ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಗೆ ಆಹುತಿಯಾಯ್ತು 65 ಕೋಟಿ ಮೌಲ್ಯದ ನೂರಾರು ವಾಹನಗಳು

ಬಾಂಗ್ಲಾದೇಶದಲ್ಲಿ ರಸ್ತೆ ಸಾರಿಗೆ ಹಾಗೂ ಸೇತುವೆ ಸಚಿವಾಲಯವಿದ್ದ ಸೇತು ಭವನಕ್ಕೆ ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಯಿಂದಾಗಿ ಸುಮಾರು 65 ಕೋಟಿಗೂ ಅಧಿಕ ಮೌಲ್ಯದ ನೂರಾರು ವಾಹನಗಳು ಬೆಂಕಿಗಾಹುತಿಯಾಗಿದೆ. 

Vehicles worth more than 65 crore reduced into ashes after Bangladesh insurgency set fire to setu bhaban akb

ಢಾಕಾ: ಬಾಂಗ್ಲಾದೇಶದಲ್ಲಿ ರಸ್ತೆ ಸಾರಿಗೆ ಹಾಗೂ ಸೇತುವೆ ಸಚಿವಾಲಯವಿದ್ದ ಸೇತು ಭವನಕ್ಕೆ ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಯಿಂದಾಗಿ ಸುಮಾರು 65 ಕೋಟಿಗೂ ಅಧಿಕ ಮೌಲ್ಯದ ನೂರಾರು ವಾಹನಗಳು ಬೆಂಕಿಗಾಹುತಿಯಾಗಿದೆ. ಢಾಕಾದ ಮಹಾಕಾಳಿಯಲ್ಲಿ ಇದ್ದ ಈ ಬಾಂಗ್ಲಾದೇಶದ  ಸಚಿವಾಲಯಕ್ಕೆ ಸೋಮವಾರ ಅಲ್ಲಿನ ಅಧಿಕಾರಿಗಳು ಭಯ ಆತಂಕದಿಂದಲೇ ಕಟ್ಟಡವನ್ನು ಪ್ರವೇಶಿಸಿದರು. ಈ ಕಟ್ಟಡವನ್ನು ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ಮಾಡಿ ಕಟ್ಟಡದ ಆವರಣದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು.  ಪರಿಣಾಮ ಕಟ್ಟಡದಲ್ಲಿದ್ದ ಸರ್ಕಾರಿ ಅಧಿಕಾರಿಗಳು ಬಳಸುತ್ತಿದ್ದ ಕೋಟ್ಯಾಂತರ ಮೌಲ್ಯದ ವಾಹನಗಳು ಬೆಂಕಿಗಾಹುತಿಯಾಗಿದೆ. 

ಈ ಸಚಿವಾಲಯದ ನೇತೃತ್ವವನ್ನು ಅವಾಮಿ ಲೀಗ್‌ನ ಸಚಿವರೊಬ್ಬರು ಹೊಂದಿದ್ದು, ವಿದ್ಯಾರ್ಥಿಗಳ ಮೀಸಲಾತಿ ಕೋಟಾದ ಪ್ರತಿಭಟನೆ ವೇಳೆ  ಇದು ವಿವಾದದ ಕೇಂದ್ರಬಿಂದುವಾಗಿತ್ತು,. ಪ್ರತಿಭಟನೆ ವೇಳೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಸಚಿವಾಲಯದ ಕಟ್ಟಡಕ್ಕೆ ಬೆಂಕಿ  ಹಚ್ಚಿದ್ದರು. ಅಲ್ಲದೇ ಸರ್ಕಾರಿ ಆಸ್ತಿ ಹಾಗೂ ಅಲ್ಲಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿ ಮಾಡಿ ಧ್ವಂಸ ಮಾಡಿದ್ದರು. ಈ ಕಟ್ಟಡದಲ್ಲಿದ್ದ ಇಷ್ಟೊಂದು ವಾಹನಗಳನ್ನು ಸಚಿವಾಲಯದ ಇತರ ಕೆಲಸ ಹಾಗೂ ಕಾರ್ಯಾಚರಣೆಗಳಿಗೆ, ಅಧಿಕಾರಿಗಳ ಪ್ರಯಾಣಕ್ಕೆ ಬಳಸಲಾಗುತ್ತಿತ್ತು. ಹೀಗೆ ಬೆಂಕಿಗಾಹುತಿಯಾದ ವಾಹನಗಳಲ್ಲಿ 57 ಎಸ್‌ಯುವಿ ಕಾರುಗಳು, ಪಿಕಪ್ ಟ್ರಕ್‌ಗಳು, ಮಿನಿಬಸ್‌ಗಳು, ಮೋಟರ್‌ ಸೈಕಲ್‌ಗಳು, ಬೈಕ್‌ಗಳು ಸೇರಿವೆ. 

