30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ 60 ವರ್ಷದ ಮಹಿಳೆಯನ್ನು ಗ್ರೀನ್ ಕಾರ್ಡ್ ಸಂದರ್ಶನದ ವೇಳೆ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ಪತಿ ಗ್ರೀನ್ ಕಾರ್ಡ್ ಹೊಂದಿದ್ದು, ಮಗಳು ಅಮೆರಿಕದ ಪ್ರಜೆಯಾಗಿದ್ದರೂ, ಅವರನ್ನು ಅಡೆಲಾಂಟೋದಲ್ಲಿರುವ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
30 ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದ ಮಹಿಳೆಯೊಬ್ಬನ್ನು ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಸಂದರ್ಶನದ ವೇಳೆ ಬಂಧಿಸಲಾಗಿದೆ. ಬಬ್ಬಲ್‌ಜಿತ್ ಅಲಿಯಾಸ್ ಬಬ್ಲಿ ಕೌರ್ ಬಂಧಿತ ಮಹಿಳೆ, ಇವರೊಬ್ಬರು ಅಮೆರಿಕಾದ ಅಧಿಕೃತ ಗ್ರೀನ್ ಕಾರ್ಡ್ ಅರ್ಜಿದಾರ ಮಹಿಳೆಯಾಗಿದ್ದಾರೆ. ಅಮೆರಿಕಾದ ವಲಸೆ ಅಧಿಕಾರಿಗಳು ಪ್ರಸ್ತುತ 60 ವರ್ಷ ಪ್ರಾಯದ ಮಹಿಳೆಯಾಗಿರುವ ಬಬ್ಬಲ್‌ಜಿತ್ ಕೌರ್ ಅವರನ್ನು ಬಂಧಿಸಿದ್ದಾರೆ. ಗ್ರೀನ್ ಕಾರ್ಡ್‌ನ ಕೊನೆ ಹಂತದ ಸಂದರ್ಶನದ ವೇಳೆ ಅವರ ಬಂಧನವಾಗಿದೆ. ಬಬ್ಲಿ ಕೌರ್ ಅವರು 1994ರಿಂದಲೂ ಅಮೆರಿಕಾದಲ್ಲಿ ವಾಸ ಮಾಡ್ತಿದ್ದಾರೆ. ಬಬ್ಲಿ ಕೌರ್ ಅವರ ಬಾಕಿಯಾಗಿದ್ದ ಗ್ರೀನ್ ಕಾರ್ಡ್ ಅರ್ಜಿಯ ಬಯೋಮೆಟ್ರಿಕ್ ಸ್ಕ್ಯಾನ್ ಅಪಾಯಿಂಟ್‌ಮೆಂಟ್ ವೇಳೆ ಫೆಡರಲ್ ಏಜೆಂಟ್‌ಗಳು ಅವರನ್ನು ಬಂಧಿಸಿದ್ದಾರೆ.
ಕೌರ್ ಅವರ ಮತ್ತೊಬ್ಬ ಮಗಳು, ಅಮೆರಿಕ ಪ್ರಜೆಯಾಗಿದ್ದು, ಹಾಗೂ ಅವರ ಪತಿ ಗ್ರೀನ್ ಕಾರ್ಡ್ ಹೊಂದಿರುವುದರಿಂದ ಕೌರ್ ಅವರ ಗ್ರೀನ್ ಕಾರ್ಡ್ ಅರ್ಜಿಯನ್ನು ಅನುಮೋದಿಸಿದ್ದಾರೆ ಎಂದು ಲಾಂಗ್ ಬೀಚ್ ವಾಚ್‌ಡಾಗ್ ವರದಿ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೌರ್ ಅವರ ಪುತ್ರಿ ಮಾಧ್ಯಮವೊಂದಕ್ಕೆ ಮಾತನಾಡಿದ್ದು, ಡಿಸೆಂಬರ್ 1 ರಂದು ಅಮೆರಿಕಾದ ವಲಸೆ ವಿಭಾಗದ ಕಸ್ಟಮ್ಸ್ ಹಾಗೂ ಇನ್‌ಫೋರ್ಸ್‌ಮೆಂಟ್ ಕಚೇರಿಗೆ ಹೋಗಿದ್ದರು. ಈ ವೇಳೆ ಅನೇಕ ಫೆಡರಲ್ ಅಧಿಕಾರಿಗಳು ಅಲ್ಲಿಗೆ ಬಂದರು. ಅಲ್ಲಿ ಕೌರ್ ಅವರನ್ನು ಫೆಡರಲ್ ಏಜೆಂಟ್‌ಗಳು ಹೋಗಿದ್ದ ಕೋಣೆಗೆ ಕರೆಯಲಾಯಿತು. ನಂತರ ಅಲ್ಲಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಅವರಿಗೆ ಹೇಳಲಾಯ್ತು. ಕೌರ್ ಅವರಿಗೆ ದೂರವಾಣಿಯಲ್ಲಿ ಮಾತನಾಡಲು ಬಿಟ್ಟಿದ್ದಾರೆ ಆದರೆ ಅವರನ್ನು ಈಗಲೂ ಬಂಧನದಲ್ಲಿ ಇಡಲಾಗಿದೆ ಎಂದು ಅವರ ಮಗಳು ಹೇಳಿದ್ದಾಳೆ.
