Asianet Suvarna News Asianet Suvarna News

Eid Al - Adha: ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ, ಪಾಕ್‌ ಯೋಧರು

ಬಕ್ರೀದ್‌ ಸಂದರ್ಭದಲ್ಲಿ ಪಂಜಾಬ್‌ ಭಾಗದ ಭಾರತ - ಪಾಕಿಸ್ತಾನ ಗಡಿ ಬಳಿ ಸಿಹಿ ಹಂಚಲಾಗಿದೆ. ಪಂಜಾಬ್‌ನ ಅಟ್ಟಾರಿ- ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡರು.

eid al adha sweet exchange on the occasion of eid at attari wagah border ash
Author
First Published Jun 29, 2023, 3:01 PM IST

ಅಮೃತಸರ, ಪಂಜಾಬ್‌ (ಜೂನ್ 29, 2023): ಇಂದು ಬಕ್ರೀದ್‌ ಹಬ್ಬ ಹಿನ್ನೆಲೆ ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅಥವಾ ಈದ್ ಅಲ್ - ಅಧಾ ಬಲಿದಾನ ಹಾಗೂ ತ್ಯಾಗದ ಸಂಕೇತವಾಗಿದೆ. ಇನ್ನು, ಈ ಹಬ್ಬಕ್ಕೆ ಹಿಂದೂಗಳು ಸಹ ತಮ್ಮ ಮುಸಲ್ಮಾನ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಕೋರುವುದು ಸಾಮಾನ್ಯ. 

ಇದೇ ರೀತಿ,ಬಕ್ರೀದ್‌ ಸಂದರ್ಭದಲ್ಲಿ ಪಂಜಾಬ್‌ ಭಾಗದ ಭಾರತ - ಪಾಕಿಸ್ತಾನ ಗಡಿ ಬಳಿ ಸಿಹಿ ಹಂಚಲಾಗಿದೆ. ಪಂಜಾಬ್‌ನ ಅಟ್ಟಾರಿ- ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡರು. ಪ್ರತಿ ವರ್ಷ ಪ್ರಮುಖ ಹಬ್ಬಗಳಂದು ಉಭಯ ದೇಶಗಳ ಸೈನಿಕರು ಪರಸ್ಪರ ಶುಭ ಹಾರೈಸುತ್ತಾರೆ. ಇದೇ ರೀತಿ, ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲೊಂದಾದ ಬಕ್ರೀದ್‌ ಹಬ್ಬಕ್ಕೂ ಸಿಹಿ ಹಂಚಿ ಪರಸ್ಪರ ಶುಭಾಶಯಗಳನ್ನು ಕೋರಲಾಗಿದೆ.

ಇದನ್ನು ಓದಿ: Eid al - Adha: ಅಬ್ಬಾ.. ಈ ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೆಲೆ: ಆದರೂ ಮಾರಲ್ಲ ಎಂದ ಕುರಿಗಾಹಿ; ಕಾರಣ ಹೀಗಿದೆ..

ಭಾರತ - ಪಾಕ್‌ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಹಾಗೂ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದರೂ ಗಡಿಯಲ್ಲಿ ಉಭಯ ದೇಶಗಳ ನಡುವೆ ಶಾಂತಿಯನ್ನು ಪಸರಿಸುವ ಸಣ್ಣ ಪ್ರಯತ್ನ ಇದಾಗಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಉಭಯ ದೇಶಗಳು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂತಸ ವ್ಯಕ್ತಪಡಿಸುತ್ತವೆ. ಇದೇ ವೇಳೆ ಗಡಿಯಲ್ಲಿ ಇಬ್ಬರ ನಡುವಿನ ವಾತಾವರಣವೂ ಸ್ವಲ್ಪ ಸಾಮರಸ್ಯದಿಂದ ಇರುತ್ತದೆ. 

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಸಾಮಾನ್ಯವಲ್ಲ. ಆದರೂ, ಈಗಲೂ ಸಹ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಪಂಜಾಬ್‌ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಾಕಿಸ್ತಾನ ರೇಂಜರ್‌ಗಳು ಈದ್-ಉಲ್-ಅಧಾ ಸಂದರ್ಭದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಬಕ್ರೀದ್‌ ಸಂದರ್ಭದಲ್ಲಿ, BSF ನ 176 ಬೆಟಾಲಿಯನ್ ಫುಲ್ಬರಿ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಅದರ 18 ಗಡಿ ಕಾವಲು ಪಡೆ (BGB) ಪ್ರತಿರೂಪದೊಂದಿಗೆ ಸಿಹಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗಿದೆ. 

ಇದನ್ನೂ ಓದಿ:  Bakrid: ಸರ್ಕಾರದ ಪ್ರಾಣಿಬಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಮುಸ್ಲಿಂ ಸಮುದಾಯಕ್ಕೆ ಜಮಿಯತ್ ಮನವಿ

ಬಕ್ರೀದ್‌ ಮಹತ್ವ

ಸಮಾನತೆ, ಸಹಬಾಳ್ವೆ, ಬಲಿದಾನ, ತ್ಯಾಗೋಜ್ವಲ ಬದುಕಿನ ಸಂದೇಶಗಳನ್ನು ಹೊತ್ತುಕೊಂಡು ಜಾಗತಿಕ ಮುಸಲ್ಮಾನರನ್ನು ಸಂಭ್ರಮದಲ್ಲಿ ತೇಲಾಡಿಸುವ ಬಕ್ರೀದ್‌ ಮತ್ತೊಮ್ಮೆ ಆಗತವಾಗಿದೆ. ಮುಸ್ಲಿಮರ ಅತ್ಯಂತ ಶ್ರೇಷ್ಠ, ಮಹತ್ವದ ದಿನಗಳಲ್ಲೊದಾದ ಬಕ್ರೀದ್‌ ಅಥವಾ ಈದುಲ್‌ ಅಳ್‌ಹಾ ಈ ಬಾರಿ ಜೂನ್‌ 29ಕ್ಕೆ ಆಚರಿಸಲಾಗುತ್ತಿದೆ. ಅಂದರೆ ಇಸ್ಲಾ​ಮಿ​ಕ್‌ ಹಿಜ​ರಿ ಕ್ಯಾಲೆಂಡರ್‌ನ ಕೊನೆಯ ತಿಂಗಳು ದುಲ್‌ಹ​ಜ್‌ ಹತ್ತನೇ ದಿನದಂದು ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮದಲ್ಲಿ ತೊಡಗಿಕೊಳ್ಳುವಾಗ ವಿಶ್ವ​ದೆ​ಲ್ಲೆ​ಡೆ​ಯ ಮುಸ್ಲಿಮರು ಈದ್‌ ಆಚರಿಸುತ್ತಾರೆ.

ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್‌ ಇಬ್ರಾಹಿಂ, ಅವರ ಪುತ್ರ ಇಸ್ಮಾಯಿಲ್‌ ತ್ಯಾಗ​ದ ಜೀವನ ಸ್ಮರಣೆಯಾಗಿದೆ ಈದ್‌. ದೇವ ನಿಷ್ಠೆಗಾಗಿ ತನಗೆ ಏನ​ನ್ನೂ ತ್ಯಾಗ ಮಾಡಲು ಸಿದ್ಧನಿರಬೇಕೆಂಬುದೇ ಬಕ್ರೀದ್‌ ಸಾರುವ ಸಂದೇಶ. ಒಂದು ಪ್ರವಾದಿ ಕುಟುಂಬದ ಸಂಕಷ್ಟಗಳ ಸರಮಾಲೆ, ಕಷ್ಟಕಾರ್ಪಣ್ಯಗಳು, ಎದುರಿಸಿದ ಸವಾಲುಗಳನ್ನು ಸ್ಮರಿಸುವ ದಿನವಾಗಿದೆ ಈದ್‌. ಹಜ್‌ ಯಾತ್ರೆ, ಪ್ರಾಣಿ ಬಲಿ ಅರ್ಪಿಸುವಿಕೆ, ಉಪವಾಸ, ದಾನ, ಸಮಾನತೆಯ ಸಂದೇಶವು ಬಕ್ರೀದ್‌ ಎಂಬ ಮೂರ​ಕ್ಷ​ರದ ನಡುವೆ ಸುತ್ತು​ತ್ತಲೇ ಇರು​ತ್ತ​ವೆ.

ಇದನ್ನೂ ಓದಿ: ತ್ಯಾಗ, ಸಮಾನತೆ ಸಹ​ಬಾಳ್ವೆಯ ಸಂಕೇ​ತ ಬಕ್ರೀದ್‌..!

Follow Us:
Download App:
  • android
  • ios