ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!
* ದೇಶದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಧ್ಯೆ ಲಸಿಕೆ ಅಭಿಯಾನ
* ಪೂರೈಕೆಯಲ್ಲಿ ವ್ಯತ್ಯಯ ಕೊರೋನಾ ಲಸಿಕೆ ಕೊರತೆ
* ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ಕ್ರಮ
ನವದೆಹಲಿ(ಮೇ.19)ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈ ನಡುವೆಯೂ ಲಸಿಕೆ ಅಭಿಯಾನ ಮುಂದುವರೆದಿದೆ. ಜನರೂ ಜಾಗೃತಗೊಂಡಿದ್ದು, ಲಸಿಕೆ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೀಗ ಕೊರೋನಾ ಹೋರಾಟಕ್ಕೆ ಬಲ ತುಂಬಿದ ಎರಡು ದೇಶೀಯ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ತೀವ್ರ ಪ್ರಮಾಣದ ಕೊರತೆಯುಂಣಟಾಗಿದೆ. ಹೀಗಾಗಿ ಕೆಲವೆಡೆ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯಲು ಲಸಿಕೆಗಳೇ ಇಲ್ಲದಂತಾಗಿದೆ. ಅನೇಕ ರಾಜ್ಯ ಸರ್ಕಾರಗಳು ಈ ಕೊರತೆ ಕಂಡು ಬಂದ ಬೆನ್ನಲ್ಲೇ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇಂತಹ ಪರಿಸ್ಥಿತಿಯುಲ್ಲಿ ಕೇಂದರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ.
ಹೌದು ಕೊರೋನಾ ಲಸಿಕೆ ಪೂರೈಕೆಯಲ್ಲಿ ಯಾವುದೇ ಅಡೆ ತಡೆಗಳಾಗಬಾರದೆಂಬ ನಿಟ್ಟಿನಲ್ಲಿ ವ್ಯಾಕ್ಸಿನ್ ತಯಾರಿಸೋ ಸಂಸ್ಥೆಗಳಿಗೆ ಇತರ ಸಂಸ್ಥೆಗಳಿಗೂ ಫಾರ್ಮುಲಾ ನೀಡುವಂತೆ ಸಲಹೆ ನೀಡಿದೆ. ಅಲ್ಲದೇ ಲಸಿಕೆ ಉತ್ಪಾದನೆ ವಿಚಾರವಾಗಿ ಈಗಾಗಲೇ ಹನ್ನೆರಡು ಕಂಪನಿಗಳೊಂದಿಗೂ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಲಸಿಕೆ ಕೊರತೆ ನೀಗಲಿದೆ.
ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!
ಸರ್ಕಾರದ ಈ ನಡೆ ಬಗ್ಗೆ ಮಾಹಿತಿ ಇರದ ಕೇಂದ್ರ ಸಚಿವ ಗಡ್ಕರಿ ದೇಶದ ಹಲವಾರು ಕಂಪನಿಗಳಲ್ಲಿ ಲಸಿಕೆ ತಯಾರಿಸುವ ವ್ಯವಸ್ಥೆ ಇದೆ. ಹೀಗಿರುವಾಗ ಲಸಿಕೆ ಕೊರತೆ ನೀಗಿಸಲು ಕನಿಷ್ಠ ಹತ್ತು ಲಸಿಕೆ ತಯಾರಿಕಾ ಕಂಪನಿಗಳಗೆ ಮೂಲ ಕಂಪನಿಗಳಿಂದ ಫಾರ್ಮುಲಾ ನೀಡಿ, ಲಸಿಕೆ ಉತ್ಪಾದಿಸಲು ಅನುಮತಿ ನೀಡಿದರೆ ಲಸಿಕೆ ಅಭಾವ ನೀಗಲಿದೆ. ಮೂಲಕಂಪನಿಗಳು ಬೇಕಾದ್ರೆ ರಾಯಲ್ಟಿ ಪಡೆದುಕೊಳ್ಳಲಿ. ಲಸಿಕೆ ಉತ್ಪಾದನೆ ಹೆಚ್ಚಾದರೆ ವಿದೇಶಗಳಿಗೂ ರಫ್ತು ಮಾಡಬಹುದೆಂದು ಸಂವಾದ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದರು.
ಆದರೆ ಈ ಸಂವಾದದ ಬಳಿಕ ಸಚಿವ ಮನ್ಸುಕ್ ಮಾಂಡವೀಯ ಸಾರಿಗೆ ಸಚಿವ ಗಡ್ಕರಿ ಬಳಿ ತೆರಳಿ ಸರ್ಕಾರ ಈಗಾಗಲೇ ಇಂತಹ ಪ್ರಯತ್ನ ಆರಂಭಿಸಿದೆ. ಈಗಾಗಲೇ ಹನ್ನೆರಡು ಲಸಿಕೆ ಉತ್ಪಾದನಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ವಿವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಚಿವ ಗಡ್ಕರಿ ನಡೆದ ಎಲ್ಲಾ ವಿಚಾರವನ್ನೂ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಸರ್ಕಾರ ಇಂತಹುದ್ದೊಂದು ಹೆಜ್ಜೆ ಇರಿಸಿದೆ ಎಂದು ತಿಳಿಯದೆ ನಾನು ಸಲಹೆ ನೀಡಿದ್ದೆ. ಆದರೆ ಸರ್ಕಾರ ಈ ಮೊದಲೇ ಇಂತಹುದ್ದೊಂದು ಹೆಜ್ಜೆ ಇಟ್ಟಿದೆ ಎಂದು ತಿಳಿದು ಖುಷಿಯಾಯ್ತು. ಈ ವಿಚಾರವಾಗಿ ನಾನು ಸರ್ಕಾರಕ್ಕೆ ಶುಭ ಕೋರುತ್ತೇನೆ ಎಂದಿದ್ದಾರೆ.
ಅದೇನಿದ್ದರೂ ಲಸಿಕೆ ಉತ್ಪಾದನೆ ಹೆಚ್ಚಿಸಲು ಹಾಗೂ ಕೊರತೆ ನೀಗಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮ ಶ್ಲಾಘನೀಯ. ಕೊರೋನಾ ನಿಯಂತ್ರಿಸವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವ ಲಸಿಕೆ ಅತ್ಯಂತ ಶೀಘ್ರವಾಗಿ ಎಲ್ಲರಿಗೂ ಲಭ್ಯವಾಗಲಿ ಎಂಬುವುದೇ ನಮ್ಮ ಆಶಯ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona