Asianet Suvarna News Asianet Suvarna News

From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate wayanad will become safe seat for gandhi family bjp main opposition party in tamilnadu ash
Author
First Published Mar 27, 2023, 10:14 AM IST

ವಯನಾಡ್‌ಗೆ ಪ್ರಿಯಾಂಕಾ ಗಾಂಧಿ..?

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು (ಮಾಜಿ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ) ಶೀಘ್ರದಲ್ಲೇ ವಯಾ-ನಾಡ್ ಎಂದು ಮರುನಾಮಕರಣ ಮಾಡಬೇಕೆಂದು ತೋರುತ್ತಿದೆ. ಕೇರಳದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಅನರ್ಹತೆಗೆ ಕಾರಣವಾದ ತೀರ್ಪಿನಲ್ಲಿನ ಕಾನೂನು ಸೂಕ್ಷ್ಮಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ಮೊದಲೇ, ಉಪಚುನಾವಣೆ ಘೋಷಣೆಯಾದರೆ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬೇಕು ಎಂಬ ಧ್ವನಿಗಳು ಕೇಳಿಬರುತ್ತಿವೆ.

ಗಾಂಧಿ ಕುಟುಂಬದ ಹಿಡಿತದಲ್ಲಿದ್ದ ಅಮೇಥಿಯನ್ನು ಕಳೆದುಕೊಳ್ಳುವುದು ಖಚಿತವಾದ ನಂತರ ರಾಹುಲ್ ಗಾಂಧಿ ಕೊನೆಯ ಕ್ಷಣದಲ್ಲಿ ವಯನಾಡಿನಲ್ಲಿ ಕಣಕ್ಕೆ ಇಳಿದಿದ್ದರು. ಆರಂಭದಲ್ಲಿ, ಕಾಂಗ್ರೆಸ್ ನಾಯಕ ಟಿ. ಸಿದ್ದಿಕ್ ಅವರು ವಯನಾಡ್‌ ಲೋಕಸಭೆಯಲ್ಲಿ ಸ್ಪರ್ಧಿಸಲು ಪ್ರಚಾರ ಆರಂಭಿಸಿದ್ದರು. (ಆನಂತರ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಸಿದ್ದಿಕ್ ಅವರನ್ನು ಕಣಕ್ಕಿಳಿಸಿತು ಮತ್ತು ಅವರು ಗೆಲುವು ಸಾಧಿಸಿದರು.) ಬಳಿಕ ರಾಹುಲ್ ವಯನಾಡಿಗೆ ಪ್ರವೇಶ ಮಾಡಿದ್ದು, ಪಕ್ಷದೊಳಗಿನ ಬಣಗಳನ್ನು ಒಂದುಗೂಡಿಸಿತು.

ಇದನ್ನು ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಇನ್ನು, ಪ್ರಿಯಾಂಕಾ ಗಾಂಧಿ ಅವರು ಒಂದು ವೇಳೆ ಇಲ್ಲಿ ಉಪಚುನಾವಣೆಯಲ್ಲಿ ಕಣಕ್ಕಿಳಿದರೆ,  ಕಾಂಗ್ರೆಸ್ ಪರ ಲೋಕಸಭೆ ಕ್ಷೇತ್ರವನ್ನು ಗೆಲ್ಲುವುದು ಬಹುತೇಕ ಖಚಿತ. ಈ ಮೂಲಕ ಗಾಂಧಿ ಕುಟುಂಬಕ್ಕೆ ಲೋಕಸಭೆ ಪ್ರವೇಶಿಸಲು ವಯನಾಡ್‌ ಮತ್ತೊಂದು ಸುರಕ್ಷಿತ ಸೀಟ್‌ ಆಗಲಿದೆ. ಇನ್ನು, ಕೇರಳದ ಕಾಂಗ್ರೆಸ್ ಕಾರ್ಯಕರ್ತರು ಉಳಿದ 19 ಸ್ಥಾನಗಳಿಗಾಗಿ ಹೋರಾಡಬೇಕಾಗುತ್ತದೆ. ಮತ್ತು ವಯನಾಡ್ ಮೂಲಕ ಸಂಸತ್ತಿಗೆ ಪ್ರವೇಶಿಸುವುದು ಕೈಗೆ ಸುಲಭವಾದ ಮಾರ್ಗವಾಗಲಿದೆ.
 
ಅಖಿಲೇಶ್‌ ಸ್ಟ್ರಾಟಜಿ ಏನು.?

