Asianet Suvarna News Asianet Suvarna News

ಡಿಆರ್‌ಡಿಒ ಮತ್ತೊಂದು ಸಾಧನೆ; ಹೆಗಲ ಮೇಲಿಂದ ಹಾರಿಸಬಲ್ಲ ಕ್ಷಿಪಣಿ ಪ್ರಯೋಗ ಯಶಸ್ವಿ!

ಶತ್ರುದೇಶಗಳ ಯುದ್ಧ ಟ್ಯಾಂಕರ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಎಂಪಿ- ಎಟಿಜಿಎಂ (ಮ್ಯಾನ್‌- ಪೋರ್ಟಬಲ್‌ ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್‌) ಅನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ಪ್ರಯೋಗಿಸಿದೆ.

DRDO indian arrmy successfully test man portable anti tank missile system rav
Author
First Published Aug 14, 2024, 8:19 AM IST | Last Updated Aug 14, 2024, 8:19 AM IST

ನವದೆಹಲಿ (ಆ.14): ಶತ್ರುದೇಶಗಳ ಯುದ್ಧ ಟ್ಯಾಂಕರ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಎಂಪಿ- ಎಟಿಜಿಎಂ (ಮ್ಯಾನ್‌- ಪೋರ್ಟಬಲ್‌ ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್‌) ಅನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ಪ್ರಯೋಗಿಸಿದೆ.

ಹೆಗಲ ಮೇಲಿಂದಲೇ ಹಾರಿಸಬಹುದಾದ, ಹಗುರ ಹಾಗೂ ಅತ್ಯಾಧುನಿಕವಾದ ಕ್ಷಿಪಣಿ ವ್ಯವಸ್ಥೆಯನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕಳೆದ ಏ.14ರಂದು ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಕೂಡಾ ಹಾರಿಸಬಹುದಾಗಿದೆ. ಉಡಾವಣೆಗೊಂಡ ಬಳಿಕ ಅದು ಯಾವುದೇ ನಿರ್ದೇಶನದ ಅಗತ್ಯವಿಲ್ಲದೇ ತನ್ನ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಪರೀಕ್ಷೆ ವೇಳೆ ಕ್ಷಿಪಣಿ ವ್ಯವಸ್ಥೆ ಎಲ್ಲಾ ಪೂರ್ವನಿರ್ಧರಿತ ಮಾನದಂಡಗಳನ್ನು ಪೂರೈಸಿದೆ ಎಂದು ಡಿಆರ್‌ಡಿಒ ಮಾಹಿತಿ ನೀಡಿದೆ.

'ನ್ಯಾಯ ಸಿಗದಿದ್ರೆ ಬೆಂಗಳೂರನ್ನೇ ಶಿವಾ ಅನಿಸಿಬಿಡ್ತಿನಿ' ಇನ್ಸಟಾಗ್ರಾಮನಲ್ಲಿ ಬಾಂಬ್‌ ಬೆದರಿಕೆ ಹಾಕಿ ಯುವಕನ ಹುಚ್ಚಾಟ!

1000 ಕಿ.ಮೀ. ಸಾಗಬಲ್ಲ ಸ್ವದೇಶಿ ಕಾಮಿಕೇಜ್‌ ಡ್ರೋನ್‌ ಅನಾವರಣ

ನವದೆಹಲಿ: ಭಾರತವು 1,000 ಕಿಮೀ ವ್ಯಾಪ್ತಿಯ ಮಾರಕ ‘ಸ್ವದೇಶಿ’ ಕಾಮಿಕೇಜ್ ಡ್ರೋನ್‌ಗಳನ್ನು ಅನಾವರಣಗೊಳಿಸಿದೆ. ಭಾರತೀಯ ಕಾಮಿಕೇಜ್ ಡ್ರೋನ್ ಸುಮಾರು 2.8 ಮೀಟರ್ ಉದ್ದ ಮತ್ತು 3.5 ಮೀಟರ್ ರೆಕ್ಕೆಗಳನ್ನು ಹೊಂದಿರುತ್ತದೆ.ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್‌ಎಎಲ್‌) ಕಾಮಿಕೇಜ್‌ ಡ್ರೋನ್‌ಗಳನ್ನು ತಯಾರಿಸುತ್ತದೆ. ಈ ಮಾನವರಹಿತ ವೈಮಾನಿಕ ಸಾಧನಗಳನ್ನು ಸ್ವದೇಶಿ-ನಿರ್ಮಿತ ಎಂಜಿನ್‌ಗಳೊಂದಿಗೆ ತಯಾರಿಸುತ್ತಿದ್ದು, 1000 ಕಿ.ಮೀ.ವರೆಗೆ ಸಾಗುತ್ತವೆ. ಈ ಡ್ರೋನ್‌ನಲ್ಲಿ ಸ್ಫೋಟಕ ಒಯ್ಯಬಹುದು ಹಾಗೂ ಮಾನವ ನಿಯಂತ್ರಣದಿಂದ ನಿರ್ದಿಷ್ಟ ಗುರಿ ಮೇಲೆ ದಾಳಿ ಮಾಡಬಹುದು.

ಈ ಡ್ರೋನ್‌ಗಳನ್ನು ಈಗಹ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ವಿಶೇಷವಾಗಿ ರಷ್ಯಾ ಸೈನಿಕರ ಮೇಲೆ ಉಕ್ರೇನಿಯನ್ನರು ಹೆಚ್ಚು ಬಳಸಿದ್ದಾರೆ.

Latest Videos
Follow Us:
Download App:
  • android
  • ios