Eid al - Adha: ಅಬ್ಬಾ.. ಈ ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೆಲೆ: ಆದರೂ ಮಾರಲ್ಲ ಎಂದ ಕುರಿಗಾಹಿ; ಕಾರಣ ಹೀಗಿದೆ..

ಭಾರತೀಯ ಉಪಖಂಡದಲ್ಲಿ ಮುಸ್ಲಿಮರು ಅದೃಷ್ಟಶಾಲಿ ಎಂದು ಪರಿಗಣಿಸುವ ಅಂಕಿಗಳನ್ನು ಹೊಂದಿರುವ ಕಾರಣ ಈ ಕುರಿಗೆ ಹೆಚ್ಚಿನ ಬಿಡ್ ನೀಡಲಾಗಿದೆಯಂತೆ. ಕಳೆದ ವರ್ಷ ಸಹ ಇದಕ್ಕೆ 70 ಲಕ್ಷ ರೂ. ಗೆ ಬಿಡ್‌ ಆಗಿತ್ತು. 

man refuses rs 1 crore offer for lamb in rajasthan s churu here ash

ಚುರು (ರಾಜಸ್ಥಾನ) (ಜೂನ್ 29, 2023): ಇಂದು ಬಕ್ರೀದ್‌ ಹಬ್ಬವನ್ನು ದೇಶದಲ್ಲಿ ಹಾಗೂ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಕುರಿ, ಮೇಕೆ, ಒಂಟೆ ಮುಂತಾದ ಪ್ರಾಣಿಗಳನ್ನು ಬಲಿ ಕೊಡಲು ಈ ಪ್ರಾಣಿಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದೆ. ಇದೇ ರೀತಿ, ಇಲ್ಲೊಂದು  ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೃಹತ್‌ ಮೊತ್ತಕ್ಕೆ ಬಿಡ್‌ ಆಗಿದೆ. ಆದರೂ, ರಾಜಸ್ಥಾನದ ಕುರಿಗಾಹಿಯೊಬ್ರು ತನ್ನ ಕುರಿ ಮಾರಲು ತಿರಸ್ಕರಿಸಿದ್ದಾರೆ. ಈ ಕಾರಣಕ್ಕೆ ಇವರು ಸುದ್ದಿಯಾಗುತ್ತಿದ್ದಾರೆ.

ಅಂದ ಹಾಗೆ, ಈ ಕುರಿಯನ್ನು ಮಾರಲು ನಿರಾಕರಿಸಿದ್ದೇಕೆ ಅನ್ನೋ ಮೊದಲು ಈ ಕುರಿಗೆ ಇಷ್ಟೊಂದು ಬೆಲೆ ಯಾಕೆ ಗೊತ್ತಾ? ಉತ್ತರಕ್ಕಾಗಿ ಮುಂದೆ ಓದಿ.. ಭಾರತೀಯ ಉಪಖಂಡದಲ್ಲಿ ಮುಸ್ಲಿಮರು ಅದೃಷ್ಟಶಾಲಿ ಎಂದು ಪರಿಗಣಿಸುವ ಅಂಕಿಗಳನ್ನು ಹೊಂದಿರುವ ಕಾರಣ ಈ ಕುರಿಗೆ ಹೆಚ್ಚಿನ ಬಿಡ್ ನೀಡಲಾಗಿದೆಯಂತೆ. ಕಳೆದ ವರ್ಷ ಸಹ ಇದಕ್ಕೆ 70 ಲಕ್ಷ ರೂ. ಗೆ ಬಿಡ್‌ ಆಗಿತ್ತು. 

