Asianet Suvarna News Asianet Suvarna News

Electoral Bonds:ಮತ್ತೊಂದು ಸುತ್ತಿನ ಮಾಹಿತಿ ರಿಲೀಸ್‌ ಮಾಡಿದ ಚುನಾವಣಾ ಆಯೋಗ


ಚುನಾವಣಾ ಬಾಂಡ್‌ಗಳ ಡೇಟಾ: "... ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಸೀಲ್ಡ್ ಕವರ್‌ನಲ್ಲಿ ಪೆನ್ ಡ್ರೈವ್‌ನಲ್ಲಿ ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದೆ" ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ.
 

Election Commission makes fresh electoral bonds data public san
Author
First Published Mar 17, 2024, 4:30 PM IST

ನವದೆಹಲಿ (ಮಾ.17): ಚುನಾವಣಾ ಆಯೋಗವು ಭಾನುವಾರದಂದು ಚುನಾವಣಾ ಬಾಂಡ್‌ಗಳ ಕುರಿತು ಹೊಸ ಡೇಟಾವನ್ನು ಸಾರ್ವಜನಿಕಗೊಳಿಸಿದೆ, ಅದನ್ನು ಮುಚ್ಚಿದ ಕವರ್‌ಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಇದನ್ನು ವಾಪಾಸ್‌ ನೀಡಿದ ಬಳಿಕ ಇದನ್ನು ಸಾರ್ವಜನಿಕ ಡೊಮೇನ್‌ಗೆ ಹಾಕಲಾಗಿದೆ. ಈ ವಿವರಗಳು 2019ರ ಏಪ್ರಿಲ್ 12 ರ ಹಿಂದಿನ ಅವಧಿಗೆ ಸಂಬಂಧಿಸಿದ್ದು ಎಂದು ನಂಬಲಾಗಿದೆ. ಈ ದಿನಾಂಕದ ನಂತರದ ಚುನಾವಣಾ ಬಾಂಡ್ ವಿವರಗಳನ್ನು ಕಳೆದ ವಾರ ಚುನಾವಣಾ ಸಮಿತಿಯು ಸಾರ್ವಜನಿಕಗೊಳಿಸಿದೆ. 2019ರ ಏಪ್ರಿಲ್ 12ರ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಸೀಲ್ಡ್ ಕವರ್‌ನಲ್ಲಿ ಎಲೆಕ್ಟೋರಲ್ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿವೆ ಎಂದು ಚುನಾವಣಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

"ರಾಜಕೀಯ ಪಕ್ಷಗಳಿಂದ ಪಡೆದ ಡೇಟಾವನ್ನು ಸೀಲ್‌ ಮಾಡಿದ ಕವರ್‌ಗಳನ್ನು ತೆರೆಯದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಗೆ ಮಾಡಲಾಗಿತ್ತು.  2024ರ ಮಾರ್ಚ್ 15ರ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಭೌತಿಕ ಪ್ರತಿಗಳನ್ನು ಡಿಜಿಟೈಸ್ ಮಾಡಿದ ಬಳಿಕ ಹಿಂದಿರುಗಿಸಿದೆ. ಸೀಲ್‌ ಮಾಡಿದ ಕವರ್‌ನಲ್ಲಿ ಪೆನ್ ಡ್ರೈವ್ ವಿವರ ಕೂಡ ಇತ್ತು. ಭಾರತೀಯ ಚುನಾವಣಾ ಆಯೋಗವು ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಿಂದ ಡಿಜಿಟೈಸ್ ಮಾಡಿದ ಫಾರ್ಮ್‌ನಲ್ಲಿ ಸ್ವೀಕರಿಸಿದ ಡೇಟಾವನ್ನು ಅಪ್‌ಲೋಡ್ ಮಾಡಿದೆ" ಎಂದು ಇಸಿ ಹೇಳಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಕಾಂಗ್ರೆಸ್ ಒಟ್ಟು 1,334.35 ಕೋಟಿ ರೂಪಾಯಿಗಳನ್ನು  ಪಡೆದಕೊಂಡಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶ ತಿಳಿಸಿದೆ.  ಬಿಜೆಪಿ ಒಟ್ಟು 6,986.5 ಕೋಟಿ ರೂಪಾಯಿ ಮತ್ತು2019-20ರಲ್ಲಿ ಗರಿಷ್ಠ 2,555 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ ಎಂದು ಮಾಹಿತಿ ನೀಡಿದೆ.

ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳ ಮೂಲಕ 1,397 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ, ಬಿಜೆಪಿ ನಂತರ ಗರಿಷ್ಠ ಚುನಾವಣಾ ಬಾಂಡ್‌ ಹಣ ಪಡೆದ ಪಕ್ಷ ಎನಿಸಿಕೊಂಡಿದೆ. ಬಿಆರ್‌ಎಸ್ ನಾಲ್ಕನೇ ಅತಿ ದೊಡ್ಡ ಸ್ವೀಕೃತದಾರನಾಗಿದ್ದು 1,322 ಕೋಟಿ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್‌ ಮಾಡಿಕೊಂಡಿದೆ. ಚುನಾವಣಾ ಬಾಂಡ್‌ಗಳ ಮೂಲಕ ಎಸ್‌ಪಿ 14.05 ಕೋಟಿ ರೂ., ಅಕಾಲಿದಳ 7.26 ಕೋಟಿ ರೂ., ಎಐಎಡಿಎಂಕೆ ರೂ. 6.05 ಕೋಟಿ, ನ್ಯಾಷನಲ್ ಕಾನ್ಫರೆನ್ಸ್ ರೂ. 50 ಲಕ್ಷ ಪಡೆದುಕೊಂಡಿದೆ.

ಇದಕ್ಕೂ ಮುನ್ನ, ಮಾರ್ಚ್ 12 ರ ಒಳಗಾಗಿ ಬಾಂಡ್‌ಗಳ ವಿವರಗಳನ್ನು ಇಸಿಗೆ ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಸ್ಟೇಟ್‌ ಬ್ಯಾಂಕ್ ಇಂಡಿಯಾ ಪೆನ್‌ಡ್ರೈವ್‌ನಲ್ಲಿ ನೀಡಿದ್ದ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ ಮಾರ್ಚ್‌ 14ರಂದು ಬಹಿರಂಗ ಮಾಡಿತ್ತು.  ಆ ಬಳಿಕ ನಡೆದ ಸುಪ್ರೀಂ ಕೋರ್ಟ್‌ ವಿಚಾರಣೆಯಲ್ಲಿ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಆಲ್ಫಾ ನ್ಯುಮರಿಕಲ್‌ ನಂಬರ್‌ಗಳನ್ನೂ ನೀಡಬೇಕು ಎಂದು ತಿಳಿಸಿತ್ತ. ಮಾರ್ಚ್‌ 18ರ ಒಳಗಾಗಿ ಇದರ ವಿವರ ನೀಡುವಂತೆ ತಿಳಿಸಲಾಗಿದೆ.

Electoral bonds: ಎಸ್‌ಬಿಐ, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯ 10 ಪ್ರಮುಖ ಅಂಶಗಳು

ಎಸ್‌ಸಿಗೆ ಚುನಾವಣಾ ಆಯೋಗದ ಮನವಿ: ತನ್ನ ಮನವಿಯಲ್ಲಿ, ಚುನಾವಣಾ ಆಯೋಗವು ತನ್ನ ಮಾರ್ಚ್ 11 ರ ಆದೇಶದ ಒಂದು ಭಾಗವನ್ನು ಸರಿಪಡಿಸಲು ಅಥವಾ ಮಾರ್ಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿತು, ಮುಚ್ಚಿದ ಕವರ್‌ಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳು, ಡೇಟಾ ಅಥವಾ ಮಾಹಿತಿಯನ್ನು ಹಿಂತಿರುಗಿಸುವಂತೆ ಕೋರಿದೆ. ನ್ಯಾಯಾಲಯದ ನಿರ್ದೇಶನಗಳ ಮಾಹಿತಿಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿತ್ತು. 2019ರ ಏಪ್ರಿಲ್ 12 ರಂದು, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದು, ರಾಜಕೀಯ ಪಕ್ಷಗಳು ಸ್ವೀಕರಿಸಿದ ಮತ್ತು ಸ್ವೀಕರಿಸಲು ನಿರೀಕ್ಷಿಸಿದ ದೇಣಿಗೆಯ ವಿವರಗಳನ್ನು ಇಸಿಗೆ ಮುಚ್ಚಿದ ಕವರ್‌ಗಳಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.

 

SBI Electoral Bonds: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿ ಇದು…!

Follow Us:
Download App:
  • android
  • ios