ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ ನೀಡಲಾಗಿದೆ. ಬಾಂಬೆ ಹೈಕೋರ್ಟ್ ಈ ಸೂಚನೆ ನೀಡಿದೆ. ಹಿರಿಯ ನಟ ಸುಧೀರ್ ತೀವ್ರ ಅಸ್ವಸ್ಥಗೊಂಡಿದ್ದಾರೆ.

ಮುಂಬೈ (ಡಿ.05) ಶೀರ್ಡಿ ಸಾಯಿ ಬಾಬಾ ದೇಗಲು ಭಾರತದ ಶ್ರೀಮಂತ ದೇಗುಲಗಳಲ್ಲಿ ಒಂದು. ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಶೀರ್ಡಿ ಸಾಯಿ ಬಾಬ ಕುರಿತು ಬಾಲಿವುಡ್ ಸಿನಿಮಾ ಭಾರಿ ಮೆಚ್ಚುಗೆ ಪೆಡಿದಿದೆ. ಶಿರ್ಡಿ ಸಾಯಿ ಬಾಬಾ ಸಂಪೂರ್ಣ ಘಟನೆಗಳ ಸನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸಾಯಿ ಬಾಬಾ ಆಗಿ ನಟ ಸುಧೀರ್ ದಾಲ್ವಿ ನಟಿಸಿದ್ದಾರೆ. ಈ ಹಿರಿಯ ನಟನ ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಸುಧೀರ್ ದಾಲ್ವಿ ಚಿಕಿತ್ಸೆಗೆ ಕುಟುಂಬಸ್ಥರು ಈಗಾಗಲೇ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಆರ್ಥಿಕ ಸಂಕಷ್ಟ ಎದುರಾದ ಕಾರಣ ಅಭಿಮಾನಿಗಳಲ್ಲಿ ನರೆವು ಕೇಳಿದ್ದರು. ಇದರ ಬೆನ್ನಲ್ಲೇ ಬಾಂಬೆ ಹೈಕೋರ್ಟ್, ಶಿರ್ಡಿ ಸಾಯಿ ಬಾಬಾ ಟ್ರಸ್ಟ್, ನಟ ಸುಧೀರ್ ದಾಲ್ವಿ ಚಿಕಿತ್ಸೆ 11 ಲಕ್ಷ ರೂಪಾಯಿ ನೀಡುವಂತೆ ಸೂಚನೆ ನೀಡಿದೆ.

ಹೈಕೋರ್ಟ್‌ಗೆ ಮನವಿ ಮಾಡಿದ್ದ ಶಿರ್ಡಿ ಸಾಯಿ ಬಾಬಾ ಟ್ರಸ್ಟ್

ಶಿರ್ಡಿ ಸಾಯಿ ಬಾಬಾ ದೇವಸ್ಥಾನವನ್ನು ಭಾರತದಲ್ಲಿ ಜನಪ್ರಿಯತೆಗೊಳಿಸುವಲ್ಲಿ ಶಿರ್ಡಿ ಕೆ ಸಾಯಿ ಬಾಬಾ ಸಿನಿಮಾ ಪ್ರಮುಖ ಪಾತ್ರ ನಿರ್ವಹಿಸಿತ್ತು. 1977ರಲ್ಲಿ ತೆರೆಕಂಡ ಈ ಸಿನಿಮಾ ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಶಿರ್ಡಿ ಸಾಯಿ ಬಾಬಾ ಆಗಿ ನಟಿಸಿದ ಸುಧೀರ್ ದಾಲ್ವಿ ವಯೋಸಹಜ ಸಮಸ್ಯೆಯಿಂದ ಬಳಲುತ್ತದ್ದಾರೆ. 86 ವಯಸ್ಸಿನ ಸುಧೀರ್ ದಾಲ್ವಿ ಆಸ್ಪತ್ರೆ ದಾಖಲಾಗಿ ಕೆಲ ದಿನಗಳು ಉರುಳಿದೆ. ಕುಟುಂಬಸ್ಥರು ಸುಧೀರ್ ದಾಲ್ವಿ ಚಿಕಿತ್ಸೆಗೆ ತಮ್ಮ ಬಳಿ ಇರುವ ಎಲ್ಲಾ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು, ದಾನಿಗಳು ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದರು.

