Asianet Suvarna News Asianet Suvarna News

ತಾಳಿ ಕಟ್ಟುವ ವೇಳೆ ನಾ ವಿವಾಹಿತೆ ಎಂದ ವಧು: ತಲೆ ತಿರುಗಿ ಬಿದ್ದ ಮದ್ವೆ ಗಂಡು

  • ಲಾಸ್ಟ್ ಮಿನಿಟ್‌ಗೆ ಮದುವೆ ನಿರಾಕರಿಸಿದ ವಧು
  • ವೇದಿಕೆಯಲ್ಲಿ ತಲೆ ತಿರುಗಿ ಬಿದ್ದ ವರ
  • ಒಡಿಶಾಸ ಬಾಲ್ಸೋರ್‌ನ ರೇಮು ಗ್ರಾಮದಲ್ಲಿ ಘಟನೆ
groom faints after bride calls off wedding in odishas balasore akb
Author
Bangalore, First Published May 19, 2022, 5:29 PM IST

ಬಾಲ್ಸೋರ್‌: ಮದ್ವೆ ದಿನ ನಡೆಯುವ ಹಲವು ಅವಾಂತರಗಳ ಸುದ್ದಿಗಳನ್ನು ನೀವು ಈಗಾಗಲೇ ಕೇಳಿರಬಹುದು. ಈಗ ಅಂತಹದ್ದೇ ಮದ್ವೆ ಅವಾಂತರದ ಪ್ರಕರಣವೊಂದು ಒಡಿಶಾದ ಬಾಲ್ಸೋರ್‌ನಿಂದ (Balasore) ವರದಿಯಾಗಿದೆ. ವಧುವೊಬ್ಬಳು ಇನ್ನೇನು ಗಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ತನಗೆ ಈಗಾಗಲೇ ಮದ್ವೆಯಾಗಿದೆ ಎಂದು ಹೇಳಿ ಮದ್ವೆ ಮಂಟಪದಿಂದ ಎದ್ದು ಹೋಗಿದ್ದು, ಇದರಿಂದ ಆಘಾತಕ್ಕೊಳಗಾದ ವರ (Bride) ಅಲ್ಲೇ ತಲೆ ತಿರುಗಿ ಬಿದ್ದಿದ್ದಾನೆ.

ಮೇ.13 ರಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Social Media) ಆಗಿದೆ. ಮದುವೆ ಮಂಟಪದಲ್ಲಿ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದ ವೇಳೆ ವಧು ತನ್ನ ಕೈಗಳಿಗೆ ಹಾಕಿದ್ದ ಬಳೆಗಳನ್ನು ಕಿತ್ತೆಸೆದಿದ್ದಲ್ಲದೇ ತನಗೆ ಈಗಾಗಲೇ ಮದುವೆಯಾಗಿದೆ ಎಂದು ಮಂಟಪದಿಂದ ಹೊರ ನಡೆದಿದ್ದಾಳೆ. ಬಾಲ್ಸೋರ್ ಜಿಲ್ಲೆಯ ಬಾಲಿಪಲ್ (Baliapal) ಪೊಲೀಸ್ ಠಾಣೆ ವ್ಯಾಪ್ತಿಯ ರೆಮು ಗ್ರಾಮದಲ್ಲಿ (Remu village) ಈ ಘಟನೆ ನಡೆದಿದೆ.

ಮಗನನ್ನೇ ಮದುವೆಯಾದ ತಾಯಿ: ಪತಿಯಿಂದ ಪೊಲೀಸರಿಗೆ ದೂರು

ಜಲೇಶ್ವರ್‌ ಪೊಲೀಸ್ ಠಾಣಾ (Jaleswar police station) ವ್ಯಾಪ್ತಿಯಲ್ಲಿ ಬರುವ ದೇವಕುಮಾರ್ (Devkumar village) ಗ್ರಾಮದ ವರ ವಧುವಿನ  ಸ್ಥಳವಾದ ರೇಮು ಗ್ರಾಮಕ್ಕೆ (Remu village) ವಿವಾಹಕ್ಕಾಗಿ ಬಂದಿದ್ದ. ಮದುವೆ ಸಂಪ್ರದಾಯಗಳು ಆರಂಭವಾಗುತ್ತಿದ್ದಂತೆ ವಧು ತನ್ನ ಕೈಗಳಿಂದ ಬಳೆಗಳನ್ನು (Bengals)  ತೆಗೆಯುತ್ತಿರುವುದನ್ನು ನೋಡಿದ್ದಾನೆ. ಆ ಸಂದರ್ಭದಲ್ಲಿ ಕೈಗಳಲ್ಲಿದ್ದ ಬಳೆಗಳನ್ನು ತೆಗೆಯುವುದು ಅಪಶಕುನ ಎಂದು ಭಾವಿಸಲಾಗಿದೆ. ಹೀಗಾಗಿ ವರ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. 

