಲವೆಡೆ ಪ್ರಯಾಣಿಸಿದ ಅನುದೀಪ್ ಹಾಗೂ ಮಿನೀಶಾ ಪ್ರವಾಸಿ ತಾಣಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಸೋಮೇಶ್ವರ ಸಮುದ್ರ ಕಿನಾರೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿದ ಹೆಗ್ಗಳಿಗೆ ಅನುದೀಪ್ ಹಾಗೂ ಮಿನೀಶಾಗೆ ಸಲ್ಲಲಿದೆ ಎಂದು  ಮೋದಿ ಹೇಳಿದ್ದಾರೆ.

ಹನಿಮೂನ್ ಕ್ಯಾನ್ಸಲ್ ಮಾಡಿ ಬೀಚ್‌ನಲ್ಲಿ ಕಸ ಹೆಕ್ಕೋಕೋದ್ರು ಈ ನವಜೋಡಿ..!

ಪ್ರತಿ ವರ್ಷ ನಾವು ನಮ್ಮ ಕುಟುಂಬ, ಆತ್ಮೀಯರು, ಗೆಳೆಯರಿಗೆ ಹೊಸ ವರ್ಷ ಶುಭಾಶಯ ಹೇಳುತ್ತಿದ್ದೇವು. ಈ ಬಾರಿ ನಾವು ದೇಶಕ್ಕೆ ಶುಭಾಶಯ ಹೇಳುತ್ತೇವೆ. ಈ ಮೂಲಕ ದೇಶ ಅಭಿವೃದ್ಧಿಯತ್ತ, ಆರೋಗ್ಯ ಪಿಡುಗಗಳಿಂದ ಮುಕ್ತವಾಗಲಿದೆ ಎಂದು ಕೊಲ್ಲಾಪುರದಿಂದ ಅಂಜಲಿ ಪತ್ರದಲ್ಲಿ ಹೇಳಿದ್ದಾರೆ. ಅಂಜಲಿ ಧನಾತ್ಮಕ ಅಂಶಗಳನ್ನು ಮೋದಿ ಉಲ್ಲೇಖಿಸಿದ್ದಾರೆ. 

2020 ಹಲವು ಪಾಠಗಳನ್ನು ಕಲಿಸಿದೆ. ಕೊರೋನಾ ಕಾರಣ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.  ಲಾಕ್‌ಡೌನ್, ಆರೋಗ್ಯ, ಚಿಕಿತ್ಸೆ ಸೇರಿದಂತೆ ಹಲವು ಸವಾಲುಗಳು ನಮ್ಮ ಮುಂದಿತ್ತು. ಭಾರತ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿದೆ.  ಈ ಸಂಕಷ್ಟದಲ್ಲಿ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಜಾರಿಗೆ ತರಲಾಗಿದೆ. ಇದು ದೇಶದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ದೆಹಲಿಯ ಅತ್ಯಂತ ದೊಡ್ಡ ಮಕ್ಕಳ ಆಟಿಕೆ, ಸೈಕಲ್ ಶಾಪ್ ಮಾಲೀಕರು ಪತ್ರದ ಮೂಲಕ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದೆ ಗರಿಷ್ಠ ಬೆಲೆ ಆಟಿಕೆ, ಕಡಿಮೆ ಆಟಿಕೆ ಮೂಲಕ ನಾವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವು. ಆದರ ಆತ್ಮನಿರ್ಭರ್ ಭಾರತ್ ಬಳಿಕ ನಾವು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ. ಇಷ್ಟೇ ಅಲ್ಲ ಜನರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸಲು ಒತ್ತಿ ಒತ್ತಿ ಹೇಳುತ್ತಿದ್ದೇವೆ ಎಂದಿದ್ದಾರೆ. ಈ ಮಾಹಿತಿಯನ್ನು ಮೋದಿ ಮನ್ ಕಿ ಬಾತ್‌ನಲ್ಲಿ ಹಂಚಿಕೊಂಡಿದ್ದಾರೆ

ವೆಂಕಟ್ ಆತ್ಮ ನಿರ್ಭರ್ ಬಾರತ್ ಚಾರ್ಟ್(ABC) ಕಳುಹಿಸಿದ್ದಾರೆ.  ಈ ಚಾರ್ಟ್ ಮೂಲಕ ಆತ್ನಿರ್ಭರ್ ಭಾರತ್ ಪರಿಕಲ್ಪನೆಯನ್ನು ಅತ್ಯಂತ ಸರಳವಾಗಿ ಹಾಗೂ ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಆತ್ಮನಿರ್ಭರ್ ಭಾರತ್, ವೋಕಲ್ ಫಾರ್ ಲೋಕಲ್ ಆಂದೋಲನಗಳಿಂದ, ನಮ್ಮ ದೇಶದ ಉತ್ಪನ್ನಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅತ್ಯಂತ ಗುಣಮಟ್ಟ ಉತ್ಪನ್ನಗಳು ತಯಾರಾಗುತ್ತಿದೆ. ಈ ರೀತಿಯ ಕೆಲಸಕ್ಕೆ ದೇಶದ ಉದ್ಯಮಿಗಳು, ಸ್ಟಾರ್ಟ್ ಅಪ್ ಕಂಪನಿಗಳು ಮುಂದೆ ಬರಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. 

ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ.  

ಚಿರತೆಗಳ ಅಂಕಿ  2014 ರಿಂದ  2018ರರ ಅವಧಿಯಲ್ಲಿ ಚಿರತೆಗಳ ಸಂಖ್ಯೆ ಭಾರತದಲ್ಲಿ ಶೇಕಡಾ 60 ರಷ್ಟು ಹೆಚ್ಚಳವಾಗಿದೆ. ಮಧ್ಯ ಪ್ರದೇಶ, ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಹುಲಿ, ಸಿಂಹಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಅಭಿವೃದ್ಧಿಗೆ ಹಲವು ಸಂಘ ಸಂಸ್ಥೆಗಳು, ನಾಗರೀಕರು ಕೈಜೋಡಿಸಿದ್ದಾರೆ. ಈ ಪ್ರಶಂಸೆಗೆ ಎಲ್ಲರೂ ಅರ್ಹರು ಎಂದು ಮೋದಿ ಹೇಳಿದ್ದಾರೆ. ಪ್ರಾಣಿಗಳಿಗೆ ಆಹಾರ, ಸಂಕಷ್ಟದಲ್ಲಿ ಸಿಲುಕಿದ ಗೋವುಗಳನ್ನು ರಕ್ಷಿಸಿ ಗೋ ಶಾಲೆಗಳಲ್ಲಿ ಆರೈಕೆ ಸೇರಿದಂತೆ ಹಲವು ನಾಗರೀಕರು, ಸಂಘಟನೆಗಳು ಈ ಕಾರ್ಯದಲ್ಲಿ ತೊಡಗಿದೆ.