ಈ ಮಾಹಿತಿ ತಿಳಿಯುತ್ತಿದ್ದಂತೆ ಶಿರ್ಡಿ ಸಾಯಿ ಬಾಬಾ ಟ್ರಸ್ಟ್ ನೆರವಿಗೆ ಧಾವಿಸಿತ್ತು. ಶಿರ್ಡಿ ಸಾಯಿ ಬಾಬಾ ಕ್ಷೇತ್ರವನ್ನು ಮತ್ತಷ್ಟು ಜನಪ್ರಿಯತೆಗೊಳಿಸಿದ್ದು ಮಾತ್ರವಲ್ಲ, ಪಾವಿತ್ರ್ಯತೆಯನ್ನು ಪ್ರಚರುಪಡಿಸಿದ ನಟನ ಅನಾರೋಗ್ಯಕ್ಕೆ ನೆರವು ನೀಡಲು ಶಿರ್ಡಿ ಸಾಯಿ ಬಾಬಾ ಟ್ರಸ್ಟ್ ಮುಂದಾಗಿತ್ತು. ಆದರೆ ನೆರವು ನೀಡಲು ಕಾನೂನು ತೊಡಕುಗಳು ಎದುರಾಗಿತ್ತು. ಒಬ್ಬ ನಟನ ಚಿಕಿತ್ಸೆಗೆ ಟ್ರಸ್ಟ್‌ನಿಂದ 11 ಲಕ್ಷ ರೂಪಾಯಿ ನೀಡುವುದು ಅಸಾಧ್ಯವಾಗಿತ್ತು. ಹೀಗಾಗಿ ಶಿರ್ಡಿ ಸಾಯಿ ಬಾಬಾ ಟ್ರಸ್ಟ್ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ನೆರವು ನೀಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿದ ಕೋರ್ಟ್ ಇದೀಗ 11 ಲಕ್ಷ ರೂಪಾಯಿ ನರೆವು ನೀಡಲು ಕೋರ್ಟ್ ಸೂಚಿಸಿದೆ.

1977ರಲ್ಲಿ ತೆರಕಂಡಿತ್ತು ಸಿನಿಮಾ

ಸುಧೀರ್ ದಾಲ್ವಿ ಸಾಯಿ ಬಾಬ ಆಗಿ ನಟಿಸಿದ ಶಿರ್ಡಿ ಕೆ ಸಾಯಿ ಬಾಬಾ ಸಿನಿಮಾ 1977ರಲ್ಲಿ ತೆರೆ ಕಂಡಿತ್ತು. ಅಶೋಕ್ ವಿ ಭೂಷಣ್ ನಿರ್ದೇಶನದ ಈ ಸಿನಿಮಾ, ಶಿರ್ಡಿಯ ಸಾಬಿ ಬಾಬ ಪವಾಡಗಳು, ಅನುಗ್ರಹ, ಶಕ್ತಿಗಳ ಕುರಿತು ತಿಳಿಸಿತ್ತು. ಈ ಸಿನಿಮಾ ಬಿಡುಗಡೆ ಬಳಿಕ ಶಿರ್ಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಭಕ್ತರ ಸಾಗರವೇ ಹರಿದು ಬರಲು ಆರಂಭಗೊಂಡಿತ್ತು. ಶಿರ್ಡಿ ಸಾಯಿ ಬಾಬಾ ದೇವಸ್ಥಾನ ಭಾರತದ ಅತೀ ಹೆಚ್ಚು ಭಕ್ತರನ್ನು ಸೆಳೆಯುವ ಹಾಗೂ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.