ಗಿಫ್ಟ್‌ ಸಿಕ್ಕಿದ್ದ ಆಟಿಕೆ ಸ್ಫೋಟ: ನವವಿವಾಹಿತನಿಗೆ ಗಾಯ, ಭಗ್ನಪ್ರೇಮಿಯ ಕಿತಾಪತಿ

ವಧುವಿನ ವರ್ತನೆ ನೋಡಿದ ಪೋಷಕರು ಹಾಗೂ ಸಂಬಂಧಿಗಳು ಆಕೆಯ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಕೆ ತನ್ನ ಇಚ್ಛೆಗೆ ವಿರುದ್ಧವಾಗಿ ಈ ವಿವಾಹ ಮಾಡಲಾಗುತ್ತಿದೆ ಎಂದು ಹೇಳುತ್ತಾಳೆ. ಈ ವೇಳೆ ಆಕೆಯ ವರ್ತನೆ ನೋಡಿದ ಆಕೆಯ ಪೋಷಕರು ಆಕೆಗೆ ಥಳಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅಲ್ಲಿಂದ ಹಿಂದಿರುಗಿದ ವರ ಮಾರನೇ ದಿನ ಬೇರೆ ಹುಡುಗಿಯನ್ನು ವಿವಾಹವಾದ ಎಂದು ತಿಳಿದು ಬಂದಿದೆ. 

ವಾರದ ಹಿಂದಷ್ಟೇ ತನ್ನದೇ ಮದುವೆಯಲ್ಲಿ ಮದ್ಯಪಾನ ಮಾಡಿ ಮೂಹೂರ್ತ ಮೀರುವವರೆಗೂ ಕುಣಿದು ಕುಪ್ಪಳಿಸಿದ ವರನನ್ನು ನೋಡಿದ ವಧು ಅದೇ ಮಂಟಪದಲ್ಲಿ ಬೇರೆಯವನನ್ನು ವಿವಾಹವಾದ ಘಟನೆ ರಾಜಸ್ತಾನದ ಚುರುವಿನಲ್ಲಿ ನಡೆದಿತ್ತು. ಮದುವೆಯಲ್ಲಿ ವರ ಮದ್ಯ ಸೇವಿಸಿ ಸ್ನೇಹಿತರೊಂದಿಗೆ ಡಾನ್ಸ್ ಮಾಡುತ್ತಾ ಬಾಕಿ ಆಗಿದ್ದಾನೆ. ಇದರಿಂದ ಮೆರವಣಿಗೆ ವಧುವಿನ ಮನೆ ತಲುಪಲು ಭಾರಿ ವಿಳಂಬವಾಗಿತ್ತು. ಜೊತೆಗೆ ವರನ ಈ ಕುಡಿತದ ಚಟ ಬೇಜಾವಾಬ್ದಾರಿಯನ್ನು ನೋಡಿದ ವಧು  ಕೋಪಗೊಂಡರೆ,  ವಧುವಿನ ತಂದೆ ತಮ್ಮ ಮಗಳನ್ನ ಬೇರೆ ವ್ಯಕ್ತಿ ಜೊತೆ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಸಿದ್ದಾರೆ. ರಾಜಸ್ಥಾನದ (Rajasthan) ಚುರುವಿನಲ್ಲಿ (Churu) ಈ ಘಟನೆ ನಡೆದಿದೆ.

ವರ ಸುನೀಲ್ (Sunil) ಮತ್ತು ಆತನ ಸಂಬಂಧಿಕರು ವಧುವಿನ (Bride) ಗ್ರಾಮಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಕುಟುಂಬದವರು ನಿಗದಿಪಡಿಸಿದಂತೆ ಮದುವೆಯ ಮುಹೂರ್ತ 1.15 ನಿಗದಿಯಾಗಿತ್ತು. ಆದರೆ ಆ ಸಮಯಕ್ಕೆ ವರನ ಕಡೆಯವರು ಬಂಧು ತಲುಪಿಲ್ಲ. ವರ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕುಡಿದು ಡಿಜೆ  ಸಂಗೀತಕ್ಕೆ ನೃತ್ಯ (Music DJ)ಮಾಡಿದ್ದರಿಂದ ಗಂಟೆಗಟ್ಟಲೆ ಮೆರವಣಿಗೆ ವಿಳಂಬವಾಗಿದೆ. ಏತನ್ಮಧ್ಯೆ, ವಧುವಿನ ಕಡೆಯವರು ವರನ ಬರುವಿಕೆಗಾಗಿ ಕಾದು ಕಾದು ಸುಸ್ತಾಗಿದ್ದರು. ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ವರನ ಕಡೆಯವರನ್ನು ವಾಪಸ್ ಕಳುಹಿಸಿದ್ದು, ವಧುವಿಗೆ ಬೇರೆಯವರೊಂದಿಗೆ ಅದೇ ಮಂಟಪದಲ್ಲಿ ಮದುವೆ ಮಾಡಿಸಲು ನಿರ್ಧರಿಸಿದರು. 

Follow Us:
Download App:
  • android
  • ios