Asianet Suvarna News Asianet Suvarna News

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಕುವೈತ್, ಸೌದಿ ಅರೇಬಿಯಾದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. . 

beware sending heart emojis to girls can land you in jail in kuwait saudi arabia ash
Author
First Published Aug 1, 2023, 5:40 PM IST

ನವದೆಹಲಿ (ಆಗಸ್ಟ್‌ 1, 2023): ವಾಟ್ಸಪ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಕೋಟ್ಯಂತರ ಜನರು ಬಳಸುತ್ತಾರೆ. ಈ ಪೈಕಿ ಹೆಚ್ಚಿನವ್ರು ಹದಿಹರೆಯದವರು ಹಾಗೂ ಯುವ ವಯಸ್ಕರು. ಗೆಳೆಯ - ಗೆಳತಿಯರು, ಬಾಯ್‌ಫ್ರೆಂಡ್‌ - ಗರ್ಲ್‌ಫ್ರೆಂಡ್‌ ಹಾಗೂ ಪ್ರೇಮಿಗಳು ಹೆಚ್ಚಿನವರು ಇದರ ಬಳಕೆ ಮಾಡೋದು ಹೆಚ್ಚು. ಅಲ್ಲದೆ, ಇಮೋಜಿಗಳನ್ನು ಕಳಿಸೋದು ಹದಿ ಹರೆಯದವರು ಹಾಗೂ ಯುವ ವಯಸ್ಕರಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಆದರೆ, ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ ವಿಚಾರದ ಬಗ್ಗೆ ನೀವು ತಿಳಿದುಕೊಂಡಿರಬೇಕು.

ಹೌದು, ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹಾರ್ಟ್‌ ಸಿಂಬಲ್‌ ಇರುವ ಅಥವಾ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಇದು, ಶಿಕ್ಷಾರ್ಹ ಅಪರಾಧವಾಗಿದೆ! ಹೆದರಬೇಡಿ, ಇಂತಹ ಕಾನೂನು ಭಾರತದಲ್ಲಿಲ್ಲ. ಆದರೂ, ನೀವು ಈ ದೇಶಗಳಿಗೆ ಹೋದಾಗ ಅಥವಾ ಅಲ್ಲಿ ವಾಸ ಮಾಡ್ತಿದ್ರೆ ಈ ನಿಯಮವನ್ನು ಫಾಲೋ ಮಾಡ್ಲೇಬೇಕು. 

ಇದನ್ನು ಓದಿ: 3 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ: ಸಹಾಯಕ್ಕೆ ಕಿರುಚಿದ್ರೂ ನೆರವಿಗೆ ಬಾರದ ಜನ!

ಇಸ್ಲಾಮಿಕ್‌ ದೇಶ ಕುವೈತ್‌ನಲ್ಲಿ ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿ ಕಳುಹಿಸುವುದನ್ನು ಈಗ ಕುವೈತ್‌ನಲ್ಲಿ ದುಷ್ಕೃತ್ಯಕ್ಕೆ ಪ್ರಚೋದಿಸುವ ಅಪರಾಧವೆಂದು ಪರಿಗಣಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ಕುವೈತ್ ವಕೀಲರಾದ ಹಯಾ ಅಲ್ ಶಲಾಹಿ ಅವರ ಪ್ರಕಾರ, ಈ ಅಪರಾಧಕ್ಕೆ ಶಿಕ್ಷೆಗೊಳಗಾದವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬಹುದು. ಅಲ್ಲದೆ, 2,000 ಕುವೈತ್ ದಿನಾರ್‌ಗಳನ್ನು ಮೀರದ ದಂಡವನ್ನು ಎದುರಿಸಬೇಕಾಗುತ್ತದೆ.

ಅದೇ ರೀತಿ, ಮತ್ತೊಂದು ಮುಸಲ್ಮಾನ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಸಹ ವಾಟ್ಸಾಪ್‌ನಲ್ಲಿ 'ಕೆಂಪು ಹೃದಯ' ಇಮೋಜಿಗಳನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಸೌದಿ ಕಾನೂನಿನ ಪ್ರಕಾರ, ಈ ಕೃತ್ಯದ ತಪ್ಪಿತಸ್ಥರು 100,000 ಸೌದಿ ರಿಯಾಲ್‌ಗಳ ದಂಡದೊಂದಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಇದನ್ನೂ ಓದಿ: ನಿರುದ್ಯೋಗಿ ಪತ್ನಿಗೆ ಕಂಪನಿ ದುಡ್ಡಿಂದ 10 ವರ್ಷ ಕಾಲ ಸಂಬಳ: 4 ಕೋಟಿ ರೂ. ವಂಚಿಸಿದ ಖತರ್‌ನಾಕ್‌ ಉದ್ಯೋಗಿ!

ವಾಟ್ಸಾಪ್‌ನಲ್ಲಿ ಕೆಂಪು ಹೃದಯಗಳನ್ನು ಕಳುಹಿಸುವುದನ್ನು ದೇಶದ ನ್ಯಾಯವ್ಯಾಪ್ತಿಯಲ್ಲಿ "ಕಿರುಕುಳ" ಎಂದು ಅರ್ಥೈಸಬಹುದು ಎಂದು ಸೌದಿ ಸೈಬರ್ ಕ್ರೈಮ್ ತಜ್ಞರು ಮಾಹಿತಿ ನೀಡಿದ್ದಾರೆ. ಇನ್ನು, ಈ ಬಗ್ಗೆ ಸೌದಿ ಅರೇಬಿಯಾದ ಆಂಟಿ-ಫ್ರಾಡ್ ಅಸೋಸಿಯೇಷನ್‌ನ ಸದಸ್ಯ ಅಲ್ ಮೊಟಾಜ್ ಕುಟ್ಬಿ ಹೇಳಿರುವುದು ಹೀಗೆ.. "ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸಿದರೆ, ಈ ಬಗ್ಗೆ ನೊಂದ ವ್ಯಕ್ತಿ ಮೊಕದ್ದಮೆ ಹೂಡಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು" ಎಂದು ಸೌದಿ ಅರೇಬಿಯಾ ಕಾಣೂನಿನ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಅಲ್ಲದೆ, ಸೌದಿ ಅರೇಬಿಯಾದಲ್ಲಿ ಒಂದು ಬಾರಿ ಈ ನಿಯಮ ಉಲ್ಲಂಘಿಸಿದ್ರೆ 100,000 ಸೌದಿ ರಿಯಾಲ್‌ಗಳ ದಂಡ ವಿಧಿಸಲಾಗುತ್ತದೆ. ಆದರೆ, ಹಲವು ಬಾರಿ ಈ ಉಲ್ಲಂಘನೆಗಳನ್ನು ಮಾಡಿದ್ರೆ, ದಂಡವು 300,000 ಸೌದಿ ರಿಯಾಲ್‌ಗಳಿಗೆ ಹೆಚ್ಚಾಗುತ್ತದೆ. ಹಾಗೂ, ಗರಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಹೆಚ್ಚಿಸಬಹುದು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: BENGALURU: ಟೆಕ್ಕಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್‌ ಆಮಿಷ: 1.1 ಕೋಟಿ ರೂ. ವಂಚನೆ ಮಾಡಿದ ನಕಲಿ 'ವಧು'!

Follow Us:
Download App:
  • android
  • ios