ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಚೋಲಿ ಕಿ ಪೀಚೆ ಹಾಡಿಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಆದರೆ ಯುವತಿಯ ಡ್ಯಾನ್ಸ್‌ಗೆ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಲೇಜು ಆಡಳಿತ ಮಂಡಳಿಗೆ ತಲೆನೋವಾಗಿದೆ.
ಕಾಲೇಜು ಕಲ್ಚರಲ್ ಕಾರ್ಯಕ್ರಮಗಳು ಇತ್ತೀಚೆಗೆ ವಿವಾದಕ್ಕೀಡಾಗುತ್ತಿರುವ ಸಂಪ್ರದಾಯ ಹೆಚ್ಚಾಗುತ್ತಿದೆ. ಕಾರ್ಯಕ್ರಮದಲ್ಲಿನ ಆಕ್ಷೇಪಾರ್ಹ ವಿಷಗಳು, ಹೇಳಿಕೆ ಸೇರಿದಂತೆ ಹಲವು ವಿಚಾರಗಳು ವೈರಲ್ ಆಗಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದೀಗ ಕಾಲೇಜು ಕಾರ್ಯಕ್ರಮದಲ್ಲಿ ಯವತಿಯೊಬ್ಬಳು ಮಾಡಿದ ಬೋಲ್ಡ್ ಡ್ಯಾನ್ಸ್ ಭಾರಿ ವೈರಲ್ ಆಗಿದೆ. ಯುವತಿಯ ಡ್ಯಾನ್ಸ್‌ಗೆ ನೆರೆದಿದ್ದವರಿಂದ ಚಪ್ಪಾಳೆಗಳ ಸುರಿಮಳೆಯಾಗಿತ್ತು. ಅಷ್ಟೇ ವೇಗದಲ್ಲಿ ಈ ವಿಡಿಯೋ ಎಲ್ಲೆಡೆ ಹರಿಹಾಡಿದ್ದು. ಇದರ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿಗೆ ಸಂಕಷ್ಟ ಎದುರಾಗಿದೆ.
ಕಾಲೇಜು ಫೆಸ್ಟ್‌ನಲ್ಲಿ ಹಲವು ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಒರ್ವ ಯುವತಿ ಬಾಲಿವುಡ್‌ನ ಕ್ರ್ಯೂ ಚಿತ್ರದಲ್ಲಿನ ದಿಲ್ಜಿತ್ ದೋಸಾಂಜ್ ಹಾಗೂ ಅಲ್ಕಾ ಯಾಗ್ನಿಕ್ ಹಾಗೂ ಇಲಾ ಅರುಣ್ ಹಾಡಿದ ಚೋಲಿ ಕೀ ಪೀಚೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಬಿಳಿ ಕ್ರಾಪ್ ಟಾಪ್ ಹಾಗೂ ಸ್ಕರ್ಟ್ ಹಾಕಿ ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾಳೆ.
3 ವರ್ಷವಾದರೂ ಪೈಸೆಯೂ ಏರದ ಸಂಬಳ, ರಾಜೀನಾಮೆ ಕೊಟ್ಟು ಬಾಸ್ ಮುಂದೆ ಉದ್ಯೋಗಿ ಡ್ಯಾನ್ಸ್ ವೀಡಿಯೋ ವೈರಲ್!
ಯುವತಿ ಸಖತ್ ಸ್ಟೆಪ್ಸ್ ಕಾಲೇಜಿನ ಇತರ ವಿದ್ಯಾರ್ಥಿಗಳನ್ನು ಹುಚ್ಚೆದ್ದು ಕುಣಿಸಿತ್ತು. ಶಿಳ್ಳೆ ಚಪ್ಪಾಳೆಗಳು ವ್ಯಕ್ತವಾಗಿತ್ತು. ಜೊತೆಗೆ ಎಲ್ಲರೂ ಮೊಬೈಲ್ ಮೂಲಕ ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಯುವತಿ ಡ್ಯಾನ್ಸ್ ಭಾರಿ ವೈರಲ್ ಆಗಿದೆ. ಆದರೆ ಈ ಡ್ಯಾನ್ಸ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಯುವತಿ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿಯರಿಗಿಂತ ಉತ್ತಮಾಗಿ ಡ್ಯಾನ್ಸ್ ಮಾಡಿದ್ದಾಳೆ ಎಂದು ಬೆನ್ನು ತಟ್ಟಿಟ್ಟಿದ್ದಾರೆ. ಯುವತಿಗೆ ಡ್ಯಾನ್ಸ್ ಹಾಗೂ ನಟನೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚಾಗಿದೆ. ಕಾಲೇಜು ವೇದಿಕೆಯಲ್ಲಿ ಈ ರೀತಿಯ ನೃತ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದು ಯಾಕೆ ಅನ್ನೋ ಪ್ರಶ್ನೆ ಎದ್ದಿದೆ. ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ ಮೌಲ್ಯ ಇರಬೇಕು. ಆದರೆ ಇಂತಹ ಶಿಕ್ಷಣ ಸಂಸ್ಥೆಯಿಂದ ಮಕ್ಕಳಿಗೆ ಮೌಲ್ಯಯುತ ಜೀವನ ಪಾಠ, ಶಿಸ್ತು ಇಲ್ಲದಾಗಿದೆ. ಡ್ಯಾನ್ಸ್ ಹೇಗೆ ಬೇಕಾದರೂ ಮಾಡಬಹುದು, ಬೋಲ್ಡ್ ಇರಬಹುದು. ಆದರೆ ಎಲ್ಲಿ ಅನ್ನೋ ಪ್ರಶ್ನೆ ಮುಖ್ಯ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬೋಲ್ಡ್ ಡ್ಯಾನ್ಸ್‌ಗೆ ಅನುಮತಿ ನೀಡಿರುವುದೇ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುಬಾರಿ ಲ್ಯಾಂಬೋರ್ಗಿನಿ ಮೇಲೆ ಹತ್ತಿ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಒಡೆದೋಯ್ತು ಕಾರಿನ ಗಾಜು!
ಶಿಕ್ಷಣ ಸಂಸ್ಥೆಯಿಂದ ಈ ರೀತಿ ಸಂದೇಶಗಳು ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರಲಿದೆ ಎಂದು ಹಲವರು ಕಾಲೇಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಮೆಂಟ್‌ಗಳಿಂದ ಇದೀಗ ಕಾಲೇಜು ಆಡಳಿ ಮಂಡಳಿಗೆ ತಲೆನೋವು ಶುರುವಾಗಿದೆ.
