ಉತ್ತರ ಪ್ರದೇಶದಲ್ಲಿ, ಮಾವನಿಂದ ಅತ್ಯಾ*ಚಾರಕ್ಕೊಳಗಾದ ಮಹಿಳೆಗೆ, ಆತನಿಗೆ ಸಹಕರಿಸಲು ನಿರಾಕರಿಸಿದ್ದಕ್ಕೆ ಪತಿಯು ಫೋನ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಕ್ರೌರ್ಯದ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ.

ತ್ರಿವಳಿ ತಲಾಖ್​ ನಿಷೇಧಿಸಿದ್ದರೂ ಕ್ಷುಲ್ಲಕ ಕಾರಣಕ್ಕೆ ಫೋನ್​ನಲ್ಲೋ, ಇನ್ನು ಯಾವ ರೀತಿಯಲ್ಲಿಯೂ ತಲಾಖ್​ ನೀಡುವುದು ಮುಂದುವರೆದೇ ಇದೆ. ಆದರೆ ಶಾಕಿಂಗ್​ ಎನ್ನುವಂಥ ಘಟನೆಯಲ್ಲಿ ತನ್ನ ಅಪ್ಪನ ಜೊತೆ ದೈಹಿಕ ಸಂಪರ್ಕಕ್ಕೆ ಸಹಕರಿಸಿಲ್ಲ ಎನ್ನುವ ಕಾರಣಕ್ಕೆ ಪತಿ ಮಹಾಶಯನೊಬ್ಬ, ಕಟ್ಟಿಕೊಂಡ ಹೆಂಡತಿಗೇ ಫೋನ್​ ಮೂಲಕ ತ್ರಿಬಲ್​ ತಲಾಖ್​ ನೀಡಿದ್ದಾನೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ಈ ಆಘಾತಕಾರಿ ಘಟನೆ ನಡೆದಿದೆ. ಈಕೆಯ ಮಾವ, ಗನ್​ ತೋರಿಸಿ ಸೊಸೆಯ ಮೇಲೆ ಅತ್ಯಾ*ಚಾರ ಮಾಡಿದ್ದಾನೆ. ಇದಕ್ಕೆ ಸೊಸೆ ಎಷ್ಟೇ ಪ್ರತಿಭಟಿಸಿದರೂ ಕಾಮುಕ ಮಾವ ತನ್ನ ಕಾಮತೃಷೆಯನ್ನು ತೀರಿಸಿಕೊಂಡಿದ್ದಾನೆ. ಈ ವಿಷಯವನ್ನು ತನ್ನ ಪತಿಗೆ ಫೋನ್​ ಮೂಲಕ ಪತ್ನಿ ಹೇಳಿದ್ದಾಳೆ. ಅಪ್ಪನ ವಿರುದ್ಧವೇ ದೂರಿರುವುದೂ ಅಲ್ಲದೇ, ಆತನಿಗೆ ತನ್ನ ಕಾಮವನ್ನು ಸುಲಭದಲ್ಲಿ ತೀರಿಸಿಕೊಳ್ಳಲು ಪತ್ನಿ ಸಹಾಯ ಮಾಡಿಲ್ಲ ಎನ್ನುವ ಕಾರಣಕ್ಕೆ ಆ ಫೋನ್​ನಲ್ಲಿಯೇ ತ್ರಿಬಲ್​ ತಲಾಖ್​ ನೀಡಿದ್ದಾನೆ!

ಪೊಲೀಸರಲ್ಲಿ ದೂರು

ಈ ಕ್ರೌರ್ಯದ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಮಹಿಳೆಯರು ಎಂದರೆ ಕಸಕ್ಕಿಂತಲೂ ಸಮಾನ, ಅವರ ಕೆಲಸ ತಾವು ಹೇಳಿದವರ ಜೊತೆಗೆ ಮಲಗುವುದು, ಆಕೆ ಒಂದು ವಸ್ತು ಎಂದುಕೊಂಡಿರುವ ಪುರುಷ ವರ್ಗ ತಾವೇನು ಮಾಡಿದ್ರೂ ಇಂಥ ಮಹಿಳೆಯರು ಕಂ ಕಿಂ ಎನ್ನುವುದಿಲ್ಲ ಎಂದು ತಿಳಿದೇ ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಈಗ ಕಾಲ ಬದಲಾಗಿರೋ ಕಾರಣ, ಈ ಮಹಿಳೆಯರು ಕೂಡ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಿದ್ದಾರೆ.

ಪತಿ ನಾಪತ್ತೆ

ಅದೇ ರೀತಿ ಈಕೆ ಕೂಡ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಪತ್ನಿ ದೂರು ದಾಖಲು ಮಾಡುತ್ತಿರುವುದು ತಿಳಿಯುತ್ತಲೇ ಇನ್ನೊಂದು ಮದುವೆಯಾಗಲು ಹೆಣ್ಣನ್ನು ಹುಡುಕುತ್ತಿರುವ ಪತಿ ನಾಪತ್ತೆಯಾಗಿದ್ದಾನೆ! ಈ ಘಟನೆ ರುಪೈದಿಹಾ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ರೇ* ಮಾಡಿದ ಮಾವನ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ ಎನ್ನುವುದು ತಿಳಿದಿಲ್ಲ.

ಅಂದಹಾಗೆ ಈ ಪಾಪಿ ಗಂಡನ ಹೆಸರು ರೆಹಾನ್ ಹಾಗೂ ಅವನ ಕಾಮುಕ ಅಪ್ಪನ ಹೆಸರು ಅಚ್ಚನ್. ಈ ಕಾಮುಕ ಮಾವ, ಇದಾಗಲೇ ಇದೇ ರೀತಿ ಸೊಸೆಯ ಮೇಲೆ ಹಲವಾರು ಬಾರಿ ಅತ್ಯಾ*ಚಾರ ಎಸಗಿರುವುದು ತಿಳಿದಿದೆ. ತನ್ನ ಮಾವನ ಕೃತ್ಯದ ಬಗ್ಗೆ ಮೊದಲು ತನ್ನ ಪತಿ ರೆಹಾನ್ ಗೆ ಹೇಳಿದಾಗ, ರೆಹಾನ್ ತನ್ನ ತಂದೆ ಅಚ್ಚನ್ ಜೊತೆ ಸಹಕರಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ತ್ರಿವಳಿ ತಲಾಖ್​ ಕೊಟ್ಟಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಇದು ಉತ್ತರ ಪ್ರದೇಶ. ಯೋಗಿಯ ರಾಜ್ಯ. ಆದ್ದರಿಂದ ಸಂತ್ರಸ್ತೆಗೆ ನ್ಯಾಯ ಸಿಗುವ ಭರವಸೆಯಲ್ಲಿ ಜನರು ಇದ್ದಾರೆ.