ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್‌ ಮತ್ತು ಇ-ನೋಸ್‌’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ.

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್‌ ಮತ್ತು ಇ-ನೋಸ್‌’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಸತ್ಯಕುಮಾರ್‌ ಯಾದವ್‌ ಮಾಹಿತಿ

ಪತ್ರಿಕಾಪ್ರಕಟಣೆ ಮೂಲಕ ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್‌ ಯಾದವ್‌ ಮಾಹಿತಿ ನೀಡಿದ್ದು, ‘ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ಇ-ಟಂಗ್‌ ವ್ಯವಸ್ಥೆಯು ತುಪ್ಪದ ರುಚಿ ನೋಡಿ ಗುಣಮಟ್ಟ ಪತ್ತೆ ಮಾಡಲಿದೆ.

ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು

ಅಂತೆಯೇ ಇ-ನೋಸ್‌ನಿಂದ ಘಮವನ್ನು ಆಘ್ರಾಣಿಸಿ ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು. ಈ ಎಲೆಕ್ಟ್ರಾನಿಕ್‌ ಉಪಕರಣಗಳಿಂದ, ತುಪ್ಪದ ಗುಣಮಟ್ಟದಲ್ಲಿ ಸಣ್ಣ ಕೊರತೆಯಾದರೂ ತಿಳಿಯುತ್ತದೆ’ ಎಂದಿದ್ದಾರೆ. 25 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಲ್ಯಾಬ್‌ ಮುಂದಿನ ತಿಂಗಳಿಂದ ಕಾರ್ಯಾಚರಿಸಲಿದ್ದು, ತುಪ್ಪ, ಒಣಹಣ್ಣು ಸೇರಿ ಪ್ರಸಾದಕ್ಕೆ ಬಳಸುವ ವಸ್ತುಗಳ ಪರೀಕ್ಷೆ ನಡೆಸಲಿದೆ.