ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್‌ನ ಅಣ್ವಸ್ತ್ರ ನೆಲೆಯಾದ ಕೈರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿತೇ? ಕಳೆದ ವರ್ಷ ಸಿಂದೂರ ಕಾರ್ಯಾಚರಣೆ ವೇಳೆ ಎದ್ದಿದ್ದ ಪ್ರಶ್ನೆ ಈಗ ಪುನಃ ಎದ್ದಿದೆ.
ನವದೆಹಲಿ : ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್‌ನ ಅಣ್ವಸ್ತ್ರ ನೆಲೆಯಾದ ಕೈರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿತೇ? ಕಳೆದ ವರ್ಷ ಸಿಂದೂರ ಕಾರ್ಯಾಚರಣೆ ವೇಳೆ ಎದ್ದಿದ್ದ ಪ್ರಶ್ನೆ ಈಗ ಪುನಃ ಎದ್ದಿದೆ. ಏಕೆಂದರೆ ಗಣರಾಜ್ಯೋತ್ಸವದಂದು ವಾಯುಪಡೆಯು ಸರ್ಗೋಧಾದಲ್ಲಿನ ಪಾಕಿಸ್ತಾನದ ಪರಮಾಣು ನೆಲೆಯನ್ನು ಹೊಡೆದುರುಳಿಸುವುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಜೊತೆಗೆ ಭಾರತೀಯ ಜೆಟ್‌ಗಳಾದ ರಫೇಲ್, ಸುಖೋಯ್, ಜಾಗ್ವಾರ್ ಮತ್ತು ತೇಜಸ್ ಹಾರಾಟವನ್ನೂ ತೋರಿಸಲಾಗಿದೆ.
ಭಾರತ ಕೈರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದರು
ಕಳೆದ ವರ್ಷವೇ ಪತ್ರಿಕಾಗೋಷ್ಠಿಯಲ್ಲಿ, ಆಗಿನ ವಾಯುಪಡೆ ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ, ‘ಭಾರತ ಕೈರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ’ ಎಂದು ಹೇಳಿದ್ದರು.
ವಿಡಿಯೋವನ್ನು ಅಧಿಕೃತ ಎಕ್ಸ್ ಖಾತೆಯಲ್ಲಿ ವಾಯಪಡೆ ಪೋಸ್ಟ್
ಆದರೆ ಈಗ ವಿಡಿಯೋವನ್ನು ಅಧಿಕೃತ ಎಕ್ಸ್ ಖಾತೆಯಲ್ಲಿ ವಾಯಪಡೆ ಪೋಸ್ಟ್ ಮಾಡಿದ ಬಗ್ಗೆ ಮಾಧ್ಯಮಗಳು ಕೇಳಿದಾಗ ತನ್ನ ಹಳೆಯ ಹೇಳಿಕೆಯನ್ನೇ ಪುನರುಚ್ಚರಿಸಿದೆ. ‘ನಾವು ಇನ್ನೂ ಅಧಿಕೃತ ಹೇಳಿಕೆಗೆ ಬದ್ಧರಾಗಿದ್ದೇವೆ " ಎಂದು ಐಎಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