ಇದನ್ನೂ ಓದಿ: ಭಗವದ್ಗೀತೆ ಮಹಾಭಾರತದ ಅಧ್ಯಯನಕ್ಕಾಗಿ ಸಂಸ್ಕೃತ ವಿದ್ವಾಂಸರನ್ನು ಸಿದ್ಧಪಡಿಸುತ್ತಿದೆ ಪಾಕಿಸ್ತಾನ
ಬಂಧನ ಆದ ಹಲವು ಗಂಟೆಗಳವರೆಗೆ ಕೌರ್ ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗಿದೆ ಎಂಬ ಬಗ್ಗೆಯೂ ಕುಟುಂಬದವರಿಗೆ ಮಾಹಿತಿ ನೀಡಿರಲಿಲ್ಲ. ಅದರೆ ನಂತರ ಕುಟುಂಬದವರಿಗೆ ಅವರನ್ನು ರಾತ್ರೋರಾತ್ರಿ ಅಡೆಲಾಂಟೋಗೆ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿದು ಬಂತು. ಅಲ್ಲಿ ಹಳೆಯ ಫೆಡರಲ್ ಜೈಲೊಂದನ್ನು ಈಗ ಇಮಿಗ್ರೇಷನ್ ಅಧಿಕಾರಿಗಳು ವಲಸೆ ಸಂಬಂಧಿ ಪ್ರಕರಣಗಳ ಬಂಧನ ಕೇಂದ್ರವಾಗಿ ಬಳಸುತ್ತಿದ್ದಾರೆ. ಅಲ್ಲಿ ಈಗ ಕೌರ್ ಅವರನ್ನು ಬಂಧನದಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಈ ಜನಾಂಗದ ಮದುವೆಯ ವಿಚಿತ್ರ ಸಂಪ್ರದಾಯ ಕೇಳಿದ್ರೆ ನೀವು ಮದ್ವೆಗೂ ಮೊದಲೇ ಎಸ್ಕೇಪ್ ಆಗ್ತೀರಿ
ಬಬ್ಲಿ ಕೌರ್ ಅವರ ಕುಟುಂಬವೂ ಅಮೆರಿಕಾಗೆ ವಲಸೆ ಹೋಗಿತ್ತು. ಅವರು ಮೊದಲಿಗೆ ಲಗೂನಾ ಬೀಚ್ ಸಮೀಪ ವಾಸವಿದ್ದರು. ನಂತರ ಬೆಲ್ಮಂಟ್ ಕರಾವಳಿ ಪ್ರದೇಶದಲ್ಲಿ ನೆಲೆಸಿದರು. ಕೌರ್ ಹಾಗೂ ಅವರ ಪತಿ ಮೂವರು ಮಕ್ಕಳನ್ನು ಹೊಂದಿದ್ದು, ಅವರ ಒಬ್ಬರು ಮಗಳು 34 ವರ್ಷದ ಜ್ಯೋತಿ ಅವರರು ಕಾನೂನಾತ್ಮಕವಾಗಿ ಅಮೆರಿಕಾದ ಪ್ರಜೆಯ ಅರ್ಹತೆ ಹೊಂದಿದ್ದಾರೆ. ಹಾಗೆಯೇ ಜ್ಯೋತಿ ಅವರ ಹಿರಿಯ ಸೋದರ ಹಾಗೂ ಸೋದರಿ ಕೂಡ ಅಮೆರಿಕಾದ ಪ್ರಜೆಗಳಾಗಿದ್ದಾರೆ. ಅಮೆರಿಕಾದಲ್ಲಿ ಈ ದಂಪತಿ ಕಳೆದ ಎರಡು ದಶಕಗಳಿಂದ ಉಪಹಾರ ಕೇಂದ್ರವನ್ನು ಹೊಂದಿದ್ದಾರೆ. ನಟರಾಜ್ ಕಸಿನ್ ಆಫ್ ಇಂಡಿಯಾ & ನೇಪಾಳ್ ಎಂಬ ಉಪಹಾರ ಕೇಂದ್ರವನ್ನು ಇವರು ಬೆಲ್ಮೊಂಟ್ ಕರಾವಳಿಯಲ್ಲಿ ಹೊಂದಿದ್ದು, ಅದರು ಅಲ್ಲಿ ಬೀಚ್‌ಗೆ ಬರುವ ಸಮುದಾಯದ ನೆಚ್ಚಿನ ತಾಣವಾಗಿದೆ.


