Asianet Suvarna News Asianet Suvarna News

ವಿಡಿಯೋ ಕಾಲ್‌ ವೇಳೆ ಮೊಬೈಲ್‌ ಸ್ಕ್ರೀನ್‌ ಶೇರ್‌: ವಾಟ್ಸಾಪ್‌ ಹೊಸ ಫೀಚರ್‌

ವಿಡಿಯೋ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್‌ ಅನ್ನು ಹಂಚಿಕೊಳ್ಳಬಹುದಾದ ನೂತನ ಫೀಚರ್‌ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್‌ (whatsapp messaging app) ಘೋಷಿಸಿದೆ. 

Famous messaging app WhatsApp has announced that it will soon release a new feature that will allow users to share their mobile screen during video calls akb
Author
First Published Aug 9, 2023, 10:17 AM IST

ನವದೆಹಲಿ: ವಿಡಿಯೋ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್‌ ಅನ್ನು ಹಂಚಿಕೊಳ್ಳಬಹುದಾದ ನೂತನ ಫೀಚರ್‌ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್‌ (whatsapp messaging app) ಘೋಷಿಸಿದೆ. ಮೆಟಾದ ಸಿಇಒ ಮಾರ್ಕ್ಜುಗರ್‌ಬಗ್‌ರ್‍ ಅವರು ವಾಟ್ಸಾಪ್‌ನ ಹೊಸ ಫೀಚರ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ.

ಏನಿದು ಹೊಸ ಫೀಚರ್‌? :

ಸಾಮಾನ್ಯವಾಗಿ ವಿಡಿಯೋ ಕಾಲ್‌ನಲ್ಲಿ ಫ್ರಂಟ್‌ ಕ್ಯಾಮರಾ (Front cam) ಅಥವಾ ಬ್ಯಾಕ್‌ ಕ್ಯಾಮರಾಗಳನ್ನು ಟರ್ನ್‌ ಆನ್‌ ಮಾಡಿಕೊಂಡು ನಮ್ಮೊಂದಿಗೆ ವಿಡಿಯೋ ಕಾಲ್‌ (video call) ಮಾಡಿದವರ ಜೊತೆ ಸಂವಹನ ನಡೆಸಬಹುದಾಗಿತ್ತು. ಆದರೆ ನಮ್ಮ ಮೊಬೈಲ್‌ನ ಪರದೆಯನ್ನು ಶೇರ್‌ ಮಾಡಬಹುದಾದ ಹೊಸ ಫೀಚರ್‌ ಅನ್ನು ವಾಟ್ಸಾಪ್‌ ನೀಡಲಿದೆ.

ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಸ್ಟೇಟಸ್‌, ಕೇಸ್‌ ರದ್ದು ಮಾಡಲು ನಿರಾಕರಿಸಿದ ಕೋರ್ಟ್‌!

ಉದಾಹರಣೆಗೆ ಝೂಮ್‌ ಮೀಟಿಂಗ್‌ ಕಾಲ್‌ಗಳಲ್ಲಿ ಮೊಬೈಲ್‌ ಸ್ಕ್ರೀನ್‌ ಶೇರ್‌ ಮಾಡಿ ಹೇಗೆ ಮಾಹಿತಿಯನ್ನು ತೋರಿಸುತ್ತ ವಿವರಣೆ ನೀಡಬಹುದೋ ಅದೇ ಮಾದರಿಯಾಗಿದೆ. ಇದು ಕಚೇರಿ ಕೆಲಸಗಳಿಗೆ ಸಿಬ್ಬಂದಿಗಳ ಮೀಟಿಂಗ್‌ಗಾಗಿ ಬಹಳ ಉಪಯುಕ್ತವಾಗಿರಲಿದೆ. ಹೀಗಾಗಿ ಗೂಗಲ್‌ ಮೀಟ್‌ ಮತ್ತು ಝೂಮ್‌ಗಳಿಗೆ ವಾಟ್ಸಾಪ್‌ ಕಠಿಣ ಸ್ಪರ್ಧೆ ನೀಡಲು ಮುಂದಾಗಿದೆ.

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

Follow Us:
Download App:
  • android
  • ios