ರಾಮಚರಿತಮಾನಸ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಪ್ರಮುಖ ನಾಯಕನನ್ನು ಕಿತ್ತು ಹಾಕಬಹುದು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಉತ್ತರ ಪ್ರದೇಶ ರಾಜಕೀಯ ವೀಕ್ಷಕರು ನಿರೀಕ್ಷಿಸಿದ್ದರು. ಆದರೆ, ನೇತಾಜಿಯನ್ನು (ಮುಲಾಯಂ ಸಿಂಗ್ ಯಾದವ್‌) ವಿರೋಧಿಸಿದ ಕೆಲವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದ್ದು, ಇದು ಮುಖಂಡರು ಮತ್ತು ಕಾರ್ಯಕರ್ತರನ್ನು ಕಂಗೆಡಿಸಿದೆ. ಈ ಮೌನವು ಹಿಂದುಳಿದ ಸಮುದಾಯಗಳ ಮತಗಳನ್ನು ಸೆಳೆಯುವ ರಾಜಕೀಯ ತಂತ್ರವಾಗಿದೆ ಎಂದು ತೋರುತ್ತದೆ.

ಇದನ್ನೂ ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ಹಿಂದೂ-ಮುಸ್ಲಿಂ ಮತಬ್ಯಾಂಕ್‌ಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಪಕ್ಷವು ಈಗಾಗಲೇ ಸಾಕಷ್ಟು ನಷ್ಟವನ್ನು ಅನುಭವಿಸಿರುವುದರಿಂದ ಹೆಚ್ಚಿನ ಮತಗಳನ್ನು ಗೆಲ್ಲುವ ವಿನ್ಯಾಸದ ಭಾಗವಾಗಿ ಅಖಿಲೇಶ್ ಈ ರೀತಿ ಅವಕಾಶ ಮಾಡಿಕೊಟ್ಟಂತೆ ತೋರುತ್ತಿದೆ. ಈ ತಂತ್ರವು ಪಕ್ಷಕ್ಕೆ ಲಾಭವಾಗಲಿದೆಯೇ ಅಥವಾ ನಷ್ಟವಾಗಲಿದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.
 
ತಮಿಳುನಾಡಲ್ಲಿ ಬಿಜೆಪಿಯೇ ನಿಜವಾದ ವಿರೋಧಪಕ್ಷ..?
ಕೆಸರಿನಲ್ಲಿ ಕಮಲ ಅರಳುವುದನ್ನು ನೋಡುವುದನ್ನು ಸಾಮಾನ್ಯವಾಗಿ ಆಶಾವಾದದ ಉದಾಹರಣೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ, ಸ್ಟಾಲಿನ್ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸುವಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿರುವುದರಿಂದ ಪ್ರಮುಖ ವಿರೋಧ ಪಕ್ಷವಾಗುತ್ತಿದೆ.

ಇದನ್ನೂ ಓದಿ: From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

2026 ರಲ್ಲಿ ತಮಿಳುನಾಡು ರಾಜ್ಯವನ್ನು ಆಳುತ್ತೇವೆ ಎಂದು ಬಿಜೆಪಿ ಉನ್ನತ ನಾಯಕರು ಹೇಳಿಕೊಳ್ಳುತ್ತಿರುವಾಗ, ಎರಡು ಎಲೆಗಳ ಚಿಹ್ನೆ ಹೊಂದಿರುವ ಎಐಎಡಿಎಂಕೆ ಪಕ್ಷ ಹೆಚ್ಚು ಅಸ್ಥಿರವಾಗಿದೆಯಂತೆ. ಬಿಜೆಪಿ ತಮಿಳುನಾಡಲ್ಲಿ ಬೆಳೆಯುತ್ತಿರುವ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿದೆ. ಅಲ್ಲದೆ, ಇದನ್ನು ಎದುರಿಸಲು ಕೆಲವು ಹಿರಿಯ ಬಿಜೆಪಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು ಉಭಯ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಬಿಜೆಪಿಯ ಹಿರಿಯ ನಾಯಕರೊಬ್ಬರು ಮೈತ್ರಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದ್ದರೂ, ಅವರ ಪಕ್ಷದ ಸಹೋದ್ಯೋಗಿಗಳು ಅವರಿಗೆ ಶಾಂತವಾಗಿರಲು ಹೇಳಿದ್ದಾರೆ.
ರಾಷ್ಟ್ರೀಯ ನಾಯಕತ್ವ ಅಂದ್ರೆ ಹೈಕಮಾಂಡ್‌ ಕೂಡ ಈ ಭಾವನೆಯನ್ನು ಪ್ರತಿಧ್ವನಿಸಿದ್ದು, ಸಲಹೆ ನೀಡಿದೆ. ಈ ಹಿನ್ನೆಲೆ ಹತಾಶನಾದ ಆ ನಾಯಕ ಬಿಳಿ ಧ್ವಜವನ್ನು (ಶಾಂತಿ) ಬೀಸುತ್ತಾ ಹಿಂತಿರುಗಬೇಕಾಯಿತಂತೆ. 

ಇದನ್ನೂ ಓದಿ: From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

Follow Us:
Download App:
  • android
  • ios