Asianet Suvarna News Asianet Suvarna News

1,250 ಕೋಟಿ ರೂ ಪ್ಯಾಕೇಜ್ ಪರಿಹಾರ, ಎಬಿಡಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ; ಮೇ.19ರ ಟಾಪ್ 10 ಸುದ್ದಿ!

ಕೊರೋನಾ ಸಂಕಷ್ಟದಲ್ಲಿರುವ ಬಡವರು, ಶ್ರಮಿಕರು, ಕಾರ್ಮಿಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ  ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಇತ್ತ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಲಸಿಕೆ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಪರಿಹಾರ,  ನಿವೃತ್ತಿ ನಿರ್ಧಾರ ಬದಲಿಸಿದ ಎಬಿಡಿ ವಿರುದ್ಧ ಫ್ಯಾನ್ಸ್ ಬೇಸರ ಸೇರಿದಂತೆ ಮೇ.19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Corona package announces in Karnataka to Ab Devillers top 10 news of May 19 ckm
Author
Bengaluru, First Published May 19, 2021, 4:50 PM IST

ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!...

Corona package announces in Karnataka to Ab Devillers top 10 news of May 19 ckmಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಪಡೆಯಲು ಲಸಿಕೆಗಳೇ ಇಲ್ಲದಂತಾಗಿದೆ. ಅನೇಕ ರಾಜ್ಯ ಸರ್ಕಾರಗಳು ಈ ಕೊರತೆ ಕಂಡು ಬಂದ ಬೆನ್ನಲ್ಲೇ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇಂತಹ ಪರಿಸ್ಥಿತಿಯುಲ್ಲಿ ಕೇಂದರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ.

ತೌಕ್ಟೆ ಚಂಡಮಾರುತದಿಂದ ಹಾನಿಯಾಗಿರುವ ಗುಜರಾತ್‌ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ!...

ತೌಕ್ಟೆ ಚಂಡ ಮಾರುತ ಅಬ್ಬರಕ್ಕೆ ಸಿಲುಕಿ ಭಾರತದ ಕರಾವಳಿ ರಾಜ್ಯಗಳು ತತ್ತರಿಸಿದೆ. ಆರಂಭದಲ್ಲಿ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ  ಬಿರುಗಾಳಿ ಎಬ್ಬಿಸಿದ ಚಂಡ ಮಾರುತ ಬಳಿಕ ಮುಂಬೈ, ಗುಜರಾತ್‌ನಲ್ಲಿ ತೀವ್ರ ಹಾನಿ ಮಾಡಿದೆ. ಗುಜರಾತ್‌ ಹಾಗೂ ಕೇಂದ್ರಾಡಳಿತ ದಿಯೂನ  ಹಾನಿಗೊಳಗಾದ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?...

ಕೊರೋನಾ ನಿಯಂತ್ರಣ ಸಂಬಂಧ ಸೆಮಿ ಲಾಕ್‌ಡೌನ್‌ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಹಾರ ಘೋಷಿಸಿದ್ದಾರೆ. ಒಟ್ಟು 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಯಾವ ವರ್ಗಕ್ಕೆ ಏನು ಸಿಕ್ಕಿದೆ? ಇಲ್ಲಿದೆ ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶಗಳು

ಎಬಿ ಡಿವಿಲಿಯರ್ಸ್‌ ಮೇಲೆ ಬೇಸರ ಹೊರಹಾಕಿದ ಮಾರ್ಕ್ ಬೌಷರ್..!...

ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಮಾಡುವುದಿಲ್ಲ. ಈಗಾಗಲೇ ನಿವೃತ್ತಿ ಪಡೆದಿರುವುದೇ ನನ್ನ ಅಂತಿಮ ತೀರ್ಮಾನವೆಂದು ಸ್ಪಷ್ಟಪಡಿಸಿದ್ದಾರೆಂದು ಕ್ರಿಕೆಟ್ ಸೌತ್ ಆಫ್ರಿಕಾ ಖಚಿತಪಡಿಸಿದೆ. 

ಸೈಕ್ಲೋನ್‌ನಿಂದ ಉರುಳಿಬಿದ್ದ ಮರದಲ್ಲಿ ನಟಿಯ ಫೋಟೋಶೂಟ್..! ಜೊತೆಗೆ ಚಂದದ ಮೆಸೇಜ್...

ತೌಕ್ಟೆ ಸೈಕ್ಲೋನ್‌ ದೇಶದ ಹಲವು ಭಾಗಗಳಲ್ಲಿ ಪರಿಣಾಮ ಬೀರಿದೆ. ಈ ಸಂದರ್ಭ ಇಲ್ಲೊಬ್ಬ ನಟಿ ಚಂಡಮಾಡುತದ ಬಿರುಗಾಳಿಗೆ ಉರುಳಿಬಿದ್ದ ಮರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಕೊರೋನಾ ನಡುವೆಯೂ 2020​​-21ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ...

ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ 2020-21ನೇ ಆರ್ಥಿಕ ವರ್ಷದಲ್ಲಿ 2,557 ಕೋಟಿ ರು.ಗಳ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ಕಾರ್ಯಾಚರಣೆಯ ಲಾಭಾಂಶ 20,009 ಕೋಟಿ ರು.ಗಳಿಗೆ ತಲುಪಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

'ಅಂದು ಲಸಿಕೆ ಅಪಪ್ರಚಾರ-ಇಂದು ಮೋದಿ ವಿರುದ್ಧ ಟೀಕೆ ಕೈ ನಾಯಕರ ಕೆಲಸ'...

ಅಂದು ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದು, ಈಗ ರಾಹುಲ್ ಗಾಂಧಿಗೆ ದಿನವು ಮೋದಿ ಟೀಕಿಸುವುದೇ ದೊಡ್ಡ ಕೆಲಸವಾಗಿದೆ ಎಂದು ಶಾಸಕ ವೀರಣ ಚರಂತಿಮಠ ಹೇಳಿದರು. 

ಆ್ಯಷಸ್ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ...

ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗ ಎಂದೇ ಬಿಂಬಿತವಾಗಿರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪುರುಷರ ಹಾಗೂ ಮಹಿಳೆಯರ ಆ್ಯಷಸ್ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಅಸ್ಟ್ರೇಲಿಯಾ ಪ್ರಕಟಿಸಿದೆ. ಕೋವಿಡ್ ಭೀತಿಯಿಂದಾಗಿ ಈ ಬಾರಿ ಆ್ಯಷಸ್ ಸರಣಿ ಖಾಲಿ ಮೈದಾನದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗತೊಡಗಿದೆ.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ...

ಕೋವಿಡ್‌ನಿಂದಾಗಿ ಆರ್ಥಿಕವಾಗಿಯೂ ಸಾಕಷ್ಟು ಕುಟುಂಬಗಳು ಬಿಕ್ಕಟ್ಟು ಎದುರಿಸುತ್ತಿವೆ. ಸುಮಾರು ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದು ಹೇಗೆಂಬ ಚಿಂತೆ. ಆದರೆ, ಶಿಕ್ಷಣದಲ್ಲಿ ಮುಂದುವರಿಯಲು ಆಸಕ್ತಿ ಇರುವರಿಗೆ ಹಲವಾರು ಸ್ಕಾಲರ್‌ಶಿಪ್‌ಗಳಿವೆ. ಅಂಥವುಗಳ ಬಗ್ಗೆ ತಿಳಿದುಕೊಂಡು ಅಪ್ಲೈ ಮಾಡಬೇಕು. ಇದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿದೆ.

Follow Us:
Download App:
  • android
  • ios