Asianet Suvarna News Asianet Suvarna News

ಮತ್ತೆ ಬಂದ ನಟ ರಾಕ್ಷಸ ಧನಂಜಯ್: ಮಾತು ಸೋತು ಮೋಕ್ಷಾ ಹಿಂದೆ ಬಿದ್ದ ಡಾಲಿ!

ಸ್ಯಾಂಡಲ್​ವುಡ್​ನ ನಟ ರಾಕ್ಷಸ ಧನಂಜಯ್​​ ಗುರುದೇವ ಹೊಯ್ಸಳ ಸಿನಿಮಾ ಬಳಿಕ ಬೆಳ್ಳಿತೆರೆ ಮೇಲೆ ಅಬ್ಬರಿಸಿಲ್ಲ. ಈಗ ಒಂದು ವರ್ಷದ ಬಳಿಕ ಧನಂಜಯ್ ಮತ್ತೆ ಬಿಗ್​ ಸ್ಕ್ರೀನ್ ಟ್ರೀಟ್​ಗೆ ರೆಡಿಯಾಗಿದ್ದಾರೆ. ಈ ಭಾರಿ ಧನಂಜಯ್​ ಮಾತು ಸೋತು ಮೋಕ್ಷ ಹಿಂದೆ ಬಿದ್ದು ನಿಮ್ಮನ್ನ ರಂಜಿಸೋಕೆ ಸಜ್ಜಾಗಿದ್ದಾರೆ. 
 

ಸ್ಯಾಂಡಲ್​ವುಡ್​ನ ನಟ ರಾಕ್ಷಸ ಧನಂಜಯ್​​ ಗುರುದೇವ ಹೊಯ್ಸಳ ಸಿನಿಮಾ ಬಳಿಕ ಬೆಳ್ಳಿತೆರೆ ಮೇಲೆ ಅಬ್ಬರಿಸಿಲ್ಲ. ಈಗ ಒಂದು ವರ್ಷದ ಬಳಿಕ ಧನಂಜಯ್ ಮತ್ತೆ ಬಿಗ್​ ಸ್ಕ್ರೀನ್ ಟ್ರೀಟ್​ಗೆ ರೆಡಿಯಾಗಿದ್ದಾರೆ. ಈ ಭಾರಿ ಧನಂಜಯ್​ ಮಾತು ಸೋತು ಮೋಕ್ಷ ಹಿಂದೆ ಬಿದ್ದು ನಿಮ್ಮನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ನಟ ರಾಕ್ಷಕ ಧನಜಂಯ್​ ಕೋಟಿ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೇ ಮುಗಿದಿದ್ದು, ಈಗ ಲವ್ ಟ್ರ್ಯಾಕ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ನಟ ಡಾಲಿ ನಟಿ ಮೋಕ್ಷಾ ಕುಶಾಲ್ ಜೊತೆ ಮಾತು ಸೋತು ಪ್ರೀತಿಯ ಪರಿಮಳ ಸೂಸಿದ್ದಾರೆ. ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡಿದು. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಟಾಪ್ ಸಿಂಗರ್​ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. 

ಕೋಟಿ ಸಿನಿಮಾಗೆ ಪರಮ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪರಮ್ ಡೈರಕ್ಷನ್​ನ ಮೊದಲ ಸಿನಿಮಾ. ಕೋಟಿಯಲ್ಲಿ ಡಾಲಿ ಧನಂಜಯ್ ಜೊತೆ ಮೋಕ್ಷಾ ಕುಶಾಲ್ ನಾಯಕಿ ಆಗಿದ್ದಾರೆ. ಇದರ ಜತೆಗೆ ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ಇಂದಿರಾ, ತಾರಾ, ಸರ್ದಾರ್ಸತ್ಯ  ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ರಾಗ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್ಪೌಲ್ನಿಭಾಯಿಸಿದ್ದಾರೆ. ಕಾಂತಾರ ಸಿನಿಮಾ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ಶೆಟ್ಟಿಕೋಟಿಯ ಸಂಕಲನಕಾರರಾಗಿದ್ದಾರೆ. ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಜೂನ್14ರಂದು ಕೋಟಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

Video Top Stories