ಫೆಬ್ರವರಿ 2019ರಲ್ಲಿ ಪಾಕಿಸ್ತಾನದ ಎಫ್-16 ಜೆಟ್‌ಗೆ ಪ್ರತಿಯಾಗಿ ಹೋರಾಡುತ್ತಿದ್ದಾಗ ವರ್ಧಮಾನ್‌ರ ಮಿಗ್-೨೧ ಹೊಡೆದುರುಳಿಸಲ್ಪಟ್ಟಿತು. ಪಾಕ್‌ನಲ್ಲಿ ಸೆರೆವಾಸದಲ್ಲಿದ್ದಾಗ, ಪತ್ನಿ ತನ್ವಿಗೆ ಕರೆ ಮಾಡಿ, ತಮಾಷೆಯಾಗಿ ಚಹಾ ಚೆನ್ನಾಗಿತ್ತೆಂದರು. ಐಎಸ್‌ಐ ದೈಹಿಕ ಹಲ್ಲೆ, ನಿದ್ರಾಹೀನತೆಯಿಂದ ಹಿಂಸಿಸಿದರೂ, ವರ್ಧಮಾನ್ ಧೃತಿಗೆಡಲಿಲ್ಲ.
ಬೆಂಗಳೂರು (ಏ.26): ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮಿಗ್ -21 ಬೈಸನ್ ಯುದ್ಧ ವಿಮಾನವನ್ನು ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಹೊಡೆದುರುಳಿಸಿತ್ತು. ಎಲ್‌ಓಸಿ ದಾಟಿದ್ದ ಪಾಕಿಸ್ತಾನದ ಎಫ್16 ಜೆಟ್‌ಅನ್ನು ತಡೆಯುವ ಕಾರ್ಯಾಚರಣೆಯಲ್ಲಿ ಅವರು ಭಾಗವಹಿಸಿ ಹಾರಾಟ ಮಾಡುತ್ತಿದ್ದರು. ಆದರೆ, ಅವರ ಜೆಟ್‌ಗೆ ಪಾಕ್ ಗುರಿ ಇಟ್ಟಾಗ, ಹಾನಿಗೆ ಒಳಗಾದ ವಿಮಾನದಿಂದ ಅವರು ಜಿಗಿದಿದ್ದರು. ಬಳಿಕ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ಬಳಿಕ ಅವರನ್ನು ಪಾಕ್ ಸೇನೆ ವಶಕ್ಕೆ ತೆಗೆದುಕೊಂಡಿತ್ತು.
ಪಾಕಿಸ್ತಾನದ ಕಸ್ಟಡಿಯಲ್ಲಿದ್ದ ವೇಳೆ ಅಭಿನಂದನ್ ವರ್ಧಮಾನ್ ಎದುರಿಸಿದ ಸಮಸ್ಯೆ ಒಂದೆರಡಲ್ಲ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ವಶದಲ್ಲಿದ್ದಾಗಲೂ ಅವರಿಗೆ ಪತ್ನಿ ತನ್ವಿ ಮಾರ್ವಾಗೆ ಕರೆ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ಚಹಾದ ಬಗ್ಗೆ ಅವರು ತಮಾಷೆ ಕೂಡ ಮಾಡಿದ್ದರು. ಪಾಕಿಸ್ತಾನದ ಸೇನೆ ಬಂಧಿಸಿದ್ದರಿಂದ ಸುಮಾರು 60 ಗಂಟೆಗಳ ನಂತರ ವಾಘಾ ಗಡಿಯ ಮೂಲಕ ಅವರು ವಾಪಾಸಾಗುವ ವೇಳೆ ದಂಪತಿಗಳ ನಡುವಿನ ಏಕೈಕ ಸಂಭಾಷಣೆ ಇದಾಗಿತ್ತು.
