ಬ್ರೆಜಿಲ್‌ನಲ್ಲಿ ತೀವ್ರ ಚಂಡಮಾರುತದ ಅಬ್ಬರಕ್ಕೆ ಹವಾನ್ ಮೆಗಾಸ್ಟೋರ್‌ನ ಹೊರಗಿದ್ದ 24 ಮೀಟರ್ ಎತ್ತರದ ಸ್ವಾತಂತ್ರ್ಯ ಪ್ರತಿಮೆಯು ಕುಸಿದು ಬಿದ್ದಿದೆ. ಗಂಟೆಗೆ 90 ಕಿ.ಮೀ ವೇಗದ ಗಾಳಿಗೆ ಪ್ರತಿಮೆ ಉರುಳಿದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಂಡಮಾರುತದ ತೀವ್ರ ಅಬ್ಬರಕ್ಕೆ ಸಿಲುಕಿ ಬ್ರೆಜಿಲ್‌ನ ಸ್ವಾಂತತ್ರ ಪ್ರತಿಮೆ ಉರುಳಿ ಬಿದ್ದಂತಹ ಘಟನೆ ನಡೆದಿದೆ. ನಿನ್ನೆ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಗುವಾಬಾ ನಗರದಲ್ಲಿ ತೀವ್ರ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ಇಲ್ಲಿನ ಹವಾನ್ ಮೆಗಾಸ್ಟೋರ್‌ನ ಹೊರಗೆ ಸ್ಥಾಪಿಸಲಾಗಿದ್ದ 24 ಮೀಟರ್ ಎತ್ತರದ ಸ್ವಾತಂತ್ರ ಪ್ರತಿಮೆ(Statue of Liberty)ಕುಸಿದು ಬಿದ್ದಿದೆ. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಬ್ರೆಜಿಲ್‌ನ ನಾಗರಿಕ ರಕ್ಷಣಾ ಪ್ರಾಧಿಕಾರವಾದ ಡೆಫೆಸಾ ಸಿವಿಲ್ ಪ್ರಕಾರ ಚಂಡಮಾರುತವು ಗಾಳಿಯ ವೇಗವನ್ನು ಗಂಟೆಗೆ 90 ಕಿ.ಮೀ.ಗೆ ಹೆಚ್ಚಿಸಿತ್ತು. ಪರಿಣಾಮ ಸ್ವಾತಂತ್ರ ಪ್ರತಿಮೆ ನೆಲಕ್ಕುರುಳಿದೆ. ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. 11 ಮೀಟರ್ ಎತ್ತರದ ಕಾಂಕ್ರೀಟ್ ಅಡಿಪಾಯದ ಮೇಲೆ ಈ ಸ್ವಾತಂತ್ರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಬಿರುಗಾಳಿಯಿಂದಾಗಿ ಅದರ ಮೇಲೆ ನಿಲ್ಲಿಸಿದ್ದ ಸ್ವಾತಂತ್ರ ಪ್ರತಿಮೆ ಉರುಳಿ ಬಿದ್ದರೂ ಅದನ್ನು ಸ್ಥಾಪಿಸಿದ ಕಾಂಕ್ರೀಟ್ ಅಡಿಪಾಯಕ್ಕೆ ಯಾವುದೇ ಯಾವುದೇ ಹಾನಿಯಾಗಿಲ್ಲ. ಘಟನೆಯಿಂದ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಆದರೆ ಸ್ವಾತಂತ್ರ ಪ್ರತಿಮೆ ಕೈಗಳು ಮುರಿದು ಹೋಗಿವೆ.
ಇದನ್ನೂ ಓದಿ: ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಮಹಿಳೆಯ ಬಂಧಿಸಿದ ಫೆಡರಲ್ ಅಧಿಕಾರಿಗಳು
ಆ ಪ್ರದೇಶದಲ್ಲಿ ಬಿರುಗಾಳಿ ತೀವ್ರಗೊಳ್ಳುತ್ತಿದ್ದಂತೆ ಪ್ರತ್ಯಕ್ಷದರ್ಶಿಗಳು ಮತ್ತುಅಲ್ಲಿನ ಅಂಗಡಿಗಳ ನೌಕರರು ಎಚ್ಚೆತ್ತುಕೊಂಡು ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಆ ಪ್ರದೇಶದಿಂದ ದೂರಕ್ಕೆ ಸ್ಥಳಾಂತರಿಸಿದರು, ಇದು ಸಂಭವನೀಯ ನಷ್ಟಗಳನ್ನು ತಪ್ಪಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಸ್ವಾತಂತ್ರ ಪ್ರತಿಮೆಯೂ ನಿಧಾನವಾಗಿ ಕೆಳಗೆ ಬಾಗಿ ಪಾರ್ಕಿಂಗ್ ಸ್ಥಳಕ್ಕೆ ಅಪ್ಪಳಿಸುವುದನ್ನು ಕಾಣಬಹುದು.
