Asianet Suvarna News Asianet Suvarna News

MIG 21 Fighter Jet: ಅಭಿನಂದನ್‌ ವರ್ಧಮಾನ್‌ ಸಾಹಸಕ್ಕೆ ಕಾರಣವಾಗಿದ್ದ ಯುದ್ಧವಿಮಾನದ ಬಗ್ಗೆ IAF ದೊಡ್ಡ ನಿರ್ಧಾರ!

ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಮಿಗ್ -21 ಬೈಸನ್ ವಿಮಾನವು ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಸಾಮಾನ್ಯ ನಾಗರೀಕರು ಪ್ರಾಣ ಕಳೆದುಕೊಂಡಿದ್ದರು.

after Rajasthan crash that killed three IAF grounds MiG 21 fighter jets amid probe san
Author
First Published May 20, 2023, 9:19 PM IST

ನವದೆಹಲಿ (ಮೇ.20): ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಮಿಗ್-21 ಬೈಸನ್‌ ಯುದ್ಧವಿಮಾನದ ದುರಂತಕ್ಕೆ ಕಾರಣವೇನು ಎನ್ನುವುದು ನಿರ್ಧಾರವಾಗುವವರೆಗೂ ಹಾಗೂ ಐಎಎಫ್‌ನಲ್ಲಿರುವ ಎಲ್ಲಾ ಮಿಗ್‌ 21 ಬೈಸನ್‌ ಯುದ್ಧವಿಮಾನದ ಕೂಲಂಕಷ ತಪಾಸಣೆ ಹಾಗೂ ತನಿಖೆ ನಡೆಯುವವರೆಗೂ ಈ ಫೈಟರ್‌ ಜೆಟ್‌ಅನ್ನು ಬಳಕೆ ಮಾಡುವುದಿಲ್ಲ. ಅಲ್ಲಿಯವರೆಗೂ ಮಿಗ್‌-21 ಬೈಸನ್‌ ಯುದ್ಧವಿಮಾನ್ ಮೂರೂ ಸ್ಕ್ವಾಡ್ರನ್‌ಗಳು ಬಳಕೆಯಲ್ಲಿರೋದಿಲ್ಲ ಎಂದು ಭಾರತೀಯ ವಾಯುಸೇನೆ ಘೋಷಣೆ ಮಾಡಿದೆ. ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಹಾರಿದ್ದ ಮಿಗ್ -21 ಬೈಸನ್ ವಿಮಾನವು ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಾಗ ಅಪಘಾತದಲ್ಲಿ ಮೂವರು ನಾಗರೀಕರು ಪ್ರಾಣ ಕಳೆದುಕೊಂಡಿದ್ದರು. "ತನಿಖೆಗಳು ಮತ್ತು ಅಪಘಾತಕ್ಕೆ ಕಾರಣಗಳನ್ನು ಕಂಡುಹಿಡಿಯುವವರೆಗೆ MiG-21 ಫೈಟರ್‌ ಜೆಟ್‌ ಸೇವೆಯನ್ನು ಬಳಸಿಕೊಳ್ಳಲಾಗುವುದಿಲ್ಲ' ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ. ಕಳೆದ ಐದು ದಶಕಗಳಿಂದ ಮಿಗ್‌-21 ಫೈಟರ್‌ಜೆಟ್‌ನ ವಿವಿಧ ಆವೃತ್ತಿಗಳು ಭಾರತೀಯ ಏರ್‌ಪೋರ್ಸ್‌ಗೆ ಸೇರ್ಪಡೆಯಾಗುತ್ತಿದೆ. ಈಗ ರಫೇಲ್‌ ಯುದ್ಧವಿಮಾನಗಳ ಬಳಕೆ ಆರಂಭ ಮಾಡಿದ ಬಳಿಕ, ಐಎಎಫ್‌ ಒಂದೊಂದಾಗಿ ಇದನ್ನು ಹೊರಹಾಕುತ್ತಿದೆ.

ಪ್ರಸ್ತುತ ಐಎಎಫ್‌ನಲ್ಲಿ ಕೇವಲ ಮೂರು ಸ್ಕ್ವಾಡ್ರನ್‌ನ ಮಿಗ್‌-21 ಫೈಟರ್‌ಜೆಟ್‌ ಕಾರ್ಯನಿರ್ವಹಿಸುತ್ತಿದೆ. ಇವರೆಲ್ಲವೂ 2025ರ ವೇಳೆಗೆ ಸಂಪೂರ್ಣವಾಗಿ ಐಎಎಫ್‌ನಿಂದ ಹೊರಹಾಕಲ್ಪಡಲಿದೆ ಎಂದು ವಾಯುಸೇನೆ ಈಗಾಗಲೇ ತಿಳಿಸಿದೆ.ರಾಜಸ್ಥಾನದಲ್ಲಿ ಮನೆಯ ಮೇಲೆ ಅಪಘಾತಕ್ಕೀಡಾದ ಯುದ್ಧ ವಿಮಾನವು ದೈನಂದಿನ ತರಬೇತಿಯಲ್ಲಿದ್ದಾಗ ಅಪಘಾತಕ್ಕೀಡಾಯಿತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ನಿಖರವಾದ ಕಾರಣವನ್ನು ತನಿಖೆ ಮಾಡಲು ತನಿಖೆಯನ್ನು ಪ್ರಾರಂಭಿಸಲಾಗಿದೆ.

ಪ್ರಸ್ತುತ ಐಎಎಫ್‌ನಲ್ಲಿ 31 ಯುದ್ಧಸಜ್ಜಿತ ಏರ್‌ಕ್ರಾಫ್ಟ್‌ ಸ್ಕ್ವಾಡ್ರನ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಮೂರು ಸ್ಕ್ವಾಡ್ರನ್‌ಗಳು ಮಿಗ್‌-21 ಬೈಸನ್‌ ಆವೃತ್ತಿಯದ್ದಾಗಿವೆ. 1960ರಲ್ಲಿ ಮಿಗ್‌-21 ಅನ್ನು ಐಎಎಫ್‌ಗೆ ಸೇರ್ಪಡೆ ಮಾಡಲಾಗಿತ್ತು. ಇಲ್ಲಿಯವರೆಗೂ ಐಎಎಫ್‌ನಲ್ಲಿ 800 ಮಿಗ್‌-21 ಯುದ್ಧ ವಿಮಾನದ ವಿವಿಧ ಆವೃತ್ತಿಗಳು ತನ್ನ ಸೇವೆ ನೀಡಿವೆ.

ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ

ಇನ್ನು ಮಿಗ್-21 ಯುದ್ಧವಿಮಾನದ ಕ್ರ್ಯಾಶ್‌ ರೇಟ್‌ ಕೂಡ ಕಳವಳಕಾರಿಯಾಗಿದೆ. ಇತ್ತೀಚಿನ ಕೆಲ ದಶಕಗಳಲ್ಲಿ ನಿರಂತರವಾಗಿ ಅಪಘಾತವಾಗುತ್ತಿದ್ದ ಕಾರಣಕ್ಕಾಗಿಯೇ ಇದನ್ನು ಹಾರಾಡುವ ಶವಪೆಟ್ಟಿಗೆ ಎಂದೂ ಮಾಧ್ಯಮಗಳು ಕರೆದಿದ್ದವು. ಮಿಗ್‌-21 ಬದಲು, ಸುಧಾರಿತ ಮಧ್ಯಮ ಯುದ್ಧ ವಿಮಾನದೊಂದಿಗೆ ಎಲ್‌ಸಿಎ ಮಾರ್ಕ್ 11 ಮತ್ತು ಎಲ್‌ಸಿಎ ಮಾರ್ಕ್ 2 ಸೇರಿದಂತೆ ಸ್ಥಳೀಯ ವಿಮಾನಗಳನ್ನು ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಸಹ ಐಎಎಫ್‌ ಮುಂದಾಗಿದೆ.

'ನಮ್ಮ ಪ್ಯಾಕ್‌ ಕಂಪ್ಲೀಟ್‌' ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಎಲ್ಲಾ 36 ರಫೇಲ್‌ ಯುದ್ಧವಿಮಾನ!

Follow Us:
Download App:
  • android
  • ios