ರೀಲ್ಸ್ ಹುಚ್ಚು ಅಪಾಯಕಾರಿಯಾಗುತ್ತಿದೆ. ಸ್ಟಂಟ್ ಮಾಡಲು ಹೋಗಿ ಅಪಾಯ ಮೈಮೇಲೆ ಎಳೆದ ಘಟನೆ ಸಾಕಷ್ಟಿದೆ. ಇದೀಗ ಯುವತಿ ರೀಲ್ಸ್ ಮಾಡಲು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಹತ್ತಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈಕೆಯ ಡ್ಯಾನ್ಸ್‌ಗೆ ಕಾರಿನ ಗಾಜು ಒಡೆದಿದೆ. 

ಹೆಚ್ಚು ಕಮೆಂಟ್, ಲೈಕ್ಸ್ ಹಾಗೂ ವೈರಲ್‌ಗಾಗಿ ಹಲವರು ರೀಲ್ಸ್ ಹಿಂದೆ ಬಿದ್ದಿದ್ದಾರೆ. ಹುಚ್ಚಾಟ, ಅಪಾಯಾಕಾರಿ ಸ್ಟಂಟ್ ಮೂಲಕ ಗಮನಸೆಳೆಯಲು ಯತ್ನಿಸುತ್ತಾರೆ. ಹಲವು ಬಾರಿ ಈ ರೀತಿಯ ಅಪಾಯಾಕಾರಿ ಸ್ಟಂಟ್ ಎಡವಟ್ಟಿನಲ್ಲಿ ಅಂತ್ಯಗೊಂಡಿದೆ. ಇದೀಗ ಯುವತಿ ಟಿಕ್‌ಟಾಕ್ ವಿಡಿಯೋಗಾಗಿ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹತ್ತಿ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಈಕೆ ಕಾರಿನ ಮೇಲೆ ಹತ್ತುತ್ತಿದ್ದಂತೆ ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಪುಡಿಯಾಗಿದೆ. ಇತ್ತ ಕಾರಿನ ಟಾಪ್ ಕೂಡ ಡ್ಯಾಮೇಜ್ ಆಗಿದೆ. ಈ ವಿಡಿಯೋ ವೈರಲ್ ಆಗಿದೆ.

ಪಿಂಕ್ ಟಾಪ್ ಹಾಗೂ ವೈಟ್ ಸ್ಕರ್ಟ್ ತೊಟ್ಟಿ ಯುವತಿ ವಿಶೇಷವಾಗಿ ರೀಲ್ಸ್ ಮಾಡಿ ಹೆಚ್ಚು ವೈರಲ್ ಆಗಲು ಯತ್ನಿಸಿದ್ದಾಳೆ. ಈ ಯುವತಿಯ ಉದ್ದೇಶ ಈಡೇರಿದೆ. ಈಕೆಯ ಡ್ಯಾನ್ಸ್ ಅಥವಾ ಕ್ರಿಯೆಟಿವಿಟಿಯಿಂದ ಈ ವಿಡಿಯೋ ವೈರಲ್ ಆಗಿಲ್ಲ. ಬದಲಾಗಿ ದುಬಾರಿ ಲ್ಯಾಂಬೋರ್ಗಿನಿ ಕಾರಿನ ಗಾಜು ಒಡೆದ ಕಾರಣ ಈ ವಿಡಿಯೋ ವೈರಲ್ ಆಗಿದೆ.

KSRTC ಬಸ್‌ನಲ್ಲಿ ರೀಲ್ಸ್‌ ಶೋಕಿ, ಬಸ್‌ ಗೇರ್‌ ಕಿತ್ತೆಸೆಯಲು ಮುಂದಾದ ಯುವಕ!

ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರಿನ ಮುಂಭಾಗದಿಂದ ಓಡಿ ಬಂದ ಯುವತಿ, ನೇರವಾಗಿ ಕಾರಿನ ಮೇಲೆ ಹತ್ತಿದ್ದಾಳೆ. ಮುಂಭಾಗದ ಗಾಜಿನ ಮೇಲೆ ಹತ್ತಿ ಟಾಪ್ ಮೇಲೆ ಡ್ಯಾನ್ಸ್ ಮಾಡಲು ಆರಂಭಿಸಿದ್ದಾಳೆ. ಆದರೆ ಕಾರಿನ ವಿಂಡ್‌ಶೀಲ್ಡ್ ಮೇಲೆ ಕಾಲಿಡುತ್ತಿದ್ದಂತೆ ಲ್ಯಾಂಬೋರ್ಗಿನಿ ಕಾರಿನ ಗಾಜು ಒಡೆದಿದೆ. ಆದರೂ ಆಕೆ ವಿಚಲಿತಳಾಗದೆ ಡ್ಯಾನ್ಸ್ ಮಾಡಿದ್ದಾಳೆ. ಇದರಿಂದ ಕಾರಿನ ಟಾಪ್ ಕೂಡ ಡ್ಯಾಮೇಜ್ ಆಗಿದೆ.

ಯುವತಿ ತನ್ನ ಪ್ಲಾನ್ ಪ್ರಕಾರ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ಜೊತೆಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಈಕೆ ಈ ವಿಡಿಯೋದಿಂದ ಎಷ್ಟು ಸಂಪಾದಿಸಿದ್ದಾಳೆ ಗೊತ್ತಿಲ್ಲ, ಆದರೆ ಅದಕ್ಕಿಂತ ದುಪ್ಪಟ್ಟು ಕಾರಿನ ಗಾಜು ರೇಪೇರಿಗೆ ನೀಡಿರುತ್ತಾಳೆ ಎಂದು ಕಮೆಂಟ್ ಮಾಡಿದ್ದಾರೆ.

ಲ್ಯಾಂಬೋರ್ಗಿನಿ ಕಾರು ದುಬಾರಿ ಹಾಗೂ ಐಷಾರಾಮಿ ಕಾರು. ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರಿನ ಬೆಲೆ 3.22 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತಿದ್ದು, 8.89 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ವರೆಗಿದೆ. ಇದರ ಬಿಡಿ ಭಾಗಗಳು ಕೂಡ ಅತ್ಯಂತ ದುಬಾರಿಯಾಗಿದೆ. ವಿಂಡ್‌ಶೀಲ್ಡ್ ರೀಪ್ಲೇಸ್ ಮಾಡಲು ಲಕ್ಷ ಲಕ್ಷ ರೂಪಾಯಿ ವೆಚ್ಚ ಮಾಡಬೇಕು.

ಬೆಂಗಳೂರು: ರೀಲ್ಸ್‌ ಮಾಡಲು ಕಪ್ಪು ಬಣ್ಣದ 29 ಡಿಯೋ ಸ್ಕೂಟರ್‌ ಕಳುವು, ಮೂವರ ಬಂಧನ