ಇದನ್ನು ಓದಿ: Bakrid: ಸರ್ಕಾರದ ಪ್ರಾಣಿಬಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಮುಸ್ಲಿಂ ಸಮುದಾಯಕ್ಕೆ ಜಮಿಯತ್ ಮನವಿ

ಕುರಿಯ  ಹೊಟ್ಟೆಯಲ್ಲಿ '786' ಎಂಬ ಅಂಕೆಗಳಿದ್ದು, ಈ ಸಂಖ್ಯೆ ಮುಸ್ಲಿಮರಿಗೆ ಅದೃಷ್ಟಶಾಲಿ ಅಂತೆ. ಆದರೆ, ಅದರ ಅರ್ಥವೇನೆಂದು ತನಗೆ ಯಾವುದೇ ಸುಳಿವು ಇರಲಿಲ್ಲ ಎಂದು ಕುರಿಗಾಹಿ ರಾಜು ಸಿಂಗ್ ಹೇಳಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಕೆಲವು ಸದಸ್ಯರೊಂದಿಗೆ ಸಮಾಲೋಚಿಸಿದ ನಂತರವೇ ಅವರು ಇದರ ಮಹತ್ವದ ಬಗ್ಗೆ ತಿಳಿದುಕೊಂಡರು ಮತ್ತು ಕುರಿಯನ್ನು ಮಾರಾಟ ಮಾಡದಿರಲು ನಿರ್ಧರಿಸಿದರು ಎಂದು ತಿಳಿದುಬಂದಿದೆ. ಅಂದ ಹಾಗೆ, ಈ ಕುರಿಗಾಹಿ ರಾಜಸ್ಥಾನದ ಚುರುವಿನ ತಾರಾನಗರ ಪ್ರದೇಶದವರು.

'786' ಸಂಖ್ಯೆಯನ್ನು ಮುಸ್ಲಿಮರು, ವಿಶೇಷವಾಗಿ ಭಾರತೀಯ ಉಪಖಂಡದಲ್ಲಿರುವವರು, 'ಬಿಸ್ಮಿಲ್ಲಾಹ್ ಇರ್-ರಹಮಾನ್ ಇರ್-ರಹೀಮ್' ಎಂಬ ಪದಗುಚ್ಛದ ಬದಲಿಗೆ ಬಳಸುತ್ತಾರೆ. ಇದು ಮುಸ್ಲಿಮರಿಗೆ ಬಹಳಷ್ಟು ಅದೃಷ್ಟಶಾಲಿ ಎನಿಸಿದರೂ, ಈ ಪ್ರಾಣಿಯು ತನಗೆ ತುಂಬಾ "ಪ್ರೀತಿಯ" ಆಗಿರುವುದರಿಂದ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ರಾಜು ಸಿಂಗ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

"ಕಳೆದ ವರ್ಷ ಗಂಡು ಕುರಿ ಹುಟ್ಟಿತ್ತು, ಇಂದು ಜನರು ಅದನ್ನು ಹರಾಜು ಹಾಕುತ್ತಿದ್ದಾರೆ, ಜನರು ಕುರಿಗಾಗಿ 70 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ನೀಡಲು ಮುಂದಾಗಿದ್ದಾರೆ. ಆದರೂ,  ನಾನು ಅದನ್ನು ಮಾರಾಟ ಮಾಡಲು ಸಿದ್ಧನಿಲ್ಲ" ಎಂದೂ ಕುರಿಗಾಹಿ ಹೇಳಿದರು.

ಈ ಮಧ್ಯೆ, ಭಾರಿ ಬಿಡ್‌ ಕಾರಣದಿಂದ ಕುರಿ ವಿಶೇಷ ಕಾಳಜಿಯನ್ನು ಪಡೆಯುತ್ತಿದೆ. ಇದಕ್ಕೆ ದಾಳಿಂಬೆ, ಪಪ್ಪಾಯಿ, ಬಿಂದೋಲ, ರಾಗಿ ಮತ್ತು ಹಸಿರು ತರಕಾರಿಗಳನ್ನು ನೀಡಲಾಗುತ್ತಿದೆ. ಇನ್ನು, ಭದ್ರತಾ ಕಾರಣಗಳಿಗಾಗಿ ಕುರಿಯನ್ನು ತನ್ನ ಮನೆಯೊಳಗೆ ಇಡಲು ಪ್ರಾರಂಭಿಸಿದೆ ಎಂದೂ ರಾಜು ಸಿಂಗ್ ಹೇಳಿದ್ದಾರೆಂದು ವರದಿಯಾಗಿದೆ. 

ಇದನ್ನೂ ಓದಿ: ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!

Latest Videos
Follow Us:
Download App:
  • android
  • ios