ಭಾರತ ಪ್ರವಾಸದಲ್ಲಿದ್ದ ಲಿಯೋನಲ್ ಮೆಸ್ಸಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಭಿಮಾನಿಗಳತ್ತ ಎಸೆದ ಫುಟ್ಬಾಲ್‌ಗಾಗಿ ದೊಡ್ಡ ಕಿತ್ತಾಟವೇ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಭಾರತ ಪ್ರವಾಸದಲ್ಲಿದ್ದ ಪುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಕೋಲ್ಕತ್ತಾ, ಹೈದರಾಬಾದ್ ನಂತರ ದೆಹಲಿಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾ ಪುಟ್ಬಾಲ್ ಆಡಿದ್ದರು. ಅದೇ ರೀತಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜನ ಸಮೂಹದತ್ತ ಎಸೆದ ಫುಟ್ಬಾಲ್‌ಗಾಗಿ ಅಭಿಮಾನಿಗಳು ಕಿತ್ತಾಡಿದಂತಹ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಟವಾಡುತ್ತಾ ಮೆಸ್ಸಿ ಅಭಿಮಾನಿಗಳತ್ತ ಫುಟ್ಬಾಲ್ ಕಿಕ್ ಮಾಡಿದ್ದು ಈ ವೇಳೆ ಮೆಸ್ಸಿ ಎಸೆದ ಪುಟ್ಬಾಲ್‌ಗಾಗಿ ಅಲ್ಲಿ ಎಫ್‌ಸಿ ಬರ್ಸಿಲೋನಾ ತಂಡದ ಅಭಿಮಾನಿಗಳ ಮಧ್ಯೆ ದೊಡ್ಡ ಕಾದಾಟವೇ ನಡೆದಿದೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಅವರ ನೂರಾರು ಅಭಿಮಾನಿಗಳು ಓರ್ವನ ಕೈಯಲ್ಲಿರುವ ಫುಟ್ಬಾಲ್‌ನ್ನು ಕಿತ್ತುಕೊಳ್ಳುವುದಕ್ಕೆ ಕಾದಾಟ ನಡೆಸಿದ್ದಾರೆ.

ಓರ್ವ ಈ ಫುಟ್ಬಾಲ್‌ನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ದೇಹದಿಂದ ಅಡ್ಡಗಟ್ಟಿ ಅದನ್ನು ಬೇರೆಯವರು ಕಿತ್ತುಕೊಳ್ಳದಂತೆ ತಡೆಯುತ್ತಿದ್ದರೆ, ಉಳಿದರು ಆತನಿಂದ ಈ ಚೆಂಡನ್ನು ಕಿತ್ತುಕೊಳ್ಳುವುದಕ್ಕೆ ಹಲವು ಪ್ರಯತ್ನ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಭಿಮಾನಿಗಳ ಪಾಲಿಗೆ ಅಮೂಲ್ಯ ಎನಿಸಿದ ಈ ಫುಟ್ಬಾಲ್‌ನ್ನು ಮೊದಲಿಗೆ ಹಿಡಿದುಕೊಂಡವನ ಕೈಯಿಂದ ತಾವು ಕಿತ್ತುಕೊಳ್ಳುವುದಕ್ಕೆ ಅನೇಕರು ಅಲ್ಲಿ ಹೋರಾಟ ಮಾಡುವುದನ್ನು ಕಾಣಬಹುದಾಗಿದೆ.

