ಕಾಡಾನೆಗಳು ತಮ್ಮ ಕಾಡಾಂಚಿನ ಗ್ರಾಮಗಳಿಗೆ ಆಗಾಗ ದಾಂಗುಡಿ ಇಡುವುದು ಸಾಮಾನ್ಯವಾಗಿದೆ. ಹೀಗೆ ನಾಡು ನೋಡಲು ಬಂದ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಮೇಲೆ ಬರಲಾಗದೇ ಪರದಾಟ ನಡೆಸಿದ ಘಟನೆ ಜಾರ್ಖಂಡ್‌ನ ರಾಮ್‌ಗಡದಲ್ಲಿ ನಡೆದಿದೆ.

ರಾಮ್‌ಗಡ: ಕಾಡಾನೆಗಳು ತಮ್ಮ ಕಾಡಾಂಚಿನ ಗ್ರಾಮಗಳಿಗೆ ಆಗಾಗ ದಾಂಗುಡಿ ಇಡುವುದು ಸಾಮಾನ್ಯವಾಗಿದೆ. ಹೀಗೆ ನಾಡು ನೋಡಲು ಬಂದ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಮೇಲೆ ಬರಲಾಗದೇ ಪರದಾಟ ನಡೆಸಿದ ಘಟನೆ ಜಾರ್ಖಂಡ್‌ನ ರಾಮ್‌ಗಡನಲ್ಲಿ ನಡೆದಿದೆ. ನಂತರ ಜೆಸಿಬಿ ಬಳಸಿ ಆನೆಯನ್ನು ಮೇಲೆತ್ತಲಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಜಾರ್ಖಂಡ್‌ನ ರಾಮ್‌ಘರ್‌ನಲ್ಲಿ ಹುಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೈತ್ಯ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೆ ಮಣ್ಣು ಅಗೆಯುವ ಜೆಸಿಬಿ ಯಂತ್ರವನ್ನೇ ಸ್ಥಳಕ್ಕೆ ಕರೆಸಬೇಕಾಗಿತ್ತು. ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 1:16 ನಿಮಿಷಗಳ ಈ ವಿಡಿಯೋದಲ್ಲಿ ದೊಡ್ಡದಾದ ಕಂದಕದಿಂದ ಮೇಲೆ ಬರಲು ಆನೆ ಕಷ್ಟ ಪಡುತ್ತಿರುವುದನ್ನು ನೋಡಬಹುದು. ಆನೆ ಮೇಲೆ ಬರಲಿ ಎಂಬ ಕಾರಣಕ್ಕೆ ನೀರು ತುಂಬಿದ ಈ ಹೊಂಡವನ್ನು ಜೆಸಿಬಿ ಮೂಲಕ ಅಗಲಗೊಳಿಸಲಾಯಿತು. ನಂತರ ಆನೆ ಮೆಲ್ಲ ಮೆಲ್ಲನೇ ಕಷ್ಟಪಟ್ಟು ಮೇಲೇರುತ್ತಿದ್ದು, ಈ ವೇಳೆ ಜೆಸಿಬಿ ಚಾಲಕ ಆನೆಯನ್ನು ಜೆಸಿಬಿಯ ಬಕೆಟ್‌ನ ಮೂಲಕ ಆನೆಯನ್ನು ಹಿಂಭಾಗದಿಂದ ತಳ್ಳುವ ಮೂಲಕ ಆನೆ ಮೇಲೆರಲು ಸಹಾಯ ಮಾಡುತ್ತಾನೆ. 