ಹಿಜಾಬ್ ಧರಿಸಿಲ್ಲ ಎಂದು ಮಹಿಳೆಗೆ ಗುಂಡಿಕ್ಕಿದ ಪೊಲೀಸ್

ಈ ಘಟನೆಯಿಂದಾಗಿ ಸೇತು ಭವನ ಕಟ್ಟಡವೂ ವಾಸಕ್ಕೆ ಯೋಗ್ಯವಲ್ಲದ ಸ್ಥಳವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸಚಿವಾಲಯದ ಅಧಿಕಾರಿಗಳು, ಕಟ್ಟಡದ ಹಾನಿಗೊಳಗಾದ ಸ್ಥಿತಿಯಿಂದಾಗಿ ಈಗ ಉದ್ಯೋಗಿಗಳು ಕಟ್ಟಡದೊಳಗೆ ಪ್ರವೇಶಿಸಲು ಭಯಪಡುತ್ತಾರೆ. ಹೀಗಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಲು ಮಾಡಿದ ಕಟ್ಟಡದ ಹೊರಗಿನ ಸ್ಥಳದಲ್ಲಿ ಕೆಲಸ ಮಾಡುವಂತೆ ಅವರನ್ನು ಒತ್ತಾಯಿಸಲಾಗುತ್ತಿದೆ. 

ರಕ್ತ ಬೇಕಿದ್ರೆ ಕೊಟ್ಟೆವು ಆದ್ರೆ ಮತ್ತೆ ದೇಶ ಬಿಡೆವು: ತಾಯ್ನೆಲದಲ್ಲಿ ಉಳಿವಿಗೆ ಬಾಂಗ್ಲಾ ಹಿಂದೂಗಳ ಹೋರಾಟ

ಬಾಂಗ್ಲಾ ವಿಮೋಚನ ಹೋರಾಟಗಾರರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30ರಷ್ಟು ಮೀಸಲಾತಿ ನೀಡಿದ ಪ್ರಧಾನಿ ಶೇಕ್ ಹಸೀನಾರ ಸರ್ಕಾರದ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ಬೀದಿಗಿಳಿದಿದ್ದರು. ಇದಾದದ ನಂತರ ಬಾಂಗ್ಲಾದೇಶ ಸುಪ್ರೀಂಕೋರ್ಟ್ ಈ ಮೀಸಲಾತಿಯನ್ನು ರದ್ದುಪಡಿಸಿತ್ತು. ಆ ಸಮಯದಲ್ಲಿ ಸ್ವಲ್ಪ ತಣ್ಣಗಾದ ಹೋರಾಟ ನಂತರ ತೀವ್ರ ಸ್ವರೂಪವನ್ನು ಪಡೆದುಕೊಂಡು ಸರ್ಕಾರದ ವಿರುದ್ಧದ ಹೋರಾಟವಾಗಿ ಬದಲಾಯ್ತು, ವಿದ್ಯಾರ್ಥಿಗಳ ಈ ದಂಗೆಯಿಂದ ಪ್ರಧಾನಿ ಶೇಕ್ ಹಸೀನಾ ಜೀವಭಯಕ್ಕೊಳಗಾಗಿ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಇದರ ಜೊತೆಗೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ರಾಜೀನಾಮೆಯನ್ನು ಕೂಡ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಪಡೆದಿದ್ದಾರೆ. 

ಬಾಂಗ್ಲಾದೇಶ: 1971ರ ಯುದ್ಧದಲ್ಲಿ ಪಾಕ್‌ ಸೇನೆ ಶರಣಾಗಿದ್ದನ್ನು ಬಿಂಬಿಸುವ ಐತಿಹಾಸಿಕ ಪ್ರತಿಮೆಯೂ ಧ್ವಂಸ 

 

 

Latest Videos
Follow Us:
Download App:
  • android
  • ios