ಪಾಕಿಸ್ತಾನದ ಕಸ್ಟಡಿಯಲ್ಲಿದ್ದಾಗ ಪತ್ನಿಗೆ ಕರೆ ಮಾಡಿದ್ದ ಅಭಿನಂಧನ್ ವರ್ಧಮಾನ್: ಕಸ್ಟಡಿಯಲ್ಲಿದ್ದ ವೇಳೆ ಐಎಸ್‌ಐ ಅಭಿನಂದನ್ ಜೊತೆ ಗುಡ್ ಕಾಪ್-ಬ್ಯಾಡ್ ಕಾಪ್ ತಂತ್ರವನ್ನು ಪ್ರಯೋಗ ಮಾಡಿತ್ತು. ಆ ಮೂಲಕ ಅಭಿನಂದನ್‌ರ ಬಾಯಿಯಿಂದ ರಹಸ್ಯ ಹೊರಹಾಕುವುದು ಅವರ ಉದ್ದೇಶವಾಗಿತ್ತು. ಒಬ್ಬ ಅಧಿಕಾರಿ ಬಂದುಸ ಅಭಿನಂದನ್ ಮೂಳೆಗಳನ್ನು ಮುರಿಯುವಂತೆ ಪಂಚ್ ಮಾಡುತ್ತಿದ್ದರೆ, ನಂತರ ಬಂದ ಇನ್ನೊಬ್ಬ ಅಧಿಕಾರಿ ಸಮಾಧಾನದಿಂದ ಮಾತನಾಡುತ್ತಿದ್ದ. ಕಡೆಗೆ ಈತನೇ ಅಭಿನಂದನ್ ತಮ್ಮ ಪತ್ನಿ ತನ್ವಾ ಮಾರ್ವಾರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದ. ವಿಂಗ್ ಕಮಾಂಡರ್ ತನ್ನ ಪತ್ನಿಯ ಜೊತೆ ಮಾತನಾಡುವ ಸಮಯದಲ್ಲೂ ಪಾಕಿಗಳಿಗೆ ಯಾವುದೇ ರಹಸ್ಯ ಸಿಕ್ಕಿರಲಿಲ್ಲ. ಕಷ್ಟದ ಸಮಯದಲ್ಲೂ ಪತ್ನಿ ಜೊತೆ ಮಾತನಾಡುವಾಗ ಅಭಿನಂದನ್ ತಮಾಷೆಯಲ್ಲೇ ಮಾತನಾಡಿದ್ದರು.
ಅಭಿನಂದನ್ ಅವರ ಪತ್ನಿ ತನ್ವಿ ಕೂಡ ಸೇನಾ ಮೂಲದವರು. ಭಾರತೀಯ ವಾಯುಸೇನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲೂ ಅವರ ಸಾಕಷ್ಟು ಸಂಯಮದಿಂದ ಮಾತನಾಡಿದ್ದರು. ಅಭಿನಂದನ್‌ರಿಂದ ಅವರಿಗೆ ಕರೆ ಬಂದಾಗ ವಿಶ್ವಾಸ, ತಾಳ್ಮೆ ಹಾಗೂ ಮನಸ್ಸನ್ನು ಹತೋಟಿಗೆ ತಂದುಕೊಂಡು ಮಾತನಾಡಿದ್ದರು.
ಅಪ್ಪ ಜೈಲಲ್ಲಿದ್ದಾರೆ ಅಂತಾ ಹೇಳು: ಸಾಮಾನ್ಯವಾಗಿ ಇಂಥ ಕರೆಯ ಸಮಯದಲ್ಲಿ ಎಂಥಾ ಗಟ್ಟಿಗ ಮನಸ್ಸಿನವರಾದರೂ ಕಣ್ಣೀರು ಹಾಕುತ್ತಾರೆ. ಆದರೆ, ಅಭಿನಂದನ್ ಮಾತಿನಲ್ಲಿ ಬಹಳ ಆತ್ಮವಿಶ್ವಾಸವಿತ್ತು ಹಾಗೂ ತುಂಬಾ ತಾಳ್ಮೆಯಿಂದ ಮಾತನಾಡಿದ್ದರು. ಹೇಗಿದ್ದೀರಿ, ಎಲ್ಲವೂ ಕ್ಷೇಮವೇ ಅನ್ನೋ ಮಾತಿನೊಂದಿಗೆ ತನ್ವಿ ಮೊದಲು ವಿಚಾರಿಸಿದರೆ, ಇನ್ನೊಂದಡೆ ಅಭಿನಂದನ್, ಸ್ಪಷ್ಟ ಸ್ವರದಲ್ಲಿ '"Tell them Papa jail mein hain." ಅಂದರೆ ಅಪ್ಪ ಜೈಲಿನಲ್ಲಿದ್ದಾರೆ ಎಂದು ಇಬ್ಬರು ಮಕ್ಕಳಿಗೆ ಹೇಳು ಎಂದು ತಿಳಿಸಿದ್ದರು.
