ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್, ಗೆಳೆಯನ ಮುಂದೆ ದುರಂತ ಅಂತ್ಯ ಕಂಡ ಯುವಕ, ವಿಡಿಯೋ ಮಾಡುತ್ತಿದ್ದ ಗೆಳೆಯ ತಪ್ಪಿಯೂ ಟ್ರಿಗರ್ ಒತ್ತಬೇಡ ಎಂದು ಸೂಚಿಸಿದ ಬೆನ್ನಲ್ಲೇ ದುರಂತ ನಡೆದಿದೆ. 

ನವದೆಹಲಿ (ಮಾ.17) ರೀಲ್ಸ್ ಹುಚ್ಚು ತೀವ್ರಗೊಂಡು ದುರಂತ ಅಂತ್ಯಕಂಡ ಹಲವು ಘಟನೆ ನಡೆದಿದೆ. ಇದೀಗ ದೆಹಲಿಯ ಯುವಕನೊಬ್ಬ ರಿವಾಲ್ವರ್ ಹಿಡಿದು ರೀಲ್ಸ್ ಮಾಡಲು ಹೊರಟಿದ್ದಾನೆ. ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿದ್ದಾನೆ. ಬಳಿಕ ಲೋಡೆಡ್ ರಿವಾಲ್ವರ್ ಎದೆಗೆ ಇಟ್ಟು ಯಾವುದೇ ಭಯವಿಲ್ಲದಂತೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ರಿವಾಲ್ವರ್ ಟ್ರಿಗರ್‌ ಅಚಾನಕ್ಕಾಗಿ ಒತ್ತಿದ್ದಾರೆ. ಗುಂಡು ಎದೆ ಸೀಳಿ ಮರುಕ್ಷಣದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ದೆಹಲಿಯ ದಲ್ಲುಪುರ ನಿವಾಸಿ ಪವನ್ ತನ್ನ ಗೆಳೆಯನ ಜೊತೆ ರೀಲ್ಸ್ ಮಾಡಲು ಮುಂದಾಗಿದ್ದಾನೆ. ತನ್ನ ಬಳಿ ಇದ್ದ ರಿವಾಲ್ವರ್ ಕುರಿತು ರೀಲ್ಸ್ ಮಾಡಿ ವೈರಲ್ ಆಗಲು ಎಲ್ಲಾ ತಯಾರಿ ನಡೆಸಿದ್ದಾನೆ. ಪವನ್ ರೀಲ್ಸ್‌ಗೆ ಗೆಳೆಯ ಭಯದಿಂದಲೇ ಒಪ್ಪಿಕೊಂಡಿದ್ದಾನೆ. ಪವನ್ ತನ್ನ ಕೈಯಲ್ಲಿರುವ ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿದ್ದಾನೆ. ತನಗೆ ರಿವಾಲ್ವರ್ ಬಗ್ಗೆ ಎಲ್ಲಾ ಗೊತ್ತು, ಅದನ್ನು ಸುಲಭವಾಗಿ ಭಯವಿಲ್ಲದೆ ನಿಭಾಯಿಸುವುದು ಗೊತ್ತು ಎಂದು ವಿಡಿಯೋ ಮೂಲಕ ತೋರಿಸಿದ್ದಾನೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಆದರೆ ಅದೇ ನಗಮುಖದಲ್ಲಿ ಲೋಡೆಡ್ ರಿವಾಲ್ವರ್‌ನ್ನು ಎದೆಗೆ ಇಟ್ಟಿದ್ದಾನೆ.

ಗುಂಡು ಹಾರಿಸಬೇಡ ಸಹೋದರ

ಎದೆಗೆ ರಿವಾಲ್ವರ್ ಇಟ್ಟ ಬೆನ್ನಲ್ಲೇ ವಿಡಿಯೋ ಶೂಟ್ ಮಾಡುತ್ತಿದ್ದ ಗಳೆಯ ತಕ್ಷಣವೇ ಎಚ್ಚರಿಕೆ ಕೊಟ್ಟಿದ್ದಾನೆ. ಸಹೋದರು ಗುಂಡು ಹಾರಿಸಬೇಡ ಎಂದು ಭಯದಿಂದಲೇ ಹೇಳಿದ್ದಾನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಪವನ್, ಅರೆ ಇಲ್ಲಪ್ಪ ಎಂದು ಉತ್ತರಿಸಿದ್ದಾನೆ. ಈ ಉತ್ತರ ಮುಗಿಯುವಷ್ಟರಲ್ಲೇ ಟ್ರಿಗರ್ ಪ್ರೆಸ್ ಆಗಿ ಗುಂಡು ಎದೆಯನ್ನು ಸೀಳಿ ಹೋಗಿದೆ. ಮರುಕ್ಷಣದಲ್ಲೇ ನೆಲಕ್ಕುರುಳಿದ್ದಾನೆ. ಈ ಎಲ್ಲಾ ಘಟನೆ ವಿಡಿಯೋ ದಾಖಲಾಗಿದೆ. ಪವನ್ ಗೆಳೆಯನೇ ಈ ವಿಡಿಯೋ ಸೆರೆ ಹಿಡಿದಿದ್ದಾನೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಪಿಸ್ತೂಲ್‌ಗೆ ಬುಲೆಟ್ ಲೋಡ್ ಮಾಡುವುದು ಹೇಗೆ? ತೋರಿಸಿ ದುರಂತ ಅಂತ್ಯ

ದೆಹಲಿ ಯುವಕ ಪಿಸ್ತೂಲ್‌ಗೆ ಗುಂಡು ಲೋಡ್ ಮಾಡುವುದು ಹೇಗೆ, ಸುರಕ್ಷಿತವಾಗಿ ಬಳಸುವುದು ಹೇಗೆ ಅನ್ನೋದರ ಕುರಿತು ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯಕಂಡಿದ್ದಾನೆ. ಇತ್ತ ಪವನ್ ಗೆಳೆಯನ ಈ ಘಟನೆಯಿಂದ ಆಘಾತಗೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಒತ್ತಡದಲ್ಲಿ ಈ ರೀತಿ ಮಾಡಿದ್ದಾರೋ, ನಿಜಕ್ಕೂ ರಿವಾಲ್ವರ್ ಮಿಸ್‌ಫೈರ್ ಆಗಿದೆಯಾ ಅನ್ನೋ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.