ಚಂಡಮಾರುತದ ಹಿನ್ನೆಲೆ ಮೇಯರ್ ಮಾರ್ಸೆಲೊ ಮರನಾಟಾ ಮಾತನಾಡಿ, ಸೋಮವಾರ ಮಧ್ಯಾಹ್ನ ನಮ್ಮ ನಗರಕ್ಕೆ ಗಂಟೆಗೆ 80 ಮೈಲುಗಳಷ್ಟು ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ. ಇದರ ಆರಂಭದಿಂದಲೂ ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸುತ್ತಾ ನಾವು ಬೀದಿಗಳಲ್ಲೇ ಇದ್ದೇವೆ. ಚಂಡಮಾರುತದ ಹಿನ್ನೆಲೆ ನಾಗರಿಕ ರಕ್ಷಣಾ ಮತ್ತು ಮೂಲಸೌಕರ್ಯ ಕಾರ್ಯದರ್ಶಿ ಯಾವುದೇ ಪರಿಸ್ಥಿತಿಗೆ ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಜನರ ಸುರಕ್ಷತೆಯನ್ನು ಅವರು ಖಚಿತಪಡಿಸಿದ್ದು, ತುರ್ತು ಸಂದರ್ಭ ಬಂದಲ್ಲಿ, 199 ಗೆ ಕರೆ ಮಾಡಿ ನಾಗರಿಕ ರಕ್ಷಣಾ ತಂಡವನ್ನು ಸಂಪರ್ಕಿಸಿಸುವಂತೆ ಎಂದು ಮೇಯರ್ ಮಾರ್ಸೆಲೊ ಮರನಾಟಾ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಭಗವದ್ಗೀತೆ ಮಹಾಭಾರತದ ಅಧ್ಯಯನಕ್ಕಾಗಿ ಸಂಸ್ಕೃತ ವಿದ್ವಾಂಸರನ್ನು ಸಿದ್ಧಪಡಿಸುತ್ತಿದೆ ಪಾಕಿಸ್ತಾನ
ಬ್ರೆಜಿಲ್‌ನ ದಕ್ಷಿಣ ಪ್ರದೇಶವನ್ನು ಚಂಡಮಾರುತವು ಬೀಸುವ ಮೊದಲು ಅಧಿಕಾರಿಗಳು ತೀವ್ರ ಹವಾಮಾನ ಎಚ್ಚರಿಕೆಗಳನ್ನು ನೀಡಿದ್ದರು, ಸಂಭಾವ್ಯ ಅಪಾಯಗಳ ಬಗ್ಗೆ ನಿವಾಸಿಗಳು ಎಚ್ಚರದಿಂದಿರುವಂತೆ ಸೂಚಿಸಿದ್ದರುಉ. ನಗರದಲ್ಲಿ ಗಾಳಿಯಿಂದ ಹಾನಿಯಾದ ಮೊದಲ ವರದಿಗಳ ನಂತರ ನಾಗರಿಕ ರಕ್ಷಣಾ ಮತ್ತು ಮೂಲಸೌಕರ್ಯ ಕಾರ್ಯದರ್ಶಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದರು. ಬಿದ್ದ ಸ್ವಾತಂತ್ರ ಪ್ರತಿಮೆಯು ಹವಾನ್ ಪ್ರದೇಶದ ಹೆಗ್ಗುರುತಾಗಿದ್ದು, ಅದರ ಎತ್ತರ ಮತ್ತು ಪ್ರಾಮುಖ್ಯತೆಯಿಂದಾಗಿ ದೂರದಿಂದಲೇ ಗೋಚರಿಸುತ್ತಿತ್ತು.