ಜಗತ್ತಿನಲ್ಲಿ ಯಾರಿಗಿದೆ ಈ ರೀತಿಯ Z++++ ಭದ್ರತೆ: ಆನೆ ಹಿಂಡಿನ ವಿಡಿಯೋ ನೋಡಿ

ಆನೆ ಹೊಂಡದಿಂದ ಮೇಲೇರುತ್ತಿದ್ದಂತೆ ಸ್ಥಳೀಯರು ಪಂಜು ಹಿಡಿದು ಆನೆಯನ್ನು ಹೆದರಿಸಿದ್ದು ಕಂಡು ಬಂತು ನಂತರ ಆನೆ ಹೊಲಗಳ ಮೂಲಕ ಹಾದು ತನ್ನ ಕಾಡಿಗೆ ಹೊರಟು ಹೋಗಿದೆ. ಜಾರ್ಖಂಡ್‌ನ (harkhand) ರಾಮಗಢ (Ramgarh) ಜಿಲ್ಲೆಯ ಹುಲು ಗ್ರಾಮದಲ್ಲಿ ಕಂದಕಕ್ಕೆ ಬಿದ್ದ ಆನೆಯನ್ನು ಸ್ಥಳೀಯ ಆಡಳಿತವು ಮಣ್ಣು ಅಗೆಯುವ ಯಂತ್ರ ಜೆಸಿಬಿಯ ಸಹಾಯದಿಂದ ರಕ್ಷಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಕೆಲ ದಿನಗಳ ಹಿಂದಷ್ಟೇ ಕಂದಕಕ್ಕೆ ಬಿದ್ದ ಆನೆ ಮರಿಯನ್ನು ಇದೇ ರೀತಿ ರಕ್ಷಣೆ ಮಾಡಲಾಗಿತ್ತು. ಆನೆ ಮರಿಗಳು ಅಥವಾ ದೊಡ್ಡ ಆನೆಗಳು ಪ್ರಯಾಣದ ವೇಳೆ ಅರಣ್ಯದಲ್ಲಿ ಇರುವ ಕೆಲವು ಹೊಂಡಗಳು, ನಾಡಂಚಿನಲ್ಲಿರುವ ಕಾಲುವೆಗಳಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುವ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಪುಟ್ಟ ಮರಿಯಾನೆ ಕಾಡೊಳಗೆ ದೊಡ್ಡದಾದ ಕಂದಕಕ್ಕೆ ಬಿದ್ದಿದ್ದು ಮೇಲೆ ಬರಲಾಗದೆ ಪರದಾಡುತ್ತಿದೆ. ನಂತರ ಮಣ್ಣ ಅಗೆಯುವ ಜೆಸಿಬಿ ವಾಹನದ ಮೂಲಕ ಅರಣ್ಯ ಇಲಾಖೆ ಈ ಮರಿಯಾನೆಯನ್ನು ರಕ್ಷಣೆ ಮಾಡಿದ್ದು, ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೊಂಡಕ್ಕೆ ಬಿದ್ದ ಮರಿ ಗಜೇಂದ್ರ: ಮೇಲೆತ್ತಿದ ಅರಣ್ಯ ಇಲಾಖೆ: ವಿಡಿಯೋ ವೈರಲ್


ಕಂದಕಕ್ಕೆ ಬಿದ್ದ ಆನೆಯನ್ನು ರಕ್ಷಿಸುವ ಸಲುವಾಗಿ ಮೊದಲಿಗೆ ಕಂದಕವನ್ನು ಜೆಸಿಬಿ ಮೂಲಕ ಅಗಲಗೊಳಿಸಲಾಯಿತು. ನಂತರ ಮತ್ತೆ ಆನೆ ಮರಿಗೆ ಹಗ್ಗ ಕಟ್ಟಿ ಜೆಸಿಬಿ ಮೂಲಕ ಮೇಲೆ ಏರಿಸಲಾಯಿತು. ಈ ಆನೆ ಮರಿಯ ರಕ್ಷಣೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಹಿಡಿದಿದೆ. ಮರಿಯನ್ನು ರಕ್ಷಿಸಿದ ನಂತರ ಅದರ ಹಿಂಡಿನ ಕಡೆಗೆ ಅದನ್ನು ಬಿಡಲಾಯಿತು.

ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ (IFS officer ) ಪರ್ವೀನ್ ಕಸ್ವಾನ್ (Parveen Kaswan) ಅವರು ಹಂಚಿಕೊಂಡಿದ್ದರು. ಬೆಳಗ್ಗೆ 1 ಗಂಟೆಗೆ ತಂಡಗಳು ಆನೆ ಮರಿ ಕಂದಕದಲ್ಲಿ ಬಿದ್ದಿರುವ ಮಾಹಿತಿಯನ್ನು ಪಡೆದುಕೊಂಡವು. ನಂತರ ರಾತ್ರಿಯಲ್ಲಿ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಯಿತು. ಮುಂಜಾನೆ 5 ಗಂಟೆಗೆ ಸುಮಾರಿಗೆ ಯಶಸ್ವಿಯಾಗಿ ಆನೆ ಮರಿಯನ್ನು ರಕ್ಷಿಸಲಾಯಿತು. ತದನಂತರ ಸಮೀಪದ ಅರಣ್ಯದಲ್ಲಿದ್ದ ಅದರ ಕುಟುಂಬಕ್ಕೆ ತೆರಳಲು ಅದಕ್ಕೆ ಮಾರ್ಗದರ್ಶನ ಮಾಡಲಾಯಿತು ಎಂದು ಪರ್ವೀನ್ ಕಸ್ವಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.