ಗಡ್ಢ ಬೆಳೆಸಿದ ಕೂಡಲೇ ಯಾರು ಮೌಲಾನಾ ಅಥವಾ ಧರ್ಮುಗುರು ಆಗುದಿಲ್ಲ ಅನ್ನೋ ಅಜಂ ಖಾನ್ ಹೇಳಿಕೆಗೆ ಅಸಾದುದ್ದೀನಿ ಒವೈಸಿ ತಿರುಗೇಟು ನೀಡಿದ್ದಾರೆ. ಒವೈಸಿ ಮಾತಿನಿಂದ ಇದೀಗ ಯುಪಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಲಖನೌ (ನ.27) ಗಡ್ಢಬೆಳೆಸಿದ ಮಾತ್ರಕ್ಕೆ ಮೌಲಾನಾ ಆಗುವುದಿಲ್ಲ, ಧರ್ಮಗುರು ಆಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ನೀಡಿದ ಹೇಳಿಕೆಗೆ ಇದೀಗ ಎಐಎಂಐಎಂ ನಾಯಕ ಅಸಾಸುದ್ದೀನ್ ಒವೈಸಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಅಸಾದುದ್ದೀನ್ ಒವೈಸಿ ಎಐಎಂಐಎಂ ಪಾರ್ಟಿ ಮುಸ್ಲಿಂ ಹಾಗೂ ದಲಿತ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದೆ. ಅಜಂ ಖಾನ್ ಗಡ್ಡದ ಹೇಳಿಕೆಗೆ ತಿರುಗೇಟು ನೀಡಿದ ಒವೈಸಿ, ನಿಮಗೆ ಮುಸ್ಲಿಂ ಗಡ್ಡಧಾರಿ ಬೇಕೋ ಅಥವಾ ಹಿಂದುತ್ವದ ಅಖಿಲೇಶ್ ಯಾದವ್ ಬೇಕೋ ಎಂದು ಪ್ರಶ್ನಿಸಿದ್ದಾರೆ. ಯಾರು ಬೇಕು ಅನ್ನೋದು ಅಜಂ ಖಾನ್ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಗಡ್ಡ ನನ್ನ ಹೆಮ್ಮೆ ಎಂದ ಒವೈಸಿ
ಅಜಂ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಅಸಾದುದ್ದೀನ್ ಒವೈಸಿ, ಗಡ್ಡ ಬೆಳೆಸುವುದು ಇತರರಿಗಾಗಿ ಅಲ್ಲ, ಮುಸ್ಲಿಂನಾಗಿ ಗಡ್ಡ ಬೆಳೆಸುವುದು ನನಗೆ ಹೆಮ್ಮೆಯ ವಿಷಯ ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯಗಳ ಪ್ರತಿನಿಧಿಸುವಲ್ಲಿ ವಿಫಲವಾಗಿದೆ ಎಂದು ಒವೈಸಿ ಹೇಳಿದ್ದಾರೆ.
ಸಮಾಜಿಕ ಪರಿವರ್ತನಾ ಮೋರ್ಚಾ ಆಯೋಜಿಸಿದ ಸಮಾವೇಶದಲ್ಲಿ ಪಾಲ್ಗೊಂಡ ಒವೈಸಿ ಖಡಕ್ ಸವಾಲು ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂರ ವಿರುದ್ಧ ನಡೆದ ಅನ್ಯಾಗಳಿಗೆ ಅಖಿಲೇಶನ್ ಯಾದವ್ ಹೊಣೆಗಾರರು. ಮುಸ್ಲಿಂ ಪ್ರಾತಿನಿಧ್ಯದ ಬದ್ಧತೆ ಕುರಿತು ಪ್ರಶ್ನಿಸಿದ ಒವೈಸಿ, ರಾಜ್ಯದಲ್ಲಿ ಮಸ್ಲಿಂ ಸಮುದಾಯದ ಪರಿಸ್ಥಿತಿ ಯಾಕೆ ಹೀಗಿದೆ? ಇದಕ್ಕೆ ಕಾರಣ ಅಖಿಲೇಶ್ ಯಾದವ್ ನೇರ ಕಾರಣವಾಗಿದೆ. ಮುಸ್ಲಿಂರನ್ನು ಮತಬ್ಯಾಂಕ್ ಉದ್ದೇಶಕ್ಕಾಗಿ ಬಳಕೆ ಮಾಡಿದೆ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಾರ್ಟಿ ಪ್ರಾತಿನಿಧ್ಯ ನೀಡದೆ ಸುಮ್ಮನಾಗಿದೆ ಎಂದು ಆರೋಪಿಸಿದ್ದಾರೆ. ಅರ್ಹಲ್ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ 403 ಸ್ಥಾನಕ್ಕೆ ಮೈತ್ರಿ ಸ್ಪರ್ಧಿ
ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳಿಗೆ ಮೈತ್ರಿಗಳಾದ ಎಐಎಂಐಎಂ ಹಾಗೂ ಅಜಾದ್ ಸಮಾಜ್ ಪಾರ್ಟಿ ಸ್ಪರ್ಧಿಸಲಿದೆ ಎಂದು ಘೋಷಿಸಿದೆ. ಈ ಮೂಲಕ 2027ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಲಿದೆ. ದಲಿತ ಹಾಗೂ ಮುಸ್ಲಿಂ ಮತಗಳ ಮೇಲೆ ಗಮನಕೇಂದ್ರೀಕರಿಸಿರುವ ಈ ಮೈತ್ರಿ ಯಾವ ಪಕ್ಷದ ಮತಗಳನ್ನು ಕಸಿದುಕೊಳ್ಳಲಿದೆ ಅನ್ನೋದು ಕುತೂಹಲವಾಗಿದೆ.
ಚಂದ್ರಶೇಖರ್ ಅಜಾದ್ ಅವರ ಅಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ಉತ್ತರಲ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ದಲಿತರು, ಮುಸ್ಲಿಂರ ನಿಜವಾದ ಪ್ರತಿನಿಧಿಗಳಾಗಿ ಹೋರಾಡುತ್ತಿದ್ದೇವೆ. ಭಾರತೀಯ ಮುಸ್ಲಿಂನ ನಿಷ್ಠೆ ಕುರಿತು ಹಲವು ಪ್ರಶ್ನೆಗಳು ಎದುರಾಗುತ್ತಿದೆ. ಈ ಚುನಾವಣೆ ಎಲ್ಲದಕ್ಕೂ ಉತ್ತರ ನೀಡಬೇಕು. ಇದಕ್ಕೆ ಮತದಾರರು ನಮಗೆ ಬೆಂಬಲ ನೀಡಬೇಕು ಎಂದು ಒವೈಸಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಚಂದ್ರಶೇಖರ್ ಅಜಾದ್, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ದುರಾಡಳಿತದಿಂದ 16 ತಿಂಗಳು ಜೈಲಿನಲ್ಲಿ ಕಳೆದಿದ್ದೇನೆ. ಇತ್ತ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ಮೈತ್ರಿ ಮಾಡಿಕೊಂಡು ಸಾಗುತ್ತಿದೆ.