ಚಹಾದ ಬಗ್ಗೆ ತಮಾಷೆ ಮಾಡಿದ್ದ ತನ್ವಿ: ಅಭಿನಂದನ್ ವರ್ಧಮಾನ್ ಜೊತೆ ಮಾತನಾಡುವ ವೇಳೆ ತನ್ವಿ ಕೂಡ ತಮಾಷೆ ಮಾಡಿದ್ದರು. ಪಾಕಿಸ್ತಾನ ಮಿಲಿಟಿರಿ ಅದಾಗಲೇ ರಿಲೀಸ್ ಮಾಡಿದ್ದ ವಿಡಿಯೋವೊದರಲ್ಲಿ ಅಲ್ಲಿನ ಜನ ನೀಡಿದ ಚಹಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಟೀ ಈಸ್ ಫೆಂಟಾಸ್ಟಿಕ್ ಎಂದು ಅಭಿನಂದನ್ ಹೇಳಿದ್ದರು ವೈರಲ್ ಆಗಿತ್ತು. ಇದನ್ನು ನೆನಪಿಸಿಕೊಂಡಿದ್ದ ತನ್ನಿ ಮಾರ್ವಾ, ಚಹಾ ಹೇಗಿತ್ತು? ಎಂದು ಹೇಳಿದ್ದಾರೆ. ಅದಕ್ಕೆ ಅಭಿನಂದನ್, ತುಂಬಾ ಚೆನ್ನಾಗಿತ್ತು ಎಂದಿದ್ದಾರೆ. 'ನಾನು ಮಾಡೋದಕ್ಕಿಂತ ಚೆನ್ನಾಗಿತ್ತಾ?' ಎಂದು ಕೇಳಿದಾಗ ಅದಕ್ಕೆ ಅಭಿನಂದನ್ ಹೌದು ಎಂದು ಹೂಂಗುಟ್ಟಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ತನ್ವಿ, '"Phir recipe lete hue aana" ಎಂದಿದ್ದರು. ಅಂದರೆ, 'ಹಾಗಿದ್ದರೆ ರೆಸಿಪಿ ತೆಗೊಂಡೇ ಅಲ್ಲಿಂದ ಬಾ' ಎನ್ನುವುದಾಗಿದೆ.
ಪಾಕ್‌ನಲ್ಲಿ ಸೆರೆಯಾದ ಕಮಾಂಡರ್ ಅಭಿನಂದನ್ ಬಿಡುಗಡೆ ಹೇಗಾಯ್ತು? ಸ್ಫೋಟಕ ಮಾಹಿತಿ ಬಹಿರಂಗ!
ದೈಹಿಕ ಹಲ್ಲೆ ಮಾಡಿದ್ದ ಪಾಕ್ ಸೇನೆ: ಕಸ್ಟಡಿಯಲ್ಲಿದ್ದ ವೇಳೆ ಐಎಸ್‌ಐ ಅಧಿಕಾರಿಗಳು ಅಭಿನಂದನ್ ಮೇಲೆ ಹಲ್ಲೆ ಮಾಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದ ವೇಳೆ ಅಭಿನಂದನ್ ಅವರ ಪಕ್ಕೆಲುಬು ಮುರಿದಿತ್ತು ಎಂದು ಮೊದಲು ಅಂದುಕೊಳ್ಳಲಾಗಿತ್ತು. ತನಿಖೆಯ ಬಳಿಕ ಐಎಸ್‌ಐ ಅಧಿಕಾರಿಗಳು ಅವರ ಪಕ್ಕೆಲುಬು ಮುರಿದ್ದರು. ಅಭಿನಂದನ್ ಅವರ ಕೆನ್ನೆಗೂ ಸಾಕಷ್ಟು ಬಾರಿ ಹೊಡೆದಿದ್ದರು. ಪಾಕಿಸ್ತಾನಿ ಸೈನಿಕರು ರೈಫಲ್‌ನ ಹಿಂಭಾಗದಿಂದ ಅಭಿನಂದನ್‌ಗೆ ಹೊಡೆದಿದ್ದರು. ದೈಹಿಕ ಹಲ್ಲೆ ಮಾತ್ರವಲ್ಲದೆ, ಅಭಿನಂದನ್ ನಿದ್ರೆ ಮಾಡಲೇಬಾರದು ಎನ್ನುವ ಕಾರಣಕ್ಕೆ ದೊಡ್ಡ ಮ್ಯೂಸಿಕ್ ಹಾಗೂ ಅತಿಯಾದ ಬೆಳಕನ್ನು ಪಾಕ್ ಅಧಿಕಾರಿಗಳು ಹಾಕಿದ್ದರು.
MIG 21 Fighter Jet: ಅಭಿನಂದನ್ ವರ್ಧಮಾನ್ ಸಾಹಸಕ್ಕೆ ಕಾರಣವಾಗಿದ್ದ ಯುದ್ಧವಿಮಾನದ ಬಗ್ಗೆ IAF ದೊಡ್ಡ ನಿರ್ಧಾರ!

