Asianet Suvarna News Asianet Suvarna News

ಖಾದಿ ಉಜ್ವಲ ಭವಿಷ್ಯಕ್ಕಿರುವ ಹಾದಿ: ಮನ್ ಕಿ ಬಾತ್‌ನಲ್ಲಿ ಮೋದಿ!

71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ| ಮನ್ ಕಿ ಬಾತ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ| 71ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ| ಖಾದಿಯತ್ತ ಆಕರ್ಷಿತರಾಗುವಂತೆ ಯುವ ಸಮುದಾಯಕ್ಕೆ ಮೋದಿ ಕರೆ| ‘ದೇಶದ ಜಲ ಸಂಪನ್ಮೂಲದ ರಕ್ಷಣೆ ನಮ್ಮೆಲ್ಲರ ಹೊಣೆ’| ಭಾರತೀಯ ಕ್ರೀಡಾ ಕ್ಷೇತ್ರದ ಚಹರೆ ಬದಲಾಗುತ್ತಿದೆ ಎಂದ ಮೋದಿ| ‘ಜಗತ್ತನ್ನು ಮೋಡಿ ಮಾಡಿದ ಭಾರತದ ವಿಜ್ಞಾನ ಕ್ಷೇತ್ರದ ಬೆಳವಣಿಗೆ’|

PM Modi Pitches Use Of Khadi In His Mann Ki Baat Speech
Author
Bengaluru, First Published Jan 26, 2020, 6:50 PM IST

ನವದೆಹಲಿ(ಜ.26): ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಮೋದಿ  ತಮ್ಮ ವರ್ಷದ ಮೊದಲ ‘ಮನ್ ಕಿ ಬಾತ್’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದು, ಖಾದಿಯತ್ತ ಆಕರ್ಷಿತರಾಗುವಂತೆ ಯುವ ಪೀಳಿಗೆಗೆ ಕರೆ ನೀಡಿದ್ದಾರೆ.

ದೇಶದ ಜನತೆಗೆ 71ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ದೇಶ ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಿದರು.

ಈ ವೇಳೆ ಖಾದಿಯ ಮಹತ್ವವನ್ನು ಸಾರಿದ ಪ್ರಧಾನಿ ಮೋದಿ, ದೇಶದ ಯುವ ಪೀಳಿಗೆ ಮಹಾತ್ಮಾ ಗಾಂಧಿಜೀ ಅವರ ಖಾದಿ ಕರೆಗೆ ಓಗೊಟ್ಟು ಖಾದಿ ಬಟ್ಟೆಯತ್ತ ಆಕರ್ಷಿತರಾಗಬೇಕು ಎಂದು ಕರೆ ನೀಡಿದರು.

ಮನ್ ಕಿ ಬಾತ್‌ನಲ್ಲಿ ಯುವಕರ ಮನದಾಳ ಬಿಚ್ಚಿಟ್ಟ ಪ್ರಧಾನಿ ಮೋದಿ!

ದೇಶದ ಜಲ ಸಂಪನ್ಮೂಲದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು,  ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿದಾಯಕ ಎಂದು ಪ್ರಧಾನಿ ಮೋದಿ ನುಡಿದರು.

ಭಾರತೀಯ ಕ್ರೀಡಾ ಕ್ಷೇತ್ರದ ಚಹರೆ ಬದಲಾಗುತ್ತಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚುತ್ತಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಭಾರತದ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಇಡೀ ಜಗತ್ತಿನ ಗಮನ ಸೆಳೆದಿದ್ದು, ಭಾರತೀಯ ವಿಜ್ಞಾನಿಗಳ ಸಾಧನೆಗೆ ವಿಶ್ವ ಬೆರಗಾಗಿದೆ ಎಂದು ಪ್ರಧಾನಿ ಮೋದಿ ಹೆಮ್ಮಪಟ್ಟರು.

Follow Us:
Download App:
  • android
  • ios