MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ

ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ

ಆರ್‌ಎಸ್‌ಎಸ್‌ ನಿಷೇಧ ಮತ್ತು 'ರಾ'ಗೆ ನಿರ್ಬಂಧ ಹೇರಬೇಕೆಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವರದಿಯನ್ನು ಭಾರತ  ತಿರಸ್ಕರಿಸಿದ್ದು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವರದಿಯು ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

3 Min read
Author : Anusha Kb
Published : Mar 17 2026, 09:39 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ನವದೆಹಲಿ: ಆರ್‌ಎಸ್ಎಸ್‌ ಸಂಘಟನೆಯನ್ನು ನಿಷೇಧಿಸಬೇಕು, ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದರ ಜೊತೆಗೆ ಭಾರತದ ಭಾರತದ ಗುಪ್ತಚರ ಸಂಸ್ಥೆ (Research and Analysis Wing) 'ರಾ'ಗೆ ನಿರ್ಬಂಧ ಹೇರಬೇಕು ಎಂಬ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವಾರ್ಷಿಕ ವರದಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವರದಿಯನ್ನು ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಸ್ತುನಿಷ್ಠ ಸಂಗತಿಗಳಿಗಿಂತ ಪ್ರಶ್ನಾರ್ಹ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳನ್ನು ಅವಲಂಬಿಸಿ ಭಾರತದ ಬಗ್ಗೆ ವಿಕೃತ, ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ಅಮೆರಿಕಾದ ಈ ಆಯೋಗವು ನಿರಂತರವಾಗಿ ತೊಡಗಿಸಿಕೊಂಡಿದೆ. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಆಯೋಗದ (USCIRF) ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಅದರ ಪ್ರೇರಿತ ಮತ್ತು ಪಕ್ಷಪಾತದ ಗುಣಲಕ್ಷಣಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ;  ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವಿನಿಂದ ತೆರವಾದ ಕ್ಷೇತ್ರ: ಅತ್ತಿಗೆ ವಿರುದ್ಧ ಸ್ಪರ್ಧಿಸಲ್ಲ ಎಂದ ಸುಪ್ರಿಯಾ ಸುಳೆ

26
Image Credit : our own

ಹಲವಾರು ವರ್ಷಗಳಿಂದ ಅಮೆರಿಕಾದ USCIRF ಭಾರತದ ವಿರುದ್ಧ ವಿಕೃತ ಮತ್ತು ತಾನೇ ಆಯ್ಕೆ ಮಾಡಿದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಇದರ ವರದಿ ವಾಸ್ತವ ಸಂಗತಿಗಳ ಬದಲು ಪ್ರಶ್ನಾರ್ಹ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳನ್ನು ಅವಲಂಬಿಸಿದೆ. ಇಂತಹ ಪುನರಾವರ್ತಿತ ತಪ್ಪು ನಿರೂಪಣೆಗಳು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತವೆ ಎಂದು ಜೈಸ್ವಾಲ್ ಹೇಳಿದರು. ಯುಎಸ್‌ಸಿಐಆರ್‌ಎಫ್ ಭಾರತದ ಬಗ್ಗೆ ಟೀಕೆಗಳನ್ನು ಮುಂದುವರೆಸುವ ಬದಲು, ಅಮೆರಿಕದಲ್ಲಿ ನಡೆದ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಗುರಿಯಾಗಿಸಿ ನಡೆದ ದಾಳಿಗಳು ಹಾಗೂ ಅಮೆರಿಕದಲ್ಲಿ ಭಾರತೀಯ ವಲಸಿಗರ ಸದಸ್ಯರ ಮೇಲೆ ಹೆಚ್ಚುತ್ತಿರುವ ಹಿಂದೆ ಮತ್ತು ಬೆದರಿಕೆಗಳ ಬಗ್ಗೆ ಚಿಂತಿಸುವುದು ಒಳ್ಳೆಯದು. ಇವುಗಳು ಗಂಭೀರವಾಗಿ ಚಿಂತಿಸುವುದಕ್ಕೆ ಅರ್ಹವಾದ ವಿಚಾರಗಳಾಗಿವೆ ಎಂದು ಜೈಸ್ವಾಲ್ ಹೇಳಿದರು.

ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲೆ RSS ದಾಳಿ ಆರೋಪ: ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ ಅಮೆರಿಕ ಸರ್ಕಾರಕ್ಕೆ USCIRF ಶಿಫಾರಸು

Related Articles

Related image1
ಭಾರತದ ಮುಸ್ಲಿಮರ ಬಗ್ಗೆ ಇರಾನ್ ಅಧ್ಯಕ್ಷನ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀವ್ರ ಖಂಡನೆ
Related image2
RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು
36
Image Credit : Social Media

USCIRF ಭಾರತವನ್ನು ನಿರ್ದಿಷ್ಟ ಕಳವಳಕಾರಿ ದೇಶ ಎಂದು ಗೊತ್ತುಪಡಿಸಿ ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ತಡೆಹಿಡಿಯಬೇಕು. ಶಸ್ತ್ರಾಸ್ತ್ರ ಮಾರಾಟ ಮತ್ತು ವ್ಯಾಪಾರ ನೀತಿಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಜೋಡಿಸುವಂತೆ ಅಮೆರಿಕವನ್ನು ಕೇಳಿದ ನಂತರ ಭಾರತದ ವಿದೇಶಾಂಗ ಸಚಿವಾಲಯದ ಈ ಹೇಳಿಕೆ ಹೊರ ಬಂದಿದೆ. ತನ್ನ ಈ ಸಿಸ್ಟಮ್ಯಾಟಿಕ್ ರಿಲಿಜಿಯಸ್ ಪರ್ಸಿಕ್ಯೂಷನ್ ಇನ್ ಇಂಡಿಯಾ ಹೆಸರಿನ ವರದಿಯೂ ಭಾರತದ ಸಾಮಾಜಿಕ, ರಾಜಕೀಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳು ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು SCIRF ಹೇಳಿಕೊಂಡಿದೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡ‌ರ್ ಬೇಕಿದ್ರೆ ಕೆವೈಸಿ ನೀಡುವುದು ಕಡ್ಡಾಯ: ಇಲ್ಲಿದೆ ಕೆವೈಸಿ ಪ್ರಕ್ರಿಯೆಯ ಡಿಟೇಲ್

46
Image Credit : Asianet News

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಳವಳಕಾರಿಯಾಗಿ ಹದಗೆಟ್ಟಿದೆ. ಹಿಂದೂ ರಾಷ್ಟ್ರೀಯವಾದಿ ಗುಂಪುಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿ ಮಾಡುತ್ತಿದೆ. ಕಠಿಣ ಜೈಲುವಾಸಕ್ಕೆ ಅವಕಾಶವಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನೇಕ ರಾಜ್ಯಗಳು ಜಾರಿ ಮಾಡಲು ಪ್ರಯತ್ನಿಸುತ್ತಿವೆ. ಧಾರ್ಮಿಕ ನಿರಾಶ್ರಿತರು ಹಾಗೂ ಪ್ರಜೆಗಳನ್ನು ಅಕ್ರಮವಾಗಿ ಗಡೀಪಾರು ಮಾಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ವೃದ್ಧನ ಮದುವೆಯಾದ 19ರ ಯುವತಿಗೆ ಸಿಕ್ತು ಬಂಪರ್: ರೂಲ್ಸ್ ರಾಯ್ಸ್ ಕಾರು 5 ಕೇಜಿ ಬಂಗಾರ

56
Image Credit : Asianet News

ವಕ್ಸ್‌ ತಿದ್ದುಪಡಿ ಕಾಯ್ದೆ, ಉತ್ತರಾಖಂಡದ ರಾಜ್ಯ ಅಲ್ಪಸಂಖ್ಯಾತರ ಶಿಕ್ಷಣ ಕಾಯ್ದೆಯ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇಸ್ಲಾಮಿಕ್ ಧಾರ್ಮಿಕ ದತ್ತಿಯ ನಿರ್ವಹಣೆಯಲ್ಲಿ ಭಾರೀ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಅಲಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದೆ. ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಕೋಮುಗಲಭೆ ಹಾಗೂ ಹಿಂಸಾಚಾರಗಳನ್ನು ಆರೆಸ್ಸೆಸ್‌ನ ಸಹಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ತಲೆಗೆ ಕಟ್ಟಲಾಗಿದೆ.

ಇದನ್ನೂ ಓದಿ: ಕದಿಯಲು ಹೋಗಿ ಕಾಲಿಂಗ್ ಬೆಲ್ ಒತ್ತಿದ ಕಳ್ಳರು: ಮುಂದೇನಾಯ್ತು? ವೀಡಿಯೋ ವೈರಲ್

66
Image Credit : Asianet News

ಶಿಫಾರಸು ಏನು?: ಆರೆಸ್ಸೆಸ್, ಮತ್ತಿತರ ಸಂಘಟನೆಗಳು, ಕೆಲ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಮೆರಿಕ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸುಧಾರಣೆ ತರುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಅಮೆರಿಕದ ನಾಗರಿಕರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಪೂರೈಕೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಅನ್ನು ಜಾರಿ ಮಾಡಿ ಶಸ್ತ್ರಾಸ್ತ್ರ ಮಾರಾಟ ತಡೆಹಿಡಿಯಬೇಕು ಎಂದು ಅಮೆರಿಕ ಸರ್ಕಾರಕ್ಕೆ ಯುಎಸ್‌ಸಿಐಆರ್‌ಎಫ್ ಶಿಫಾರಸು ಮಾಡಿದೆ.

ಇದನ್ನೂ ಓದಿ: ಚಾಮರಾಜನಗರ: ಕೇರಳಿಗ ಅಳವಡಿಸಿದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ 2 ವರ್ಷದ ಹುಲಿ ಮರಿ ಸಾವು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಭಾರತ ಸುದ್ದಿ
ಅಮೇರಿಕಾ
Latest Videos
Recommended Stories
Recommended image1
ಕದಿಯಲು ಹೋಗಿ ಕಾಲಿಂಗ್ ಬೆಲ್ ಒತ್ತಿದ ಕಳ್ಳರು: ಮುಂದೇನಾಯ್ತು? ವೀಡಿಯೋ ವೈರಲ್
Recommended image2
ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲೇ ಅಧಿಕಾರಿಗಳ ವರ್ಗಾವಣೆ: ಚುನಾವಣಾ ಆಯೋಗದ ವಿರುದ್ಧ ಮಮತಾ ಆಕ್ರೋಶ
Recommended image3
India Latest News Live: ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ
Related Stories
Recommended image1
ಭಾರತದ ಮುಸ್ಲಿಮರ ಬಗ್ಗೆ ಇರಾನ್ ಅಧ್ಯಕ್ಷನ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ತೀವ್ರ ಖಂಡನೆ
Recommended image2
RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved