ಆತ್ಮಾಹುತಿ ಬಾಂಬ್ ದಾಳಿ ಭೀತಿ: ಸ್ವಾತಂತ್ರ ದಿನಾಚರಣೆಗೂ ಮೊದಲು ರಾಜಧಾನಿಯಲ್ಲಿ ಹೈ ಅಲರ್ಟ್
ಜಮ್ಮು ಕಾಶ್ಮೀರದಿಂದ ಕಾರ್ಯಾನಿರ್ವಹಿಸುತ್ತಿರುವ ಎರಡು ಭಯೋತ್ಪಾದಕ ಗುಂಪುಗಳು ಸ್ವಾತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಬಂದಿದ್ದು ಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ನವದೆಹಲಿ: ಜಮ್ಮು ಕಾಶ್ಮೀರದಿಂದ ಕಾರ್ಯಾನಿರ್ವಹಿಸುತ್ತಿರುವ ಎರಡು ಭಯೋತ್ಪಾದಕ ಗುಂಪುಗಳು ಸ್ವಾತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ವಾತಂತ್ರ ದಿನಾಚರಣೆಯ ಮುನ್ನಾದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಂದಿನಂತೆ ಇರುವ ಬಿಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ದೆಹಲಿ ಅಥವಾ ಪಂಜಾಬ್‌ನಲ್ಲಿ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಸ್ವಾತಂತ್ರ ದಿನಾಚರಣೆಯಂದು ಸಾಮಾನ್ಯವಾಗಿ ಭದ್ರತೆ ಎಂದೆಂದಿಗಿಂತಲೂ ಹೆಚ್ಚಾಗಿರುವುದರಿಂದ ಆ ದಿನದ ಹಿಂದುಮುಂದಾಗಿ ದಾಳಿ ನಡೆಸುವ ಬಗ್ಗೆ ಉಗ್ರರು ಸಂಚು ರೂಪಿಸಿದದಾರೆ ಎಂದು ಉಗ್ರರ ನಡುವಿನ ಮಾತುಕತೆ ಆಧರಿಸಿ ಗುಪ್ತಚರ ಇಲಾಖೆ ವರದಿ ಮಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ಇಬ್ಬರು ಅಪರಿಚಿತರು ಸಶ್ತ್ರಾಸ್ತ್ರಗಳೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಅವರು ಸಮೀಪದ ನಗರವಾದ ಪಠಾಣ್‌ಕೋಟ್‌ಗೆ ಹೋಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ಮೂಲವೊಂದು ವರದಿ ಮಾಡಿದೆ.
ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಗೆ ಆಹುತಿಯಾಯ್ತು 65 ಕೋಟಿ ಮೌಲ್ಯದ ನೂರಾರು ವಾಹನಗಳು
ಪಂಜಾಬ್ ಹಾಗೂ ಜಮ್ಮು ಕಾಶ್ಮೀರ ಭಾಗದಲ್ಲಿ ಸಕ್ರಿಯವಾಗಿರುವ ಗ್ಯಾಂಗ್‌ಸ್ಟರ್‌ಗಳು, ಮೂಲಭೂತವಾದಿಗಳು, ಭಯೋತ್ಪಾದಕರು ಸ್ವಾತಂತ್ರದಿನಾಚರಣೆ ಹಾಗು ಈಗ ನಡೆಯುತ್ತಿರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಯತ್ನಿಸುತ್ತಿವೆ. ಆಗಸ್ಟ್ 15ರ ಹಿಂದೆ ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಗುರಿಯಾಗಿಸಿ ಐಇಡಿಯನ್ನು ಬಳಸಿ ದಾಳಿ ಮಾಡಬಹುದು ಎಂದು ವರದಿಯಾಗಿದೆ.
ಡಿಆರ್‌ಡಿಒ ಮತ್ತೊಂದು ಸಾಧನೆ; ಹೆಗಲ ಮೇಲಿಂದ ಹಾರಿಸಬಲ್ಲ ಕ್ಷಿಪಣಿ ಪ್ರಯೋಗ ಯಶಸ್ವಿ!