ತನ್ನ ಸುತ್ತಲೂ ಹಲವು ಜನರು ಸೇರಿ ಈ ಫುಟ್ಬಾಲ್‌ ಅನ್ನು ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸಿದರು ಆತ ತನ್ನ ದೇಹದಿಂದ ಅಡ್ಡಗಟ್ಟಿ ಅದನ್ನು ಬೇರೆಯವರ ಪಾಲಾಗದೆ ಉಳಿಸಿಕೊಳ್ಳಲು ಹೋರಾಡುವುದನ್ನು ಕಾಣಬಹುದಾಗಿದೆ. ಲಿಯೋನೆಲ್ ಮೆಸ್ಸಿ ತಮ್ಮ ಬಹು ನಿರೀಕ್ಷಿತ ಗೋಟ್ ಇಂಡಿಯಾ ಟೂರ್ ಭಾಗವಾಗಿ ಭಾರತದಲ್ಲಿದ್ದು, ಇದು ಭಾರತದಲ್ಲಿರುವ ಅವರ ಕೋಟ್ಯಾಂತರ ಅಭಿಮಾನಿಗಳನ್ನು ಹುಚ್ಚೇಬಿಸುವಂತೆ ಮಾಡಿದೆ. ಈ ಆರ್ಜೇಂಟಿನಾದ ಈ ಪುಟ್ಬಾಲ್ ಲೆಜೆಂಡ್ ಡಿಸೆಂಬರ್ 13ರಂದು ಶನಿವಾರ ಕೋಲ್ಕತ್ತಾದಿಂದ ತಮ್ಮ ಈ ಟೂರ್ ಆರಂಭಿಸಿದ್ದರು. ಆದರೆ ನಿನ್ನೆ ದೆಹಲಿಯಲ್ಲಿ ಈ ಟೂರ್ ಅಂತ್ಯಗೊಂಡಿದೆ. ಮೆಸ್ಸಿ ಭಾರತ ಭೇಟಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

ಇದನ್ನೂ ಓದಿ: ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ

ಕೋಲ್ಕತ್ತಾದ ಸಾಲ್ಟ್‌ಲೇಕ್ ಮೈದಾನದಲ್ಲಿ ನಡೆದ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ನಿರೀಕ್ಷೆಗೂ ಮೀರಿ ಲಕ್ಷಾಂತರ ಜನ ಸೇರಿದ್ದರಿಂದ ಜನರನ್ನು ಸರಿಯಾಗಿ ನಿರ್ವಹಿಸಲು ಸರಿಯಾದ ಕ್ರಮವನ್ನು ಕೈಗೊಳ್ಳದೇ ದೊಡ್ಡ ರದ್ದಾಂತವಾಗಿತ್ತು. ಕೋಲ್ಕತಾದ ಕ್ರೀಡಾಂಗಣದಲ್ಲಿ 50 ಸಾವಿರ ಜನರು 5ಸಾವಿರದಿಂದ 20 ಸಾವಿರ ರು.ವರೆಗಿನ ಟಿಕೆಟ್‌ ಖರೀದಿಸಿ ಗಂಟೆಗಟ್ಟಲೆ ಮೆಸ್ಸಿ ಬರುವಿಕೆಗಾಗಿ ಕಾಯುತ್ತಿದ್ದರು. ಮೆಸ್ಸಿ ಆಗಮನವಾಗುತ್ತಿದ್ದಂತೆ ಅವರ ಸುತ್ತ ಸಾಕಷ್ಟು ಜನ ಸೇರಿ ಗೊಂದಲವಾಗಿದ್ದರಿಂದ ಮೆಸ್ಸಿ ಕ್ರೀಡಾಂಗಣಕ್ಕೆ ಒಂದು ಸುತ್ತು ಹಾಕಲಿಲ್ಲ. ದೊಡ್ಡ ಪರದೆಗಳಲ್ಲೂ ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ ಹೀಗಾಗಿ ಗೊಂದಲ ಹೆಚ್ಚಾಗಿ ಮೆಸ್ಸಿ ಕೇವಲ 22 ನಿಮಿಷದಲ್ಲೇ ನಿರ್ಗಮಿಸಿದ್ದರಿಂದ. ಕೆರಳಿದ ಜನ ಸ್ಟೇಡಿಯಂ ಕುರ್ಚಿ, ಬಾಟಲಿಗಳನ್ನು ಪಿಚ್‌ನತ್ತ ತೂರಿ ಆಕ್ರೋಶ ಹೊರಹಾಕಿದ್ದರು. ಮೆಸ್ಸಿ ನೋಡುವುದಕ್ಕೆ ದುಡ್ಡು ಕೊಟ್ಟ ಅಭಿಮಾನಿಯೊಬ್ಬ ಸ್ಟೇಡಿಯಂನ ಮ್ಯಾಟ್ ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಸುಂಟರಗಾಳಿಯ ಹೊಡೆತಕ್ಕೆ ತಲೆಕೆಳಗಾಗಿ ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವೀಡಿಯೋ

View post on Instagram