ಇಲ್ಲೊಂದು ಪುಟ್ಟ ಮರಿಯಾನೆ ಕಾಡೊಳಗೆ ದೊಡ್ಡದಾದ ಕಂದಕಕ್ಕೆ ಬಿದ್ದಿದ್ದು ಮೇಲೆ ಬರಲಾಗದೆ ಪರದಾಡುತ್ತಿದೆ. ನಂತರ ಮಣ್ಣ ಅಗೆಯುವ ಜೆಸಿಬಿ ವಾಹನದ ಮೂಲಕ ಅರಣ್ಯ ಇಲಾಖೆ ಈ ಮರಿಯಾನೆಯನ್ನು ರಕ್ಷಣೆ ಮಾಡಿದ್ದು, ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆ ಮರಿಗಳು ಅಥವಾ ದೊಡ್ಡ ಆನೆಗಳು ಪ್ರಯಾಣದ ವೇಳೆ ಅರಣ್ಯದಲ್ಲಿ ಇರುವ ಕೆಲವು ಹೊಂಡಗಳು ನಾಡಂಚಿನಲ್ಲಿರುವ ಕಾಲುವೆಗಳಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುವ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಪುಟ್ಟ ಮರಿಯಾನೆ ಕಾಡೊಳಗೆ ದೊಡ್ಡದಾದ ಕಂದಕಕ್ಕೆ ಬಿದ್ದಿದ್ದು ಮೇಲೆ ಬರಲಾಗದೆ ಪರದಾಡುತ್ತಿದೆ. ನಂತರ ಮಣ್ಣ ಅಗೆಯುವ ಜೆಸಿಬಿ ವಾಹನದ ಮೂಲಕ ಅರಣ್ಯ ಇಲಾಖೆ ಈ ಮರಿಯಾನೆಯನ್ನು ರಕ್ಷಣೆ ಮಾಡಿದ್ದು, ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂದಕಕ್ಕೆ ಬಿದ್ದ ಆನೆಯನ್ನು ರಕ್ಷಿಸುವ ಸಲುವಾಗಿ ಮೊದಲಿಗೆ ಕಂದಕವನ್ನು ಜೆಸಿಬಿ ಮೂಲಕ ಅಗಲಗೊಳಿಸಲಾಯಿತು. ನಂತರ ಮತ್ತೆ ಆನೆ ಮರಿಗೆ ಹಗ್ಗ ಕಟ್ಟಿ ಜೆಸಿಬಿ ಮೂಲಕ ಮೇಲೆ ಏರಿಸಲಾಯಿತು. ಈ ಆನೆ ಮರಿಯ ರಕ್ಷಣೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಹಿಡಿದಿದೆ. ಮರಿಯನ್ನು ರಕ್ಷಿಸಿದ ನಂತರ ಅದರ ಹಿಂಡಿನ ಕಡೆಗೆ ಅದನ್ನು ಬಿಡಲಾಯಿತು.
ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ (IFS officer ) ಪರ್ವೀನ್ ಕಸ್ವಾನ್ (Parveen Kaswan) ಅವರು ಹಂಚಿಕೊಂಡಿದ್ದಾರೆ. ಬೆಳಗ್ಗೆ 1 ಗಂಟೆಗೆ ತಂಡಗಳು ಆನೆ ಮರಿ ಕಂದಕದಲ್ಲಿ ಬಿದ್ದಿರುವ ಮಾಹಿತಿಯನ್ನು ಪಡೆದುಕೊಂಡವು. ನಂತರ ರಾತ್ರಿಯಲ್ಲಿ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಯಿತು. ಮುಂಜಾನೆ 5 ಗಂಟೆಗೆ ಸುಮಾರಿಗೆ ಯಶಸ್ವಿಯಾಗಿ ಆನೆ ಮರಿಯನ್ನು ರಕ್ಷಿಸಲಾಯಿತು. ತದನಂತರ ಸಮೀಪದ ಅರಣ್ಯದಲ್ಲಿದ್ದ ಅದರ ಕುಟುಂಬಕ್ಕೆ ತೆರಳಲು ಅದಕ್ಕೆ ಮಾರ್ಗದರ್ಶನ ಮಾಡಲಾಯಿತು ಎಂದು ಪರ್ವೀನ್ ಕಸ್ವಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಪುಟ್ಟ ಪಕ್ಷಿಯೊಂದಿಗೆ ಆನೆ ಮರಿಯ ಕಿತ್ತಾಟ ವಿಡಿಯೋ ವೈರಲ್
ಆನೆ ರಕ್ಷಣೆಗೆ ಅಧಿಕಾರಿಗಳು ಕೈಗೊಂಡ ತ್ವರಿತ ಕ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಆನೆ ಮರಿಯ ಜೀವವನ್ನು ಉಳಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು, ನೀವು ನಮ್ಮ ವನ್ಯಜೀವಿಗಳ ಸಂರಕ್ಷಕರು ಎಂದು ಬರೆದರೆ, ಮತ್ತೊಬ್ಬರು ಈ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು ಮತ್ತು ಆನೆ ಮರಿ ತನ್ನ ಕುಟುಂಬಕ್ಕೆ ಮರಳಿರುವುದು ಉತ್ತಮ ವಿಷಯ ಎಂದು ಬರೆದಿದ್ದಾರೆ. ಎಂತಹ ತೃಪ್ತಿದಾಯಕ ಕೆಲಸ ಸರ್, ದೇವರು ಮತ್ತು ಆನೆ ಕುಟುಂಬ ನಿಮ್ಮನ್ನು ಮತ್ತು ತಂಡವನ್ನು ಆಶೀರ್ವದಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ರಕ್ಷಿಸಲ್ಪಟ್ಟ ಮರಿ ಆನೆ ತನ್ನ ಕತೆಯನ್ನು ವರ್ಷಗಳ ಕಾಲ ತನ್ನವರಿಗೆ ಹೇಳುತ್ತಲೇ ಇರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮೃತ ಮರಿಯನ್ನು ಹೋದಲೆಲ್ಲಾ ಎತ್ತಿಕೊಂಡು ಹೋಗುತ್ತಿರುವ ತಾಯಿ ಆನೆ: ವಿಡಿಯೋ
ಕಾಡಾನೆಗಳು ಹಾಗೂ ಮಾನವನ ನಡುವಣ ಸಂಘರ್ಷ ಹೆಚ್ಚುತ್ತಿದೆ. ಬೆಳೆಹಾನಿ, ಮಾನವ ಪ್ರಾಣಹಾನಿಯೂ ಆಗುತ್ತಿದೆ. ಕಾಡಾನೆಗಳ ಸಾವಿನ ಪ್ರಮಾಣವೂ ಮಿತಿಮೀರಿದೆ! ರಾಜ್ಯದಲ್ಲಿ 2021ರಲ್ಲಿ 79 ಕಾಡಾನೆಗಳು ಮೃತಪಟ್ಟಿವೆ. 17 ಕಾಡಾನೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿವೆ. ಇವುಗಳಲ್ಲಿ 12 ಕಾಡಾನೆಗಳು ವಿದ್ಯುದಾಘಾತದಿಂದ ಸಾವಿಗೀಡಾಗಿವೆ. ಅಪಘಾತ, ಬೇಟೆಯಂತಹ ಘಟನೆಗಳಿಂದಲೂ ಆನೆಗಳು ಸಾವಿಗೀಡಾಗಿವೆ. ಆದರೆ ಕಾಡು ಪ್ರಾಣಿಗಳ ಬೇಟೆ 3-4 ದಶಕಗಳ ಹಿಂದೆ ಹೋಲಿಸಿದರೆ ಈಗ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ.