‘ಆಪರೇಷನ್‌ ಸಿಂದೂರದ ವೇಳೆಯಲ್ಲಿ ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯನ್ನು ತಣಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಪಾಕಿಸ್ತಾನ ಹೇಳಿದೆ. ಈ ಮೂಲಕ, ತನ್ನ ಮಧ್ಯಸ್ಥಿಕೆಯಿಂದ ಯುದ್ಧ ನಿಂತಿತು ಎಂಬ ಚೀನಾದ ವಾದವನ್ನು ಪಾಕ್‌ ಬೆಂಬಲಿಸಿದೆ.

ಇಸ್ಲಾಮಾಬಾದ್‌: ‘ಆಪರೇಷನ್‌ ಸಿಂದೂರದ ವೇಳೆಯಲ್ಲಿ ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯನ್ನು ತಣಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಪಾಕಿಸ್ತಾನ ಹೇಳಿದೆ. ಈ ಮೂಲಕ, ತನ್ನ ಮಧ್ಯಸ್ಥಿಕೆಯಿಂದ ಯುದ್ಧ ನಿಂತಿತು ಎಂಬ ಚೀನಾದ ವಾದವನ್ನು ಪಾಕ್‌ ಬೆಂಬಲಿಸಿದೆ.

ನಮ್ಮ ಅಧಿಕಾರಿಗಳೊಂದಿಗೆ ಚೀನಾ ನಿರಂತರ ಸಂಪರ್ಕದಲ್ಲಿತ್ತು

ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್‌ ಅನ್ದರ್ಬಿ ಮಾತನಾಡಿ, ‘ನಮ್ಮ ಅಧಿಕಾರಿಗಳೊಂದಿಗೆ ಚೀನಾ ನಿರಂತರ ಸಂಪರ್ಕದಲ್ಲಿತ್ತು. ಮೇ 6ರಿಂದ 10ರ ವರೆಗೆ ನಡೆದ ದಾಳಿಗಳ ಮುನ್ನ ಹಾಗೂ ಬಳಿಕ ಭಾರತದ ಅಧಿಕಾರಿಗಳನ್ನೂ ಸಂಪರ್ಕಿಸಿದ್ದರು. ಹೀಗೆ ಶಾಂತಿ ಹಾಗೂ ಭದ್ರತೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದರು.

ಚೀನಾ ಮಧ್ಯಸ್ಥಿಕೆ ಎಂದಿದ್ದರು

ಇತ್ತೀಚೆಗಷ್ಟೇ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ, ‘2025ರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿದ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯೂ ಸೇರಿತ್ತು’ ಎಂದಿದ್ದರು. ಇದನ್ನು ಭಾರತ ಅಲ್ಲಗಳೆದಿತ್ತು.